ಬಿಂಬ ಬಿಂಬನ

Author : ಪೆರ್ಲ ಗೋಪಾಲಕೃಷ್ಣ ಪೈ

Pages 292

₹ 350.00




Year of Publication: 2024
Published by: ವೀರಲೋಕ ಬುಕ್ಸ್
Address: ವೀರಲೋಕ ಬುಕ್ಸ್‌ ಪ್ರೈವೇಟ್‌ ಲಿಮಿಟೆಡ್‌, 207, 2ನೇ ಮಹಡಿ, 3ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560018
Phone: +91 7022122121

Synopsys

‘ಬಿಂಬ ಬಿಂಬನ’ ಕಾಸರವಳ್ಳಿ ಚಿತ್ರಗಳ ಸಂಕಥನ. ಗೋಪಾಲಕೃಷ್ಣ ಪೈ ಮತ್ತು ಗಿರೀಶ್ ಕಾಸರವಳ್ಳಿ ಈ ಕೃತಿಯನ್ನು ರಚಿಸಿದ್ದಾರೆ. ಕೃತಿಯನ್ನು ಪ್ರಕಟಿಸಿರುವ ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ್ ಅವರು ಕೃತಿಯ ಕುರಿತು ಬರೆಯುತ್ತಾ ‘ಸಿನಿಮಾ ಮತ್ತು ಸಾಹಿತ್ಯ ಎರಡರಲ್ಲೂ ಪ್ರತಿಮಾ ವಿಧಾನ ಭಿನ್ನ, ಸಂಜ್ಞಾ ಕ್ರಮವೂ ಭಿನ್ನ. ಸಾಹಿತ್ಯದ ಮೂಲಧಾತುವಾದ ಶಬ್ದವು ಅಮೂರ್ತವಾಗಿರುತ್ತದೆ. ಈ ಅಮೂರ್ತ ಧಾತುವನ್ನು ಇಟ್ಟುಕೊಂಡು ಸಾಹಿತಿ ಮೂರ್ತ ಬಿಂಬವನ್ನು ಕಟ್ಟುತ್ತಿರುತ್ತಾನೆ. ಸಿನಿಮಾದಲ್ಲಿ ಮೂಲಧಾತುವಾದ ಬಿಂಬವೇ ಮೂರ್ತ. ನಿರ್ದೇಶಕ ಅದರ ನೆರವಿನಿಂದ ಕೃತಿ ಕಟ್ಟುತ್ತಿರುವಾಗ ಮೂರ್ತವನ್ನು ಮೀರಿ ಅಮೂರ್ತವನ್ನು ತರಬಲ್ಲ ಬಿಂಬದ ಹುಡುಕಾಟದಲ್ಲಿರುತ್ತಾನೆ. ಅಂದರೆ ಅಮೂರ್ತದಿಂದ ಮೂರ್ತ ಬಿಂಬ ಕಟ್ಟುವ ಸಾಹಿತಿಯ ನುಡಿಗಟ್ಟು ಮೂರ್ತದಿಂದ ಅಮೂರ್ತಕ್ಕೆ ಜಿಗಿಯಬಲ್ಲ ಬಿಂಬಕ್ಕೆ ಹುಡುಕುವ ಸಿನಿಮಾ ನಿರ್ದೇಶಕನಿಗೆ ಊರುಗೋಲಾಗಲಾರದು. 2000ದ ಸುಮಾರಿಗೆ ಸಿನಿಮಾ ವ್ಯಾಖ್ಯಾನದಲ್ಲಿ ಬಹಳ ಬದಲಾವಣೆ ಆಗಿತ್ತು. ಸಿನಿಮಾ ವಿಶ್ಲೇಷಣೆಯಲ್ಲಿ 'ಬಿಂಬ'ದ ಜೊತೆಗೆ 'ಬಿಂಬನವನ್ನೂ ಒಂದು ಮೌಲ್ಯವಾಗಿ ಪರಿಗಣಿಸತೊಡಗಿದರು. ತೆರೆಯ ಮೇಲೆ ಕಾಣುವುದು ಬಿಂಬಗಳಾದರೆ ಅವನ್ನು ಸೃಷ್ಟಿ ಮಾಡಲು ಆಯ್ದುಕೊಳ್ಳುವ ತಾಂತ್ರಿಕ ಅಂಶಗಳು ಬಿಂಬನವನ್ನು ಸೂಚಿಸುತ್ತವೆ. ಸಿನಿಮಾದ ಬಿಂಬಗಳು ಅಲಿಪ್ತವಲ್ಲ, ಅವು ಯಂತ್ರಜನ್ಯವಾದರೂ ಅವನ್ನು ಸೃಷ್ಟಿ ಮಾಡುತ್ತಿರುವವರ ಇಷ್ಟಾನಿಷ್ಟಗಳು ಬಿಂಬಗಳಲ್ಲಿ ಹಾಗೂ ಬಿಂಬನ ಕ್ರಮದಲ್ಲಿ ವ್ಯಕ್ತವಾಗುತ್ತಾ ಇರುತ್ತವೆ. ಟೆಕ್ನಾಲಜಿಯ ಬಗ್ಗೆ ಮನುಷ್ಯನಿಗೆ ಯಾವಾಗಲೂ ಸೆಳೆತ, ಕುತೂಹಲ ಮತ್ತು ಭಯ ಇದ್ದೇ ಇರುತ್ತದೆ. ಸೆಳೆತಕ್ಕೆ ಕಾರಣ ಅದು ತನ್ನ ಬದುಕನ್ನು ಇನ್ನಷ್ಟು ಸುಂದರಮಾಡುತ್ತದೆ ಎನ್ನುವ ಭ್ರಮೆ. ತನಗೆ ಅಸಾಧ್ಯ, ನಿಗೂಢ ಎನಿಸಿದ್ದನ್ನು ಅದು ಸಾಧ್ಯ ಮಾಡಿಕೊಡುತ್ತಾದ್ದರಿಂದ ಕುತೂಹಲ, ಅದರ ಸ್ವರೂಪ ಸಂಪೂರ್ಣವಾಗಿ ಅರ್ಥವಾಗುತ್ತಿಲ್ಲವಾದ್ದರಿಂದ ಭಯ-ಈ ಮೂರು ಭಾವನೆಗಳು ಬೇರೆ ಬೇರೆಯಾಗಿ ಅಥವಾ ಒಟ್ಟಾಗಿಯೇ ಕೂಡಿ ಅನಿರ್ವಚನೀಯ ಅನುಭವವೊಂದನ್ನು ನೀಡುತ್ತಿರುತ್ತದೆ ಎಂದಿದ್ದಾರೆ.

