ಕೊಲೆ ಆರೋಪಿಯಾದ ಸಿನೆಮಾ ತಾರೆ

Author : ಡಿ.ವಿ. ಗುರುಪ್ರಸಾದ್

Pages 192

₹ 200.00




Year of Publication: 2021
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ-580020

Synopsys

ಹಿರಿಯ ಪೋಲಿಸ್ ಅಧಿಕಾರಿ ಡಿ.ವಿ. ಗುರುಪ್ರಸಾದ್ ಅವರ ’ಕೊಲೆ ಆರೋಪಿಯಾದ ಸಿನೆಮಾ ತಾರೆ’ ಕೃತಿಯು ನೈಜ ಕ್ರೈಂ ಕತೆಗಳನ್ನು ಒಳಗೊಂಡ ಕೃತಿಯಾಗಿದೆ. ವಸ್ತುವಿನಲ್ಲೇ ಕುತೂಹಲ, ರೋಚಕತೆ ತುಂಬಿರುವಾಗ ಹೊರಗಿನಿಂದ ಸುಗಂಧವನ್ನೋ ಮಸಾಲೆಯನ್ನೋ ಏಕಾದರೂ ಸೇರಿಸಬೇಕು ಎನ್ನುವಂತಹ ಲೇಖನಗಳ ಸಂಗ್ರಹ ಈ ಕೃತಿಯಲ್ಲಿದೆ. ಅಪರಾಧಗಳ ಬಗ್ಗೆ ಓದುವುದು ಸದಾಕಾಲವು ಥ್ರಿಲ್ ಕೊಡುತ್ತದೆ. ಹಾಗೆಯೇ, ಈ ಪುಸ್ತಕ ಪ್ರತಿಯೊಬ್ಬನಿಗೂ ಅವು ಹೇಗೆ ನಡೆದವು, ಹೇಗೆ ಪತ್ತೆಯಾದವು ಎಂದು ತಿಳಿಯುವ ಕುತೂಹಲವನ್ನು ಈ ಪುಸ್ತಕ ಹುಟ್ಟಿಸುತ್ತದೆ.

 

About the Author

ಡಿ.ವಿ. ಗುರುಪ್ರಸಾದ್

ಲೇಖಕ ಡಿ.ವಿ. ಗುರುಪ್ರಸಾದ್ ಅವರು ನಿವೃತ್ತ ಪೊಲೀಸ್ ಅಧಿಕಾರಿಗಳಾಗಿದ್ದು, ರಾಜ್ಯದ ಪೊಲೀಸ್ ಗುಪ್ತಚರದಳ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿ ಬದುಕಿನ ಅನುಭವ ಮತ್ತು ತಮ್ಮ ವಿಚಾರಗಳನ್ನು ಕೃತಿಗಳ ಮೂಲಕ ದಾಖಲಿಸುವ ಇವರು ಕ್ರೈಂ ಲೋಕದ ವಿಸ್ಮಯ, ವಿಚಿತ್ರ ಸಂಗತಿಗಳನ್ನು ಓದುಗರಮುಂದಿಡುತ್ತಾ ಬಂದಿದ್ದಾರೆ.  ‘ಪೊಲೀಸ್ ಜೀವನದಲ್ಲಿ ಹಾಸ್ಯ', 'ವೀರಪ್ಪನ್ : ದಂತಚೋರನ ಬೆನ್ನಟ್ಟಿ', 'ಕೈಗೆ ಬಂದ ತುತ್ತು’, ‘ಪೊಲೀಸ್ ಎನ್ ಕೌಂಟರ್’, 'ಕ್ರೈಂ ಕಥೆಗಳು', 'ನೀವು ಒಮ್ಮೆ ಫೇಲ್ ಆಗಲೇಬೇಕು', 'ಅಪರಾಧಗಳ ಆ ಕ್ಷಣ', 'ವಿಶ್ವಪರ್ಯಟನೆ', 'ರಾಜೀವ್ ಗಾಂಧಿ ಭೀಕರ ಹತ್ಯೆ', 'ವೈವಿಧ್ಯತೆಯಲ್ಲಿ ಸಾಮ್ಯತೆ -ಯುರೋಪಿನ ಹದಿನಾಲ್ಕು ದೇಶಗಳು', 'ಗಲ್ಲುಗಂಬದ ...

READ MORE

Related Books