ತೀರ್ಥಕ್ಷೇತ್ರ ಮಹಿಮೆ

Author : ದೊಡ್ಡಿ ಸುಧಾಬಾಯಿ

Pages 82

₹ 130.00




Year of Publication: 1998
Published by: ವೆಂಕಟಚಂದ್ರ ಪ್ರಕಾಶನ
Address: ಯೋಗ ಪ್ರಸಾದ, ಶಿವರಾಮ ಮಾರ್ಗ

Synopsys

‘ತೀರ್ಥಕ್ಷೇತ್ರ ಮಹಿಮೆ’ ಕೃತಿಯು ದೊಡ್ಡಿ ಸುಧಾಬಾಯಿ ಅವರ ಧಾರ್ಮಿಕ ಕ್ಷೇತ್ರಗಳ ಅಧ್ಯಯನ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಆಗಮವು, ಅತಿ ವಿಚಿತ್ರವು, ಅದ್ಭುತವೂ ಸತ್ಯವೂ ಆದ ವಿತ್ಯವನ್ನು ನಿರ್ಮಿಸಿರುವುದರಿಂದಲೇ ಕ್ಷರಾಕ್ಷರಕ್ಕೆ ಉತ್ತಮ ಪುರುಷನಾದ ಶ್ರೀ ಮನ್ನಾರಾಯಣನು ಮಹಾ ಮಹಿಮೋಪೇತನು, ನಿರ್ದೊಷನು, ಅನಂತಾನಂತಗುಣ ಪರಿಪೂರ್ಣನೆಂದನಿಸಿರುವನು. ಇಂತಹ ವೇದ ಸ್ವರೂಪವನ್ನು ಜ್ಞಾನ ಭಕ್ತಿ ವೈರಾಗ್ಯಾದಿಗಳಿಂದ ಮತ್ತು ಶಾಸ್ವಾರ್ಥದಿಂದ ತಿಳಿದು ಕೊಳ್ಳುವುದು ಬಹಳ ಶ್ರೇಷ್ಟವಾದದ್ದು, ಮಿಕ್ಕಿದೆಲ್ಲಾ ನಶ್ವರವಾದದ್ದು, ಹರಿಭಕ್ತಿಯ ಮುಖ್ಯವಾದದ್ದಾದರೂ ಧರ್ಮ ಸ್ವರೂಪನಾದ ಭಗವಂತನಿಂದಲೇ ಧರ್ಮವು ಪ್ರಣೀತವಾದದ್ದು, ಇದರ ಸಂಪೂರ್ಣ ಸಾಕನ ತಿಳಿಯಲು ಬ್ರಹ್ಮಾದಿ ದೇವತೆಗಳು, ಋಷಿಗಳು, ಸಿದ್ಧರು ಮೊದಲಾದವರಿಗೆ ತಕ್ಕವಿಲ್ಲದ ಮೇಲೆ ಮಿಕ್ಕವರ ಪಾಡೇನು? ಸಪ್ತ ದ್ವೀಪಗಳುಳ್ಳ ಭೂ ಮಂಡಲದ ನವಖಂಡಗಳಲ್ಲಿ ಭರತ ಖಂಡವೇ ಕರ್ಮ ಸಾಧನೆ ಭೂಮಿ, ಅಧಿಕಾರಿ ಅನಧಿಕಾರಿ ದೇವತೆಗಳು ಭಾರತದಲ್ಲಿ ಪುಣ್ಯ ಸಾಧನೆ ಮಾಡಿಕೊಳ್ಳಬೇಕಾಗಿ ಒಂದು ಅಂತದಿಂದ ಅವತಾರ ಮಾಡಿ ತಮ್ಮ ಸಾಧನೆ ಮಾಡಿಕೊಳ್ಳುತ್ತಾರೆ. ಇಂತಹ ಪವಿತ್ರವಾದ ಭರತ ಭೂಮಿಯಲ್ಲಿ ಅನಂತ ಜನ್ಮಗಳು ಜೀವರಿಗೆ ಅವರ ಕರ್ಮಾನುಸಾರ ಬರುತ್ತವೆ. ಆದ್ದರಿಂದ ಶ್ರೇಷ್ಟವಾದ ವೈಷ್ಣವ ಜನ್ಮ ಬಂದಾಗ ಅದರಲ್ಲೂ ಗಾಳಿ ಬಂದಾಗ ತೂರಿಕೊಳ್ಳಿ ಎಂಬಂತೆ ಬ್ರಾಹ್ಮಣ ಶರೀರ ಬಂದಾಗ ನಿತ್ಯ ನೈಮಿತ್ಮಕ ಕರ್ಮಗಳನ್ನಾಚರಿಸಿ ಭಗವಂತನಲ್ಲಿ ಜ್ಞಾನ ಭಕ್ತಿ ವೈರಾಗ್ಯಾದಿಗಳಿಂದ ಶ್ರೀ ಹರಿಯನ್ನು 'ನಂಬಿ ಸಕಲ ಸತ್ಕರ್ಮಗಳನ್ನು ಭಗವಂತನಿಗೆ ಅರ್ಪಿಸಬೇಕು. ತೀರ್ಥಯಾತ್ರ ಪುಣ್ಯ ನದಿಗಳ ಸ್ನಾನ ವಿಹಿತ ಧರ್ಮಾನುಷ್ಟಾನ ಮತ್ತು ನಿಷ್ಕಾಮ ಕರ್ಮ ಇವುಗಳಿಂದ ಅಂತಃ ಕರಣ ಶುದ್ಧಿಯಾಗಿ ಕ್ಷೇತ್ರಜ್ಞನಾದ ಪರಮಾತ್ಮನಲ್ಲಿ ನಿರ್ಮಲ ಭಕ್ತಿ ಹುಟ್ಟಿ, ಮೋಕ್ಷ ಮಾರ್ಗಕ್ಕೆ ಸಾಧನವಾಗುವುದು, ಶ್ರೀಮಧ್ಯಸಿದ್ಧಾಂತದ ಆಪೂರ್ವ ವೈಶಿಷ್ಟ್ಯಗಳಲ್ಲಿ ಅತಿ ಮುಖ್ಯವಾದದ್ದು ವಿಷ್ಣು ಸರ್ವೋತುಮತ್ಯ ವಾಯುಜಿವೋತ್ತುಮತ್ವ, ಭಯ ಲೋಭ ಮೋಹ ಮೊದಲಾದವುಗಳಿಂದ ಎಷ್ಟು ಕಷ್ಟ ಬಂದರು ಧರ್ಮಮಾತ್ರ ಬಿಡಬಾರದು. ಧಮೋರಕ್ಷತಿ ರಕ್ಷತಃ | ಆಂದಿದ್ದಾರೆ ಪುರಂದರದಾಸರು.

