ಎರಡು ಕಣ್ಣು ಸಾಲದು

Author : ವಿ.ಎನ್.ಲಕ್ಷ್ಮೀನಾರಾಯಣ

Pages 148

₹ 110.00




Year of Publication: 2016
Published by: ಚಿಂತನಾ ಪುಸ್ತಕ
Address: #405, 1ನೇ ಅಡ್ಡರಸ್ತೆ, ಡಾಲರ್‍ಸ್‌ ಕಾಲೋನಿ, ಜೆ.ಪಿ. ನಗರ ನಾಲ್ಕನೇ ಹಂತ, ಬೆಂಗಳೂರು-560078
Phone: 9902249150

Synopsys

ಸಿನೆಮಾ ಒಂದು ಭಾಷೆ. ಅದು ಛಾಯಾಗ್ರಹಣ, ಚಿತ್ರಕಲೆ, ಸಾಹಿತ್ಯ, ಸಂಗೀತ, ನೃತ್ಯ ಮತ್ತು ನಾಟಕ ಕಲೆಗಳನ್ನು ಒಳಗೊಂಡಿರುವ, ಮತ್ತು ಬಿಡಿ ಬಿಡಿಯಾಗಿ ಅವೇ ಅಲ್ಲದ, ಐದೂ ಇಂದ್ರಿಯಗಳ ಅನುಭವವನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುವ ವಿಶಿಷ್ಟ ಭಾಷೆ. ಇಷ್ಟಾದರೂ, ಸಾಹಿತ್ಯ ಕೃತಿಯ ಅಥವಾ ನಾಟಕದ ದೃಶ್ಯರೂಪವಾಗದೆ, ತನ್ನದೇ ಆದ ವ್ಯಾಕರಣ, ನುಡಿಗಟ್ಟು ಮತ್ತು ಪ್ರತಿಮಾವಿಧಾನವನ್ನು ಸಿನೆಮಾ ಹೊಂದಿದೆ. ಸ್ವರೂಪದಲ್ಲಿ ಕಾವ್ಯಕ್ಕೆ ಹತ್ತಿರವಿರುವ ಸಿನೆಮಾ, ಚಿಂತಕರಿಗೆ, ಸಂವೇದನಾಶೀಲರಿಗೆ, ಸೂಕ್ಷ್ಮಜ್ಞರಿಗೆ ಹೇಳಿಮಾಡಿಸಿದ ಕಲಾ ಮಾಧ್ಯಮ. ಈ ಸಂಗತಿಗಳ ಪ್ರಾಥಮಿಕ ಪರಿಚಯವಾದರೂ ಇಲ್ಲದೆ ಸಿನೆಮಾ ಮಾಡುವುದಾಗಲಿ, ನೋಡುವುದಾಗಲಿ ಕಷ್ಟಸಾಧ್ಯ ಎಂಬುದನ್ನು ಈ ಪುಸ್ತಕ ಸಿನೆಮಾ ಕೃತಿಗಳ ಮೂಲಕವೇ ಪರಿಚಯಿಸುತ್ತದೆ.

About the Author

ವಿ.ಎನ್.ಲಕ್ಷ್ಮೀನಾರಾಯಣ
(06 May 1948)

ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ (ಜನನ: 06-05-1948) ಲಾಯಲಾಪುರ ಗ್ರಾಮದವರು.  ಸಾಹಿತ್ಯ, ತತ್ವಶಾಸ್ತ್ರ, ಸಿನಿಮಾಕಲೆ, ಅನುವಾದ ಮತ್ತು ಎಡಪಂಥೀಯ ರಾಜಕೀಯದಲ್ಲಿ ಗಂಭೀರ ಆಸಕ್ತಿ. ‘ಆನೆ ಬಂತೊಂದಾನೆ’ (ಜಾನಪದ ಶಿಶುಗೀತೆಗಳು) ‘ಕನ್ನಡ ಕಲಿಯಿರಿ’ ( ವಯಸ್ಕರ ಶಿಕ್ಷಣ) ‘ನಿರಂತರ’ (ಸಾಹಿತ್ಯ ವಿಮರ್ಶೆ) ‘ಗಾಂಪ ಮಂಡಲ’ (ವಿಡಂಬನೆ) ‘ಕ್ಯಾಪ್ಟನ್ನನ ಮಗಳು’ (ಅನುವಾದ) ‘ಎರಡು ಕಣ್ಣು ಸಾಲದು’ (ಸಿನಿಮಾ ಕಲಾಮೀಮಾಂಸೆ) 'ಶ್ರಮಶೋಷಣೆಯ ವಿಶ್ವವನ್ನು ಬದಲಾಯಿಸಬೇಕು!' (ಸಹ ಅನುವಾದ) ಪ್ರಕಟಿತ ಕೃತಿಗಳು. ಮಾರ್ಕ್ಸ್ ನ ‘ಕ್ಯಾಪಿಟಲ್’ ಕೃತಿಯ ಅನುವಾದ ಕಾರ್ಯದಲ್ಲಿ ಇತರರೊಂದಿಗೆ ಸಹಯೋಗ. ನಿವೃತ್ತಿಯ ನಂತರ ಮೈಸೂರಿನಲ್ಲಿ ವಾಸ. ...

READ MORE

Related Books