ಮನ್ಥನ

Author : ವಿ.ಎಂ. ಉಪಾಧ್ಯಾಯ

Pages 456

₹ 298.00




Published by: ಶ್ರೀಕೃಷ್ಣ ಆಶ್ರಮ
Address: ಮೈಸೂರು

Synopsys

‘ಮನ್ಥನ’ ಕೃತಿಯು ವಿ. ಎಂ ಉಪಾಧ್ಯಾಯ ಅವರ ಶಾಸ್ತ್ರಗ್ರಂಥ ಕೃತಿಯಾಗಿದೆ. ಅದೈತ ಸಿದ್ಧಾಂತದ ಅನುಸಾರವಾಗಿ ಸತ್ಯದ ಅರ್ಥವಿವರಣೆಯಿಂದ ಪ್ರಾರಂಭಿಸಿ ಬ್ರಹ್ಮ ಅಥವಾ ಆತ್ಮನ ಸತ್ಯತ್ಯವನ್ನು ಶ್ರುತಿಪ್ರಮಾಣದಿಂದ ನಿಶ್ಚಯಿಸಲಾಗಿದೆ. ವಿಶ್ವದ ಸೃಷ್ಟಿ, ಸ್ಥಿತಿ ಮತ್ತು ಲಯಗಳ ಕುರಿತಾದ ಚಾರ್ವಾಕ, ಜೈನ, ಬೌದ್ರ, ಸಾಂಖ್ಯ, ಯೋಗ, ವೈಶೇಷಿಕ, ನ್ಯಾಯ, ಪೂರ್ವಮೀಮಾಂಸಾ ಶಾಸ್ತ್ರಗಳ ಪ್ರತಿಪಾದನೆಗಳಲ್ಲಿ ಇರುವ ದೋಷಗಳನ್ನು ಖಂಡಿಸಿ, ಬ್ರಹ್ಮ ಅಥವಾ ಆತ್ಮನೇ ವಿಶ್ವದ ಸೃಷ್ಟಿ, ಸ್ಥಿತಿ ಮತ್ತು ಲಯಗಳಿಗೆ ಕಾರಣನಾಗಿದ್ಯಾನೆ ಎನ್ನುವ ಅದೈತ ಸಿದ್ಧಾಂತವನ್ನು ಮಂಡಿಸಲಾಗಿದೆ. ಜಗತ್ತು ಎಂದರೇನು ಎನ್ನುವುದನ್ನು ಅವಸ್ಥಾತ್ರಯ ಪರಾಮರ್ಶೆ ಮಾಡಿ ಜಗತ್ತಿನ ಉತ್ಪತ್ತಿ ಸ್ಥಿತಿ ಮತ್ತು ಲಯಗಳು ಆತ್ಮನಿಂದಲೇ ಆಗುತ್ತವೆ ಎನ್ನುವುದನ್ನು ಸಂದೇಹಾತೀತವಾಗಿ ತೋರಿಸಲಾಗಿದೆ.

ಆಧುನಿಕ ಮನಶ್ಯಾಸ್ತ್ರಜ್ಞರು ಹೇಳುವ ಮನಸ್ಸಿನ ಕುರಿತಾದ ವಿಚಾರಗಳಲ್ಲಿರುವ ದೋಷಗಳನ್ನು ಚರ್ಚಿಸಿ ಭಾರತೀಯ ಶಾಸ್ರೋಕ್ತ ಕ್ರಮದಲ್ಲಿ ಮನಸ್ಸಿನ ಅರ್ಥವಿವರಣೆಯನ್ನು ಮಾಡುವ ಮೂಲಕ ಮನಸ್ಸಿಗೂ ಜಗತ್ತಿಗೂ ಇರುವ ಅವಿನಾಭಾವ ಸಂಬಂಧವನ್ನು ವಿವರಿಸಲಾಗಿದೆ ಜೀವನು ಬ್ರಹ್ಮನೇ ಎಂದು ಪ್ರತಿಪಾದಿಸಿ ಜೀವನ ಅಮರತ್ವವನ್ನು ತೋರಿಸಲಾಗಿದೆ. ಲೌಕಿಕ ಜ್ಞಾನಕ್ಕೂ ಬ್ರಹ್ಮಜ್ಞಾನಕ್ಕೂ ಇರುವ ವ್ಯತ್ಯಾಸವನ್ನು ಸ್ಪುಟಗೊಳಿಸಿ, ಜ್ಞಾನಿಗೆ ಮರಣವಿಲ್ಲ ಎನ್ನುವುದನ್ನು ಸಕಾರಣವಾಗಿ ವಿವರಿಸಲಾಗಿದೆ.

About the Author

ವಿ.ಎಂ. ಉಪಾಧ್ಯಾಯ

ಲೇಖಕ ವಿ. ಎಂ ಉಪಾಧ್ಯಾಯ ಅವರು ಮೂಲತಃ ಭಟ್ಕಳದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪದವೀಧರರು. ಕೊಲ್ಲಾಪುರ ಶಿವಾಜಿ ವಿಶ್ವವಿದ್ಯಾಲಯದಿಂದ ಎಂ. ಎ ಪದವೀಧರರು. ವೃತ್ತಿಯಿಂದ ಶಿಕ್ಷಕರು. ಕೃತಿಗಳು : ಪೂರ್ಣಸತ್ಯ, ಮರಣ ಪರಲೋಕ ಪುನರ್ಜನ್ಮ, ಬ್ರಹ್ಮಸೂತ್ರದ ಅಧಿಕರಣಪಂಚದ ಶಾಂಕರಭಾಷ್ಯದ ನಿದಿಧ್ಯಾಸ, ಆತ್ಮಾನ್ವೇಷಣೆ, ಮನ್ಥನ, ಅದ್ವೈತಾನುಭವ, ಅದ್ವೈತಾನುಸಂಧಾನ ...

READ MORE

Related Books