ತಾರೆಗಳ ದುನಿಯಾ

Author : ಶಶಿಧರ ಚಿತ್ರದುರ್ಗ

Pages 144

₹ 100.00




Year of Publication: 2015
Published by: ಸೃಷ್ಟಿ ಪಬ್ಲಿಕೇಷನ್ಸ್
Address: ನಂ. 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, ವಿಜಯನಗರ, ಬೆಂಗಳೂರು 560040
Phone: 9845096668

Synopsys

ಹಿಂದಿ ಸಿನೆಮಾ ಮೇರು ತಾರೆಯರ ಪರಿಚಯ ಸಾಧನೆಯನ್ನು ಕುರಿತು ಹೇಳುವ , ಬರಹಗಳನ್ನು ಒಳಗೊಂಡ ಕೃತಿ ’ತಾರೆಗಳ ದುನಿಯಾ.’  ಹಿಂದಿ ಚಿತ್ರರಂಗ, ಜಾಗತಿಕ ಮಟ್ಟದಲ್ಲಿ ಗುರುತಿಸಬಹುದಾದ ಪ್ರತಿಭಾವಂತ ನಟ-ನಟಿಯರ ಬಗ್ಗೆ ಮಾಹಿತಿಯನ್ನು ಈ ಪುಸ್ತಕ ಒಳಗೊಂಡಿದೆ. ಹಿಂದಿ ಚಿತ್ರರಂಗದ ಬಗೆಗಿನ ಪುಸ್ತಕಗಳು, ಪತ್ರಿಕೆ-ನಿಯತಕಾಲಿಕೆಗಳು, ಇಂಟರ್‌ನೆಟ್ ಆಧರಿಸಿ ಸಂಗ್ರಹಿಸಿ ಬರೆದಿರುವ ಒಂದಿಷ್ಟು ಮಾಹಿತಿಪೂರ್ಣ ವಿವರಗಳು, ಟಿಪ್ಪಣಿಗಳು ಈ ಪುಸ್ತಕದಲ್ಲಿದೆ. ಆಯ್ದ ಮೂವತ್ಮೂರು ನಟರು ಹಾಗೂ ಮೂವತ್ಮೂರು ನಟಿಯರ ಬಗೆಗಿನ ಮಾಹಿತಿ. ರಂಗಭೂಮಿ ಹಿನ್ನೆಲೆಯ ಕಲಾವಿದರು, ಖಳ, ಪೋಷಕ ಹಾಗೂ ಹಾಸ್ಯ ಪಾತ್ರಗಳಲ್ಲಿ ಜನರ ಮನಸೂರೆಗೊಂಡ ಸಾಧಕರ ಕುರಿತ ಅಪರೂಪದ ಹೊತ್ತಿಗೆ. ಪುಸ್ತಕದಲ್ಲಿ ಆಕರ್ಷಕ ಫೋಟೋಗಳನ್ನು ಬಳಕೆ ಮಾಡಲಾಗಿದೆ.

About the Author

ಶಶಿಧರ ಚಿತ್ರದುರ್ಗ
(11 August 1979)

ಊರು ಕೋಟೆ ನಾಡು ಚಿತ್ರದುರ್ಗ. ಶಾಲೆ- ಕಾಲೇಜು ಓದಿದ್ದು ಚಿತ್ರದುರ್ಗದಲ್ಲಿ. ದುರ್ಗದ 'ಸುದ್ದಿಗಿಡುಗ' ಜಿಲ್ಲಾ ಪತ್ರಿಕೆಯಲ್ಲಿ ಪತ್ರಿಕೋದ್ಯಮ ಶುರುವಾಯ್ತು. ಮುಂದೆ 'ಕನ್ನಡ ಪ್ರಭ' ಪತ್ರಿಕೆ ಸೇರಿದಾಗ ಸಿನಿಮಾ ಪತ್ರಿಕೋದ್ಯಮದ ನಂಟು ಸಿಕ್ಕಿತು. ನಂತರ 'ಟೈಮ್ಸ್ ಆಫ್ ಇಂಡಿಯಾ' ಬಳಗದ 'ವಿಜಯ ನೆಕ್ಸ್ಟ್', 'ವಿಜಯ ಕರ್ನಾಟಕ'ದಲ್ಲಿ ಕಾರ್ಯನಿರ್ವಹಣೆ. 'ದಿ ಸ್ಟೇಟ್' ನೊಂದಿಗೆ ಡಿಜಿಟಲ್ ಪತ್ರಿಕೋದ್ಯಮ ಪರಿಚಯ. ಪ್ರಸ್ತುತ ಫ್ರೀಲಾನ್ಸರ್. ಇಲ್ಲಿಯವರೆಗೆ ಎಂಟು ಪುಸ್ತಕಗಳು ಪ್ರಕಟವಾಗಿವೆ. ಇವುಗಳ ಪೈಕಿ ಏಳು ಸಿನೆಮಾಗೆ ಸಂಬಂಧಿಸಿದ ಕೃತಿಗಳು. ವೃತ್ತಿಯಲ್ಲಿ ಸಿನಿಮಾ ಪತ್ರಕರ್ತ. ವಿವಿಧ ಪತ್ರಿಕೆ, ಪೋರ್ಟಲ್‌ಗಳಲ್ಲಿ ಹದಿನೈದು ವರ್ಷಗಳ ಅನುಭವ. ಸಿನಿಮಾ ವೀಕ್ಷಣೆ, ಫೋಟೋಗ್ರಫಿ ...

READ MORE

Related Books