ಸ್ಥಿತಪ್ರಜ್ಞ ದರ್ಶನ

Author : ಸಾಲಿ ರಾಮಚಂದ್ರರಾಯ

Pages 168

₹ 140.00




Year of Publication: 2015
Published by: ಅನನ್ಯ ಪ್ರಕಾಶನ
Address: 'ಹೂಮನೆ’, ಶ್ರೀದೇವಿ ನಗರ, ವಿದ್ಯಾಗಿರಿ ಧಾರವಾಡ - 560004
Phone: 08362462718

Synopsys

ಆಚಾರ್ಯ ವಿನೋಬಾ ಅವರ "ಸ್ಥಿತಪ್ರಜ್ಞ ದರ್ಶನ"ವನ್ನು ಸಾಲಿ ರಾಮಚಂದ್ರರಾಯರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ್ದರು. ಸಾಲಿಯವರ ಮರಾಠೀ ಮತ್ತು ಸಂಸ್ಕೃತ ಭಾಷಾ ಪಾಂಡಿತ್ಯ, ಭಗವದ್ಗೀತೆಯ ಅಧ್ಯಯನ, ಶ್ರೀ ಕೃಷ್ಣ ಭಕ್ತಿ, ವಿನೋಬಾ ಗೌರವ ಹಾಗೂ ಕನ್ನಡ ಪಾರಂಗತತೆಗಳೆಲ್ಲವೂ ಪ್ರಸ್ತುತ ಈ ಕೃತಿಯಲ್ಲಿ ಇರುವ ಮುಖ್ಯವಾದ ಅಂಶಗಳು.

ವಿನೋಬಾ ಅವರ ಭಗವದ್ಗೀತೆಯ ಅವಲೋಕನದ ಸ್ಥಿತಪ್ರಜ್ಞನ ಲಕ್ಷಣಗಳಲ್ಲಿನ ದರ್ಶನವನ್ನು ಸಾರಿ ಹೇಳಿದ್ದಾರೆ. ಭಗವದ್ಗೀತೆಯ ಬಹುಚರ್ಚಿತ  ವ್ಯಾಖ್ಯಾನವನ್ನು ಇಲ್ಲಿ ನೀಡಿದ್ದಾರೆ. ಹದಿನೆಂಟು ವ್ಯಾಖ್ಯಾನಗಳನ್ನೊಳಗೊಂಡ ಈ ಪುಸ್ತಕದ ರಚನೆಯಲ್ಲಿ ಶಬ್ದದ ಸ್ವಾರಸ್ಯ, ಜ್ಞಾನ ಮತ್ತು ಧ್ಯಾನಗಳಿಗಿರುವ ಬೇಧಗಳು, ಅರ್ಥವ್ಯತ್ಯಾಸ, ಶ್ಲೋಕದ ಸಾರ, ವ್ಯಾಖ್ಯಾನ, ನಿರೂಪಣೆ, ಸ್ಥಿತಪ್ರಜ್ಞ ದರ್ಶನದಲ್ಲಿ 7 ಅಧಿಕರಣ, 18 ವ್ಯಾಖ್ಯಾನ, 44 ಖಂಡ, ಮತ್ತು 200 ಪರಿಚ್ಛೇದಗಳಿವೆ.

About the Author

ಸಾಲಿ ರಾಮಚಂದ್ರರಾಯ
(10 October 1888 - 31 October 1978)

’ಕನ್ನಡ ನೆಲದ ಪುಲ್ಲೆನಗೆ ಪಾವನ ತುಳಸಿ, ಕನ್ನಡದ ಕಲ್ಲೆನಗೆ ಶಾಲಗ್ರಾಮ ಶಿಲೆ’ ಎಂದು ಹಾಡಿದ ಕವಿ ಸಾಲಿ ರಾಮಚಂದ್ರರಾಯರು ಕನ್ನಡದ ನವೋದಯದ ಪ್ರಮುಖ ಕವಿಗಳಲ್ಲಿ ಒಬ್ಬರು. ಕನ್ನಡದ ಮೊದಲ ವಿಲಾಪಗೀತೆ ರಚಿಸಿದ ಹಿರಿಮೆ ಅವರದು. ನವೋದಯದ ಆರಂಭದ ದಿನಗಳಲ್ಲಿಯೇ ರಾಮಾಯಣ ಮಹಾಕಾವ್ಯ ರಚನೆಗೆ ಮುಂದಾಗಿದ್ದ ಸಾಲಿಯವರು ಎರಡು ಕಾಂಡಗಳನ್ನು ಪ್ರಕಟಿಸಿದ್ದರು. ಅದಕ್ಕೆ ಬಂದ ’ಸಾಲಿ ರಾಮಾಯಣ’ ಎಂಬ ಟೀಕೆಯಿಂದ ಬೇಸತ್ತು ನಂತರದ ಸಂಪುಟಗಳನ್ನು ಪ್ರಕಟಿಸಲು ಹಿಂದೇಟು ಹಾಕಿದರು. ನಂತರದ ದಿನಗಳಲ್ಲಿ ಅಪ್ರಕಟಿತ ರಾಮಾಯಣದ ಹಸ್ತಪ್ರತಿಗಳು ಗೆದ್ದಲುಗಳಿಗೆ ಆಹಾರವಾದಾಗ ತೀವ್ರ ನೋವು ಅನುಭವಿಸಿದರು. ಅವರ ಸಮಗ್ರ ಕವಿತೆಗಳನ್ನು ಡಾ. ...

READ MORE

Related Books