
ಲೇಖಕರಾದ ಎಸ್. ಆರ್. ಆರಾಧ್ಯ ಅವರು ಕನ್ನಡಕ್ಕೆ ಅನುವಾದ ಮಾಡಿದ ಪುಸ್ತಕ ʻಮನೋ ಭಾವವೇ ಸರ್ವಸ್ವʼ. ಆಂಗ್ಲ ಭಾಷೆಯ ಲೇಖಕ ಜೆಫ್ ಕೆಲ್ಲರ್ ಅವರು ಮೂಲ ಕೃತಿಯನ್ನು ರಚಿಸಿದ್ದಾರೆ. ಲೇಖಕರು ಪುಸ್ತಕದ ಮೂಲಕ ನಮಗೆ ಜೀವನದ ಹಲವಾರು ಆಯಾಮಗಳ ಬಗ್ಗೆ ಹೇಳಿಕೊಡುತ್ತಾರೆ. ಹಾಗೂ ನಕಾರಾತ್ಮಕ ಮತ್ತು ಸಕಾರಾತ್ಮಕ ಇವೆರಡರ ನಡುವೆ ಇರುವ ದೃಷ್ಟಿಕೋನದ ಕುರಿತಾಗಿಯೂ ವಿವರಿಸುತ್ತಾರೆ. ಕ್ರಿಯಾಶೀಲರಾಗಿ ಹೊಸ ಸಾಧ್ಯತೆಗಳನ್ನು ಕಾಣುವ ಮತ್ತು ಪ್ರತಿಕೂಲ ಸ್ಥಿತಿಗಳನ್ನು ಹಿಮ್ಮೆಟ್ಟಿಸಿ ನಮ್ಮ ವಿಶಿಷ್ಟವಾದ ಪ್ರತಿಭೆಗಳನ್ನು ಅಭಿವೃದ್ದಿಪಡಿಸಿಕೊಳ್ಳಲು ಶಕ್ತರಾಗಬಹುದಾದ ಮಾರ್ಗಗಳನ್ನೂ ತಿಳಿದುಕೊಳ್ಳಲು ಈ ಪುಸ್ತಕವು ಸಹಾಯ ಮಾಡುತ್ತದೆ.
©2025 Book Brahma Private Limited.