About the Author

ದೊಡ್ಡಿ ಸುಧಾಬಾಯಿ
(23 December 1923)

ಕೀರ್ತನೆಗಳಲ್ಲಿ ಬಹುವಾಗಿ ಒಲವುಳ್ಳ ದೊಡ್ಡಿ ಸುಧಾಬಾಯಿ 1923 ಡಿಸೆಂಬರ್ 23 ರಂದು ಆಂಧ್ರಪ್ರದೇಶದ ಕಡಪ ಜಿಲ್ಲೆಯ ಕುಂಪಣಿಪುರದಲ್ಲಿ ಜನಿಸಿದರು.  ’ಹರಿಗುರು ಭಜನ ಸುಧ’ ಭಜನೆ, ’ಕೀರ್ತನ ಮಂಜರಿ’ ಕೀರ್ತನೆ, ಶ್ರೀಕೃಷ್ಣ ಚರಿತ ಮಧುರಾಮೃತ, ಪರಮಾತ್ಮನ ಏಕವಿಂಶತಿ ರೂಪಗಳು, ಶ್ರೀಹರಿವಾಯುಗಳ ಲೀಲಾವೈಭವ, ಇತಪಾರಿಜಾತ, ಪತಿವ್ರತ ಸ್ತ್ರೀಯರ ಕಥೆಗಳು, ಷೋಡಶ ಕರ್ಮಗಳು ಇತ್ಯಾದಿ ರಚಿಸಿದ್ಧಾರೆ. ...

READ MORE

Related Books