About the Author

ಪೆರ್ಲ ಗೋಪಾಲಕೃಷ್ಣ ಪೈ

ಮೂಲತಃ ಕೇರಳದ ಕಾಸರಗೋಡು ಹಾಗೂ ಕರ್ನಾಟಕದ ದಕ್ಷಿಣ ಕನ್ನಡ ಮಧ್ಯೆ ಇರುವ ಪೆರ್ಲ ಮೂಲದ ಗೋಪಾಲಕೃಷ್ಣ ಪೈ ಅವರು ಕತೆ,ನಾಟಕ ,ಪ್ರಬಂದ, ಲೇಖನ ಕಾದಂಬರಿಗಳನ್ನು ಬರೆಯುವುದರಲ್ಲಿ ಪ್ರವೀಣರು. ನಾಟಕ ವಿಮರ್ಶೆ ಮೊದಲಾದ ಹಲವು ಪ್ರಕಾರಗಳಲ್ಲಿ ಕೈಯ್ಯಾಡಿಸಿ ಉತ್ತಮ ಸಾಹಿತ್ಯ ಕೃಷಿಯನ್ನು ಬೆಳೆಸುತ್ತಿರುವ ಗೋಪಾಲಕೃಷ್ಣ ಪೈ ಅವರ ಮತ್ತಿತರ ಕೃತಿಗಳು ಇಂತಿವೆ; ತಿರುವು, ಈ ಬೆರಳ ಗುರುತು, ಹಾರುವ ಹಕ್ಕಿಯ ಗೂಡಿನ ದಾರಿ ,ಮೊದಲಾದ ಚಿಕ್ಕ ಕಥೆಗಳು. ಆಧುನಿಕ ಚೀನೀ ಸಣ್ಣಕಥೆಗಳು, 'ಪೆರ್ಲ ಗೋಪಾಲಕೃಷ್ಣ ಪೈ'ರವರ ಸ್ವಪ್ನ ಸಾರಸ್ವತ ಕಾದಂಬರಿಗೆ 2010 ರ ಸಾಲಿನ 'ಪ್ರತಿಷ್ಠಿತ ಕೇಂದ್ರ ಸಾಹಿತ್ಯ ...

READ MORE

Related Books