ಆಫ್ ದಿ ರೆಕಾರ್ಡ್

Author : ಗಣೇಶ್‌ ಕಾಸರಗೋಡು

Pages 182

₹ 120.00




Year of Publication: 2011
Published by: ಅಮ್ಮ ಪ್ರಕಾಶನ
Address: 37/19, ನಾಯ್ಡು ಲೇಜೌಟ್, ರಾಜೀವ್ ಗಾಂಧಿ ರಸ್ತೆ, ಜರಗನಹಳ್ಳಿ ಬೆ<ಗಳೂರು -

Synopsys

ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅವರ ’ಆಫ್ ದಿ ರೆಕಾರ್ಡ್‌’ ಚೌಕಟ್ಟಿಲ್ಲದ ಚಿತ್ರಪಟಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ. ಈ ಪುಸ್ತಕ ಕನ್ನಡ ಚಿತ್ರರಂಗದ ಸೂಕ್ಷ್ಮ ಸಂಗತಿಗಳನ್ನು ಬಿಚ್ಚಿಡುತ್ತದೆ. ಚಿತ್ರರಂಗದವರ ಬಗ್ಗೆ ಓದುವಂತೆ ಬರೆದಿರುವ ಗಣೇಶ್ ಕಾಸರಗೋಡು ಈ ಪುಸ್ತಕ ಸಹಕಲಾವಿದರ ಬವಣೆಯ ಕುರಿತು, ಸಿನಿಮಾ ತಾರೆಯರ ಬದುಕಿನ ಸಿನಿ ಪಯಣವನ್ನು ಕುರಿತದ್ದಾಗಿದೆ. ನಟ ನಟಿಯರ, ಚಿತ್ರರಂಗದ ಅನೇಕ ಸಂಗತಿಗಳನ್ನು ತಿಳಿದುಕೊಳ್ಳಲು ಇರುವ ಆಸಕ್ತಿ, ಕುತೂಹಲದೊಂದಿಗೆ  ಹಿಡಿದಿಡುವ ಅನೇಕ ಬರಹಗಳು ಇಲ್ಲಿವೆ.
ಪತ್ರಕರ್ತರು, ಮಾಧ್ಯಮದೊಂದಿಗೆ ಹಂಚಿಕೊಂಡ ಅನೇಕ ವಿಷಯಗಳ ಹೊರತಾಗಿ ಉಳಿದಿರುವ ಸಿನಿಮಾ ಗಾಸಿಪ್ ಇಷ್ಟಪಡುವವರು, ಚಿತ್ರರಂಗದ ಬಗ್ಗೆ ಇರುವ ಅಪರೂಪದ ಸಂಗತಿ ಅರಿಯಲು ಗಣೇಶ್ ಕಾಸರಗೋಡು ಅವರ ಈ ಪುಸ್ತಕ ಓದುಗರಿಗೆ ಹತ್ತಿರವಾಗುತ್ತದೆ. 

About the Author

ಗಣೇಶ್‌ ಕಾಸರಗೋಡು

ಗಣೇಶ್ ಕಾಸರಗೋಡು ಹುಟ್ಟಿದ್ದು ಕಾಸರಗೋಡಿನಲ್ಲಿ ಓದಿದ್ದೂ ಅಲ್ಲೇ. ಎಂ.ಎ. (ಕನ್ನಡ) ಪದವಿಯಲ್ಲಿ ರ್‍ಯಾಂಕ್ ವಿಜೇತರು. ಕೆಲಕಾಲ ಪ್ರೌಢಶಾಲಾ ಶಿಕ್ಷಕರಾಗಿದ್ದರು. ನಂತರ ಬಂದಿದ್ದು ಪತ್ರಿಕೋದ್ಯಮಕ್ಕೆ. ಮೊದಲು 'ಚಿತ್ರ ದೀಪ', ನಂತರ 'ಚಿತ್ರ ತಾರಾ', ಆ ನಂತರ 'ಅರಗಿಣಿ'. ಕಾಲಾನುಕ್ರಮದಲ್ಲಿ ಸಂಯುಕ್ತ ಕರ್ನಾಟಕ', 'ಕರ್ಮವೀರ', 'ವಿಜಯ ಕರ್ನಾಟಕ' ದಲ್ಲಿ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ, ಸದ್ಯಕ್ಕೆ 'ಸುವರ್ಣ ಟೈಂಸ್ ಆಫ್ ಕರ್ನಾಟಕ' ದಲ್ಲಿ ಅಂಕಣಕಾರ. ಪತ್ರಿಕೋದ್ಯಮದ ಸೇವೆ ಗುರುತಿಸಿ - ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ , ಮಂತ್ರಾಲಯದ ವಿಜಯ ವಿಠಲ ಪ್ರಶಸ್ತಿ , ಪತ್ರಕರ್ತರ ವೇದಿಕೆ ಪ್ರಶಸ್ತಿ , ...

READ MORE

Related Books