ಕಥೆ ಚಿತ್ರಕಥೆ ಸಂಭಾಷಣೆ ಜೋಗಿ

Author : ಜೋಗಿ (ಗಿರೀಶ್ ರಾವ್ ಹತ್ವಾರ್)

Pages 352

₹ 300.00




Year of Publication: 2018
Published by: ಸಾವಣ್ಣ ಎಂಟರ್ ಪ್ರೈಸಸ್
Address: ನಂ.57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 9036312786

Synopsys

ಲೇಖಕ ಜೋಗಿ ಅವರ ಸಿನಿಮಾ ಕುರಿತ ಕೃತಿ ‘ಕಥೆ ಚಿತ್ರಕಥೆ ಸಂಭಾಷಣೆ ಜೋಗಿ’. ಈ ಕೃತಿಗೆ ಖ್ಯಾತನಟ ಪ್ರಕಾಶ್ ರೈ ಬೆನ್ನುಡಿ ಬರೆದಿದ್ದಾರೆ. ಜೋಗಿಯವರ ಈ ಪುಸ್ತಕ ಸಿನಿಮಾ ಪ್ರೇಮಿಗಳಿಗೆ, ಸಿನಿಮಾ ಆಸಕ್ತರಿಗೆ ಮುಖ್ಯವಾಗುತ್ತದೆ. ಇಲ್ಲಿ ಪ್ರವಚನ ಇಲ್ಲ. ಪ್ರತಿಯೊಬ್ಬರೂ ತಮ್ಮ ದಾರಿಯ ಹುಡುಕಾಟದ ಕುರಿತು ಬರೆದಿದ್ದಾರೆ. ತಮ್ಮ ಸಿನಿ ಪ್ರಯಾಣವನ್ನು ದಾಖಲಿಸಿದ್ದಾರೆ. ಹೀಗಾಗಿ, ಇದು ಪ್ರತಿಯೊಬ್ಬರೂ ತಮಗೆ ತಾವೇ ಹೇಳಿಕೊಳ್ಳಬಹುದಾದ ಸ್ವಗತ. ಎಲ್ಲ ಹೊಸಪೀಳಿಗೆಯ ನಿರ್ದೇಶಕರು ಆಲೋಚಿಸುವ ಕ್ರಮದತ್ತ ಒಂದು ದಾರಿಯಂತಿದೆ. ಇಲ್ಲಿ ಯಾರೂ ಇದು ಸರಿ, ಇದು ತಪ್ಪು ಅಂತ ಹೇಳುತ್ತಿಲ್ಲ. ಇದು ಅರಳುವ ಕ್ರಿಯೆಯನ್ನು ಹಿಡಿಯುವ ಪರಿ. ಆಗಲೇ ನೋಡಿರುವುದನ್ನು ಬಿಟ್ಟು, ಇವತ್ತಿನ ಮನಸ್ಸು ಹೇಗೆ ಯೋಚಿಸುತ್ತದೆ. ಅದನ್ನು ದುಡಿಸಿಕೊಳ್ಳುವುದು ಹೇಗೆ ಅನ್ನುವುದನ್ನು ಗಮನಿಸಿರುವ ಜೋಗಿ, ಆ ಪ್ರಕ್ರಿಯೆಗಳನ್ನು ಈ ಕೃತಿಯ ಮೂಲಕ ವಿಶ್ಲೇಷಿಸಿದ್ದಾರೆ.

About the Author

ಜೋಗಿ (ಗಿರೀಶ್ ರಾವ್ ಹತ್ವಾರ್)
(16 November 1965)

ಜೋಗಿ, ಜಾನಕಿ, ಎಚ್‌. ಗಿರೀಶ್‌ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್‌ 16ರಂದು. ಮೂಲತಃ ಸೂರತ್ಕಲ್‌ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ಹಾಯ್‌ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ...

READ MORE

Related Books