ಹೊಳಲಗುಂದಿ ಸಾಯಿಬಣ್ಣನವರ ತತ್ವಪದಗಳು

Author : ದೇವೇಂದ್ರಪ್ಪ ಜೆ. (ಜಾಜಿ ದೇವೇಂದ್ರಪ್ಪ)

Pages 312

₹ 60.00




Year of Publication: 2017
Published by: ಕನಕದಾಸ ಅಧ್ಯಯನ ಕೇಂದ್ರ
Address: ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, 2ನೇ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು
Phone: 0802277314

Synopsys

ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಅಭಿವ್ಯಕ್ತಿಯ ಭಾಗವಾಗಿರುವ ತತ್ವಪದಕಾರರ ತತ್ವಪದಗಳನ್ನು ಪರಿಚಯಿಸುವ ಹೊಸ ಪ್ರಯತ್ನ ಈ ಕೃತಿಯಲ್ಲಾಗಿದೆ. ಕನ್ನಡದ ಪ್ರಮುಖ ತತ್ವಪದಕಾರರಲ್ಲಿ ಒಬ್ಬರಾದ ಹೊಳಲಗುಂದಿ ಸಾಹಿಬಣ್ಣ ತಾತನವರ ಕುರಿತು ಅವರ ತತ್ವಪದಗಳು, ಕರ್ನಾಟಕ ಆಂಧ್ರಪ್ರದೇಶದಲ್ಲೆಲ್ಲಾ ಶಿಷ್ಯರನ್ನು ಹೊಂದಿದ್ದ ಇವರು ಎರಡೂ ರಾಜ್ಯಗಳ ಜನರನ್ನು ಜಾಗೃತರಾಗಿಸಿದ ಬಗೆ ಎಲ್ಲವನ್ನು ಈ ಕೃತಿಯಲ್ಲಿ ಎಳೆಎಳೆಯಾಗಿ ಬಿಡಿಸಿಡಲಾಗಿದೆ. 

ಧಾರ್ಮಿಕ ಸಂಘರ್ಷದ ಕಾಲಾವಧಿಯಲ್ಲಿ ಅದರಲ್ಲಿಯೂ ಹೈದ್ರಬಾದ್ ನಿಜಾಮರ ಕಾಲಾವಧಿಯಲ್ಲಿ ಆಂಧ್ರದ ಕರ್ನೂಲು-ಅನಂತಪುರ ಮತ್ತು ಕರ್ನಾಟಕದ ಗಡಿಭಾಗದಲ್ಲಾದ ಸಮುದಾಯಗಳ ನಡುವಣ ತೀವ್ರತರವಾದ ತಲ್ಲಣಗಳಿಗೆ ಸಾಯಿಬಣ್ಣನವರ ತಾತ್ವಕ ನೆಲೆಗಟ್ಟು ಸಾಂತ್ವಾನವನ್ನು ಹೇಳಿದೆ. ಹಿಂದೂ ಮತ್ತು ಮುಸಲ್ಮಾನರ ನಡುವಣ ವೈರುಧ್ಯವನ್ನು ಸಂಘರ್ಷವೆಂದು ಹೇಳಲು ಹೋರಟ ಸಾಯಿಬಣ್ಣನಿಗೆ ಎದುರಾದ ಸಮಸ್ಯೆಗಳು ಇಂತಹ ಸಾಮಾಜಿಕ ಸಮಕಾಲೀನ ತಲ್ಲಣಗಳೇ ತತ್ವಪದಗಳ ಹುಟ್ಟಿಗೆ ಕಾರಣವಾದ ಬಗೆ, ಸಾಯಿಬಣ್ಣನ ಸಮಾನತೆ, ಸೋದರತ್ವ ಸಾರುವ  ತತ್ವಪದಗಳು, ಪ್ರಸ್ತುತ ಸಂದರ್ಭಕ್ಕೆ ತತ್ವಪದಗಳ ಅಗತ್ಯ ಮುಂತಾದವನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ಎರಡು ರಾಜ್ಯಗಳ ಭಾವಬಂಧ, ತತ್ವಪದ ಹಾಗೂ ಸೂಫಿಗೀತೆಗಳ ಪರಂಪರೆ, ಮಾನವೀಯ ಮೌಲ್ಯಗಳ ಪರವಾದ ಹೋರಾಟ ಇವೆಲ್ಲವೂ ಈ ಕೃತಿಯಲ್ಲಿ ನಿಮ್ಮ ಅನುಭವಕ್ಕೆ ಬರುತ್ತದೆ.

About the Author

ದೇವೇಂದ್ರಪ್ಪ ಜೆ. (ಜಾಜಿ ದೇವೇಂದ್ರಪ್ಪ)
(02 November 1976)

ಜಾಜಿ ದೇವೇಂದ್ರಪ್ಪ ಎಂದೇ ಖ್ಯಾತರಾಗಿರುವ ಕವಿ, ವಿಮರ್ಶಕ ಡಾ.ದೇವೇಂದ್ರಪ್ಪ ಜೆ ಅವರು ಮೂಲತಃ ಬಳ್ಳಾರಿಯವರು. ತಂದೆ ಜಾಜಿ ಚೆನ್ನಬಸಪ್ಪ, ತಾಯಿ ನೀಲಮ್ಮ. ಸದ್ಯ ಗಂಗಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಜಾಜಿ ದೇವೇಂದ್ರಪ್ಪನವರು, ಸಾಹಿತ್ಯದ ಹಲವು ವಿಭಾಗಗಳಲ್ಲಿ ಕೃಷಿ ಮಾಡಿದ್ದಾರೆ. ಗುಲ್ಪರ್ಗ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಕನ್ನಡದಲ್ಲಿ ಎಂ.ಎ ಪದವಿ ಪಡೆದಿರುವ ಅವರು ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಆಂಧ್ರ- ಕರ್ನಾಟಕ ಗಡಿಭಾಗದ ಸ್ಥಳನಾಮಗಳು ಎಂಬ ವಿಷಯದಡಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ದೇವೇಂದ್ರಪ್ಪನವರು ಹಳಗನ್ನಡ, ಮಧ್ಯಕಾಲೀನ ಕನ್ನಡ, ...

READ MORE

Related Books