ಟೂರಿಂಗ್ ಟಾಕೀಸ್

Author : ಜಯಂತ ಕಾಯ್ಕಿಣಿ

Pages 276

₹ 230.00




Year of Publication: 2021
Published by: ಮನೋಹರ ಗ್ರಂಥ ಮಾಲಾ
Address: ಲಕ್ಷ್ಮಿ ಭವನ್, ಸುಭಾಷ್ ರಸ್ತೆ, ಧಾರವಾಡ- 580001
Phone: 08362441822

Synopsys

ಜಯಂತ ಕಾಯ್ಕಿಣಿ ಅವರ ಸಿನೆಮಾ ಕುರಿತ ಲೇಖನಗಳ ಸಂಕಲನ ‘ಟೂರಿಂಗ್ ಟಾಕೀಸ್’. ಸಿನೆಮಾ ಲೋಕದ ತಮ್ಮ ವಿಸ್ಮಯ ಅನುಭವಗಳಿಗೆ ರೂಪು ನೀಡಿರುವ ಕಾಯ್ಕಿಣಿ ಅವರು ಸಿನೆಮಾ ಒಂದರ್ಥದಲ್ಲಿ ತಮ್ಮಂಥವರನ್ನೂ ಬೇಷರತ್ ಲಾಲನೆ-ಪಾಲನೆ ಮಾಡಿದ ತಾಯಿ ಎನ್ನುತ್ತಾರೆ. ಇಲ್ಲಿರುವ ಸಾಕಷ್ಟು ಟಿಪ್ಪಣಿರೂಪದ ಲೇಖನಗಳು, ಸಿನಿಮಾ ಕುರಿತ ಮಾಸಿಕ ಪತ್ರಿಕೆ ರೂಪಾತಾರದಲ್ಲಿ ಪ್ರಕಟವಾಗಿವೆ. ಇತ್ತೀಚೆಗೆ, ಈ ಕೃತಿಯ ವಿಶೇಷ ವಿಸ್ತೃತ ಆವೃತ್ತಿಯನ್ನು ಪ್ರಕಟಿಸಲಾಗಿದೆ. 2013ರಲ್ಲಿ ಪ್ರಥಮ ಮುದ್ರಣ ಕಂಡ ಈ ಕೃತಿಯು ಹೊಸ ಆವೃತ್ತಿಗಳೊಂದಿಗೆ 2017ರಲ್ಲಿ ಮರು ಮುದ್ರಣಗೊಂಡಿದ್ದು, 2021ರಲ್ಲಿಯೂ ಹೊಸ ಆವೃತ್ತಿಗಳೊಂದಿಗೆ ಪ್ರಕಟಗೊಂಡಿದೆ. 

About the Author

ಜಯಂತ ಕಾಯ್ಕಿಣಿ
(24 January 1955)

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಜಯಂತ ಅವರ ತಂದೆ ಗೌರೀಶ ಕಾಯ್ಕಿಣಿ ಹೆಸರಾಂತ ವಿಚಾರವಾದಿ ಲೇಖಕ.  ಆಧುನಿಕ ಬದುಕಿನ ಆತಂಕಗಳನ್ನು ಕತೆಯಾಗಿಸುವ ಜಯಂತ ಕಾಯ್ಕಿಣಿ ಅವರು ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು.  ’ಕತೆಗಾರ’ ಎಂಬ ವಿಶೇಷಣ ಇದೆಯಾದರೂ ಅವರೊಬ್ಬ ಪ್ರಮುಖ ಕವಿ ಕೂಡ ಹೌದು. ಪ್ರಬಂಧ, ಅಂಕಣ ಬರಹ, ಚಲನಚಿತ್ರ ಸಂಭಾಷಣೆ ಮತ್ತು ಗೀತರಚನೆ ಹೀಗೆ ಹಲವು ಪ್ರಕಾರಗಳಲ್ಲಿ ಹೆಜ್ಜೆಗುರುತು ಮೂಡಿಸಿದ್ದಾರೆ. ’ಭಾವನಾ’ ಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದ ಜಯಂತ ಅವರು ಈಟಿವಿ ವಾಹಿನಿಗಾಗಿ ’ನಮಸ್ಕಾರ’, ಬೇಂದ್ರೆ, ಕುವೆಂಪು, ಕಾರಂತ ನಮನ ಸರಣಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ರಂಗದಿಂದೊಂದಿಷ್ಟು ದೂರ, ಕೋಟಿತೀರ್ಥ, ಶ್ರಾವಣ ಮಧ್ಯಾಹ್ನ, ...

READ MORE

Related Books