ಮರಣ ಪರಲೋಕ ಪುನರ್ಜನ್ಮ

Author : ವಿ.ಎಂ. ಉಪಾಧ್ಯಾಯ

Pages 218

₹ 124.00




Published by: ಶ್ರೀಕೃಷ್ಣ ಆಶ್ರಮ
Address: ಮೈಸೂರು

Synopsys

`ಮರಣ ಪರಲೋಕ ಪುನರ್ಜನ್ಮ’ ಕೃತಿಯು ವಿ.ಎಂ ಉಪಾಧ್ಯಾಯ ಅವರ ಶಾಸ್ತ್ರಗ್ರಂಥ ಕೃತಿಯಾಗಿದೆ. ಅಶರೀರತ್ನವೇ ಮೋಕ್ಷವು, ಜಿಜ್ಞಾಸುಗಳು ಆತ್ಮಜ್ಞಾನವನ್ನು ಹೊಂದಬೇಕಾದರೆ ಈಗಾಗಲೇ ಇರುವ ಶರೀರವೇ ತಾನು ಎಂಬ ಜ್ಞಾನವನ್ನು ತ್ಯಜಿಸಬೇಕಾಗುವುದು. ಶರೀರವಿರುವುದರಿಂದಲೇ ಮರಣಭಯವು ಇರುವುದು. ಮರಣಭಯಕ್ಕಿಂತ ಮಿಕ್ಕಿದ ಭಯವಿಲ್ಲ ಮರಣಭಯದಿಂದ ಪಾರಾಗಲು ಇರುವ ಮಾರ್ಗವೆಂದರ ಮರಣ ಎಂದರೇನು? ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

ಪರಲೋಕಗಳು ಇಲ್ಲ ಎಂದು ವಾದಿಸುವವರ ವಾದಗಳನ್ನು ವಿವರಿಸಿ ನಂತರ ಆ ವಾದಗಳನ್ನು ಖಂಡಿಸಿ ಪರಲೋಕಗಳಿವೆ ಎಂದು ಶಾಸ್ತ್ರಾನುಸಾರವಾಗಿ ಪ್ರತಿಪಾದಿಸಲಾಗಿದೆ. ಹಾಗೆಯೇ, ಪುನರ್ಜನ್ಮವಿಲ್ಲ ಎನ್ನುವವರ ವಾದಗಳನ್ನು ವಿವರಿಸಿ ಆ ವಾದಗಳನ್ನು ಶಾಸ್ರೋಕ್ತ ಕ್ರಮದಲ್ಲಿ ಖಂಡಿಸಿ ಪುನರ್ಜನ್ಮಗಳಿವೆ ಎಂದು ವಿವರಿಸಲಾಗಿದೆ.

About the Author

ವಿ.ಎಂ. ಉಪಾಧ್ಯಾಯ

ಲೇಖಕ ವಿ. ಎಂ ಉಪಾಧ್ಯಾಯ ಅವರು ಮೂಲತಃ ಭಟ್ಕಳದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪದವೀಧರರು. ಕೊಲ್ಲಾಪುರ ಶಿವಾಜಿ ವಿಶ್ವವಿದ್ಯಾಲಯದಿಂದ ಎಂ. ಎ ಪದವೀಧರರು. ವೃತ್ತಿಯಿಂದ ಶಿಕ್ಷಕರು. ಕೃತಿಗಳು : ಪೂರ್ಣಸತ್ಯ, ಮರಣ ಪರಲೋಕ ಪುನರ್ಜನ್ಮ, ಬ್ರಹ್ಮಸೂತ್ರದ ಅಧಿಕರಣಪಂಚದ ಶಾಂಕರಭಾಷ್ಯದ ನಿದಿಧ್ಯಾಸ, ಆತ್ಮಾನ್ವೇಷಣೆ, ಮನ್ಥನ, ಅದ್ವೈತಾನುಭವ, ಅದ್ವೈತಾನುಸಂಧಾನ ...

READ MORE

Related Books