ಪ್ರಧಾನ ಉಪನಿಷತ್ತುಗಳ ತತ್ತ್ವ ವಿವೇಚನೆ

Author : ಗೋಪಾಲಕೃಷ್ಣ ಎನ್‌.ಭಟ್

Pages 270

₹ 320.00




Year of Publication: 2022
Published by: ತೇಜುಪಬ್ಲಿಕೇಷನ್ಸ್‌

Synopsys

ವೇದೋಪನಿಷತ್ತುಗಳ ಬೃಹದಾರಣ್ಯದಲ್ಲ ಸಿಲುಕಿ ಮಂಡೂಕದಂತೆ, ಕುಪ್ಪಳಿಸುತ್ತಾ, ಅಪೌರುಷೇಯಗಳನ್ನು ಕೇನಾಪಿ ವಿಧಾನೇನ ಅರಿಯುವ ಉತ್ಕರ ಇಚ್ಛೆಯನ್ನು ಹೊಂದಿ, ಮಿತ್ರಸಂಹಿತೆಯಲ್ಲಿ ಸಮಾನಸ್ಕಂಧರನ್ನು ಪ್ರಶ್ನಿಸುತ್ತಾ, ಈಶಪ್ರಾಯರಾದ ಗುರುಗಳ ಬುದ್ಧಿಖಾನೆಯಲ್ಲಿ ವಾಸವಾಗಿರುವ ವಿಷಯಗಳನ್ನೂ ಕೆದಕುತ್ತಾ, ಅರಿವಿನ ಶ್ವೇತವನ್ನೇರಿ, ಅಜ್ಞಾನದ ಅಶ್ವೇತವನ್ನು ಮಣಿಸುವುದರ ಮೂಲಕ ಸಗುಣರಾಗಬಯಸುವವರಿಗೆ ಈ ಕೃತಿಯು ಸಹಾಯಕವಾಗಿದೆ. ಮೂರ್ತವಾದುದನ್ನು ಅರಿಯಲು ಸಹ ಹಲವಾರು ನಿಘಂಟುಗಳನ್ನೋ ಗೂಗಲಮ್ಮನನ್ನೋ ಮೊರೆಹೋಗಬೇಕಾದ ಸಂದರ್ಭದಲ್ಲಿ ಅಮೂರ್ತವನ್ನು ಅರಿಯಬೇಕಾದರೆ ಅದರ ಗಾಢ ಅಧ್ಯಯನವನ್ನು ಕೈಗೊಂಡಿರುವ, ಸಂಸ್ಕೃತಸಾಗರದಲ್ಲಿ ಸಲಲಿಯವಾಸಿಯಂತ ಸರಾಗವಾಗಿ ಈಜಬಲ್ಲ ಪಂಡಿತರೊಬ್ಬರು ಈ ವಿಷಯಗಳ ಮೇಲೆ ಬೆಳಕು ಚೆಲ್ಲುವ ಅವಶ್ಯಕತೆಯಿತ್ತು. ಆ ಅವಶ್ಯಕತೆಯು ಇಲ್ಲಿ ಪೂರೈಸಲ್ಪಟ್ಟಿದೆ.

About the Author

ಗೋಪಾಲಕೃಷ್ಣ ಎನ್‌.ಭಟ್

ಗೋಪಾಲಕೃಷ್ಣ ಎನ್‌.ಭಟ್ (ಡಾ ಜಿ.ಎನ್.ಭಟ್ಟ) ಅವರು ಮಂಗಳೂರು ಕೆನರಾ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ಮುಖ್ಯಸ್ಥ .ಅಂತ‌ರ್‌ ವಿಷಯ ಸಂಸ್ಕೃತ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಸ್ಥಾಪಕ ನಿರ್ದೇಶಕ, ಪ್ರಾಂಶುಪಾಲರಾಗಿ ನಿವೃತ್ತಿಹೊಂದಿದ್ದಾರೆ.  ಹಲವಾರು ಸಂಘಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. 16 ಪಿಹೆಚ್ ಡಿ ಸಂಶೋಧಕರಿಗೆ ಯಶಸ್ವಿ ಮಾರ್ಗದರ್ಶಕರಾಗಿ, ಮಂಗಳೂರು ವಿ.ವಿ. ನಿನ್ನನ ಸ್ನಾತಕೋತ್ತರ ಅಧ್ಯಯನ ಮಂಡಳಿ ಅಧ್ಯಕ್ಷ, ಸದಸ್ಯರಾಗಿ, ಪ್ರಸ್ತುತ ತತ್ವಶಾಸ್ತ್ರ  ಅಧ್ಯಯನ ಮಂಡಳಿಯ ಪರಿಣತ ಬಾಹ್ಯ ಸದಸ್ಯರು ಹಾಗೂ ಸಂಸ್ಕೃತ ಸಂಶೋಧನ ಸಂಘಟನೆ ಅಧ್ಯಕ್ಷರಾಗಿದ್ದಾರೆ.  ಕೃತಿಗಳು : ತತ್ವ ದರ್ಶನ ಮತ್ತು ಆಧುನಿಕ ಆನ್ವಯಿಕತೆ,  ಪ್ರಧಾನ ಉಪನಿಷತ್ತುಗಳ ತತ್ವವಿವೇಚನೆ, ...

READ MORE

Related Books