ಪಥೇರ್ ಪಾಂಚಾಲಿ

Author : ಕೆ.ವಿ. ಸುಬ್ಬಣ್ಣ

Pages 90

₹ 8.00




Year of Publication: 1980
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ತಾಲೂಕು: ಸಾಗರ, ಜಿಲ್ಲೆ: ಶಿವಮೊಗ್ಗ -577401

Synopsys

ವಿಶ್ಸ ಚಲನಚಿತ್ರೋತ್ಸವದ ಗಮನ ಸೆಳೆದ ಚಲನಚಿತ್ರ-ಪಥೇರ್ ಪಾಂಚಾಲಿ. ಸತ್ಯಜೀತ್ ರಾಯ್ ಅದನ್ನು ನಿರ್ದೇಶಿಸಿದ್ದರು. ಆ ಚಲನಚಿತ್ರದ ಪೂರ್ಣ ಪ್ರತಿಯನ್ನು ಕೆ.,ವಿ. ಸುಬ್ಬಣ್ಣ ಅವರು ಅನುವಾದ ಮಾಡಿದ ಕೃತಿಯೇ ಪಥೇರ್ ಪಾಂಚಾಲಿ.

ಕೃತಿಯ ಮೊದಲಿಗೆ-’ಕಿರುದಾರಿಯ ಮೇಲೆ ದೀರ್ಘಕಾಲ’ ಶೀರ್ಷಿಕೆಯಡಿ ಪಥೇರ್ ಪಾಂಚಾಲಿ ಚಲನಚಿತ್ರದ ಶೂಟಿಂಗ್ ಮಾಡಲು ತೆರಳುವ ಮೊದಲ ದಿನದ ಅನುಭವ ಮಾತ್ರವಲ್ಲದೇ, ಅದು ಪೂರ್ಣಗೊಂಡ ಬಗೆ, ಈ ಮಧ್ಯೆ ಪಟ್ಟ ಶ್ರಮ-ನೋವು-ಸಂತಸ-ಭರವಸೆ ಇತ್ಯಾದಿ ಬಗ್ಗೆ ಸ್ವತಃ ಸತ್ಯಜೀತ್ ರಾಯ್ ಬರೆದ ಲೇಖನದ ಪೂರ್ಣಪಾಠದ ಅನುವಾದ ಇದೆ.

ನಂತರದ ಅಧ್ಯಾಯ-‘ಸತ್ಯಜೀತ್ ರಾಯ್ ಮತ್ತು ಅಪೂ ತ್ರಿವಳಿಗಳು’ ನಲ್ಲಿ ಪಥೇರ್ ಪಾಂಚಾಲಿ ಕಥೆಯ ವಿವರ, ರಾಯ್ ನಿರ್ದೇಶಿಸಿದ್ದ ಸಿನೆಮಾಗಳು ಹಾಗೂ ಮೂರನೇ ಅಧ್ಯಾಯದಲ್ಲಿ ಪ್ರೊ. ಸತೀಶ್ ಬಹಾದುರ್ ಲೇಖನ ಆಧರಿಸಿ ‘ಪಥೇರ್ ಪಾಂಚಾಲಿಯ ವ್ಯಕ್ತಿ-ಪರಿಸರಗಳು’ ಶೀರ್ಷಿಕೆಯಡಿ ಬರೆದ ಲೇಖನವಿದೆ.ತದನಂತರ, ಬಂಗಾಳಿ ಮೂಲದ ಈ ಚಲನಚಿತ್ರದ ಪೂರ್ಣಪಾಠ ಕನ್ನಡದಲ್ಲಿ ಓದಬಹುದು. 

About the Author

ಕೆ.ವಿ. ಸುಬ್ಬಣ್ಣ
(20 February 1931)

ಕೆ.ವಿ. ಸುಬ್ಬಣ್ಣ ಕನ್ನಡದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಪಡೆದ ನಂತರ ಅವರು ಕೃಷಿಕಾಯಕ ಆರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಚ್ಚರಿಪಡುವ ಹಾಗಿದೆ. ಕವಿ, ನಾಟಕಕಾರ, ಅನುವಾದಕರಾಗಿದ್ದ ಅವರು 'ಅಕ್ಷರ ಪ್ರಕಾಶನ' 'ನೀನಾಸಂ ರಂಗ ಚಟುವಟಿಕೆ'ಗಳನ್ನು ನಿರ್ವಹಿಸಿದವರು. ಭಾರತೀಯ ಸಂಸ್ಕೃತಿಗೆ ವಿಶಿಷ್ಟ ಮಾದರಿ ಎನ್ನುವ ಹಾಗೆ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪುಟ್ಟಹಳ್ಳಿಯಲ್ಲಿ ನಡೆಸಿದ್ದು ಒಂದು ದಾಖಲೆ. ಮ್ಯಾಗ್ಸೆಸ್ಸೆ ಪ್ರಶಸ್ತಿಯಿಂದ ಹೆಗ್ಗೋಡು ಅಂತರರಾಷ್ಟ್ರೀಯ ನಕ್ಷೆಯಲ್ಲಿ ದಾಖಲಾಯಿತು. ಕೆ.ವಿ. ಸುಬ್ಬಣ್ಣ ಒಬ್ಬ ವ್ಯಕ್ತಿಯಲ್ಲ, ಮಹಾನ್ ಶಕ್ತಿ. ಅವರ ಬೆಳವಣಿಗೆ ವೈಯಕ್ತಿಕವಾದದ್ದಲ್ಲ, ಸಾಂಘಿಕವಾದದ್ದು. 'ಅಕ್ಷರ ಪ್ರಕಾಶನದ ಮೂಲಕ , 'ನೀನಾಸಂ' ಮೂಲಕ ಅನೇಕ ಪ್ರತಿಭೆಗಳನ್ನು ಅವರು ...

READ MORE

Related Books