
ಪ್ರಗತಿಯ ವಿವಿಧ ಲಕ್ಷಣಗಳನ್ನು ಹದಿನೈದು ಅಧ್ಯಾಯಗಳಲ್ಲಿ ಚರ್ಚಿಸಲಾಗಿದೆ. ಆರಂಭದ ಅಧ್ಯಾಯಗಳಲ್ಲಿ ಜಗತ್ತು ಸಾಧಿಸಿರುವ ಪ್ರಗತಿಯ ಅಂಕಿ ಅಂಶಗಳ ವಿವರ ನೀಡಲಾಗಿದೆ. ವಿವಿಧ ದೇಶಗಳ ಒಟ್ಟಾರೆ ಜನಜೀವನದ ಬಗೆಗೆ ವೈವಿಧ್ಯಮಯ ಮಾಹಿತಿ ಒದಗಿಸಲಾಗಿದೆ. ಭಾರತದ ಆಹಾರ ಉತ್ಪಾದನೆ, ಗ್ರಾಮೀಣ ಮತ್ತು ನಗರ ಪ್ರದೇಶಗಳ ಪ್ರಗತಿಯ ನಡುವಿನ ಅಂತರ, ಕೃಷಿ ಸಮಸ್ಯೆ ಮುಂತಾದ ವಿಷಯ ಚರ್ಚೆ ಮಾಡಲಾಗಿದೆ. ಅಂತಿಮ ಹಂತದ ಅಧ್ಯಾಯಗಳಲ್ಲಿ ವ್ಯಕ್ತಿಗತ ನೆಲೆಯಲ್ಲಿ ಸಾಧಿಸಬೇಕಾದ ಪ್ರಗತಿ ಹಾಗೂ ಭಾರತೀಯ ಧಾರ್ಮಿಕ ಬದುಕಿಗೆ ಸಂಬಂಧಿಸಿದ ವಿಷಯ ಕುರಿತ ಸಂಕ್ಷಿಪ್ತ ವಿವರಣೆಯಿದೆ. ಪ್ರಗತಿ ಕುರಿತ ಪ್ರಾಥಮಿಕ ತಿಳಿವಳಿಕೆಗೆ ಉಪಯುಕ್ತವಾಗಿದೆ.
©2025 Book Brahma Private Limited.