ಬೆಳ್ಳಿತೆರೆ ಬೆಳಗಿದವರು

Author : ಅ.ನಾ. ಪ್ರಹ್ಲಾದರಾವ್

Pages 272
Year of Publication: 2007
Published by: ಸಿನೆಮಾ ಸಾಹಿತ್ಯ ಪ್ರಕಾಶನ
Address: ನಂ. 120, ಮೊದಲನೇ ಮಹಡಿ, ಬಳೇಪೇಟೆ, ಬೆಂಗಳೂರು - 560 053
Phone: 080 - 41225359

Synopsys

ಬೆಳ್ಳಿತೆರೆ ಬೆಳಗಿದವರು` ಪುಸ್ತಕ ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಸಾಧಕರ ಬಗ್ಗೆ ಮಾಹಿತಿಪೂರ್ಣ ಕೃತಿ. ಕನ್ನಡ ಚಲನಚಿತ್ರರಂಗದ 115 ಮಂದಿಯ ಬಗ್ಗೆ ಮಾಹಿತಿ ನೀಡಲಾಗಿದೆ. ಚಲನಚಿತ್ರ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಸಾಹಿತಿಗಳು, ಹಿನ್ನೆಲೆ ಗಾಯಕ ಗಾಯಕಿಯರು, ತಂತ್ರಜ್ಞರ ಬಗ್ಗೆ ಪರಿಚಯ ಲೇಖನಗಳು ಪುಸ್ತಕದಲ್ಲಿವೆ. ಕನ್ನಡ ಚಿತ್ರರಂಗಕ್ಕಾಗಿ ದುಡಿದವರನ್ನು ಗುರುತಿಸುವ ಪ್ರಯತ್ನದ ಜೊತೆ ಕನ್ನಡ ಚಿತ್ರರಂಗದ ತೆರೆಯ ಮೇಲೆ, ತೆರೆಯ ಹಿಂದೆ ದುಡಿಯುವ ಮೂಲಕ ಚಿತ್ರರಂಗವನ್ನು ಶ್ರೀಮಂತಗೊಳಿಸುತ್ತಾ ಬಂದ ವ್ಯಕ್ತಿ-ಶಕ್ತಿಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ. 

About the Author

ಅ.ನಾ. ಪ್ರಹ್ಲಾದರಾವ್
(24 July 1953)

ಅ.ನಾ.ಪ್ರಹ್ಲಾದರಾವ್‌ರವರು, ಕನ್ನಡದ ಪದಬಂಧ ಲೇಖಕರಲ್ಲಿ ಪ್ರಮುಖರು. ಇವರು ಕನ್ನಡದಲ್ಲಿ ಸುಮಾರು ನಲವತ್ತು ಸಾವಿರ ಪದಬಂಧಗಳನ್ನು ರಚಿಸಿದ್ದಾರೆ. ಇವರ ಪದಬಂಧಗಳು ಕನ್ನಡದ ಪ್ರಮುಖ ಪ್ರತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.ಭಾರತದ ಪ್ರಾದೇಶಿಕ ಭಾಷೆಗಳಲ್ಲಿಯೇ ಅತೀ ಹೆಚ್ಚು ಪದಬಂಧ ರಚಿಸುವ ಮೂಲಕ 2015, 2016 ಹಾಗೂ 2017ರ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸೇರಿಕೊಳ್ಳುವ ಮೂಲಕ ರಾಷ್ಟ್ರೀಯ ದಾಖಲೆ ಮಾಡಿದ ಕೀರ್ತಿ ಇವರದು. ಬೆಂಗಳೂರು, ಮಂಡ್ಯ ಹಾಗೂ ಕೋಲಾರದಲ್ಲಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ,ಪ್ರಜಾರತ್ನ, ಪದಬಂಧಬ್ರಹ್ಮ, ಪದಬಂಧಸಾಮ್ರಾಟ್, ಮುಂತಾದ ಬಿರುದುಗಳನ್ನು ನೀಡಿವೆ.  ...

READ MORE

Related Books