
ಲೇಖಕಿ ಚೇತನಾ ತೀರ್ಥಹಳ್ಳಿ ಅವರು ಬರೆದ ’ಅಧ್ಯಾತ್ಮ ಡೈರಿ’ ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿಗೆ ಸಂಬಂಧಿಸಿದ ಪುಟ್ಟ ಪುಟ್ಟ ಲೇಖನಗಳನ್ನು ಹೊಂದಿದೆ. ಲವ್, ಲೈಫ್, ಲೋಚಾ ಎಂಬ ವಿಶಿಷ್ಟ ಅಡಿಟಿಪ್ಪಣಿ ಪ್ರೀತಿ, ದುಡಿಮೆ, ಬದುಕಿನ ಏರಿಳಿತಗಳ ಕುರಿತು ಮಾತನಾಡುತ್ತದೆ. ಡೈರಿ ರೂಪದ ಬರವಣಿಗೆ ಇದಾಗಿರುವುದರಿಂದ ಸಹಜತೆ ಎದ್ದು ಕಾಣುತ್ತದೆ.
ಯಾರದೋ ಬದುಕು ನಮ್ಮದೂ ಆಗಿರುವ, ನಮ್ಮದೇ ಬದುಕು ಇನ್ನಾರದೋ ಆಗಿ ಕಾಣುವ ಸ್ಥಿತಿ ಅಧ್ಯಾತ್ಮದ ದರ್ಶನ ಮಾಡಿಸುವುದು ವಿಶೇಷ. ಎಂದಿನಂತೆ ಸಾವಣ್ಣ ಪ್ರಕಾಶನ ಸೊಗಸಾದ ಮುದ್ರಣದೊಂದಿಗೆ ಕೃತಿಯನ್ನು ಹೊರತಂದಿದೆ.
©2025 Book Brahma Private Limited.