ಸ್ಫೂರ್ತಿ ಶಿಖರಗಳು

Author : ಡಿ.ಎಸ್. ಶ್ರೀನಿವಾಸ್ ಪ್ರಸಾದ್

Pages 126

₹ 140.00




Year of Publication: 2022
Published by: ಸಮನ್ವಿತ ಪ್ರಕಾಶನ,
Address: ಬೆಂಗಳೂರು

Synopsys

‘ಸ್ಫೂರ್ತಿ ಶಿಖರಗಳು’ ಎಂಬುದು ಲೇಖಕ ಡಿ.ಎಸ್. ಶ್ರೀನಿವಾಸ ಪ್ರಸಾದ್ ಅವರ ಕೃತಿ. ವೈಕಲ್ಯ ಮೀರಿ ಬದುಕು ಗೆದ್ದವರ ಕಥೆಗಳು ಎಂಬುದು ಈ ಕೃತಿಯ ಉಪಶೀರ್ಷಿಕೆ. ಅಂಗವೈಕಲ್ಯವು ಶಾಪವಲ್ಲ. ಆ ಭಾವನೆ ಅಥವಾ ಕೀಳರಿಮೆಯನ್ನು ಮೀರಿ ಬೆಳೆಯ ಬೇಕೆಂಬ ಪ್ರೇರಣಾತ್ಮಕ ಘಟನೆಗಳನ್ನು, ವ್ಯಕ್ತಿಗಳ ಸಾಧನೆಗಳನ್ನು ಇಲ್ಲಿ ವಿವರಿಸಲಾಗಿದೆ. ಸಾಧನೆಗೆ ಅಂಗವೈಕಲ್ಯವು ಅಡ್ಡಿಯಾಗದು. ಮನೋಬಲ ಮುಖ್ಯ ಎಂಬುದನ್ನು ಸಾಕಾರಗೊಳಿಸುವುದು ಕೃತಿಯ ಬಹುಮುಖ್ಯ ಉದ್ದೇಶ.

About the Author

ಡಿ.ಎಸ್. ಶ್ರೀನಿವಾಸ್ ಪ್ರಸಾದ್

ಬೆಂಗಳೂರು ಮೂಲದವರಾದ ಲೇಖಕ ಡಿ.ಎಸ್. ಶ್ರೀನಿವಾಸ ಪ್ರಸಾದ್ ಅವರು ಬಾಲ್ಯದಿಂದಲೇ ಬರೆವಣಿಗೆಯಲ್ಲಿ ತೊಡಗಿಕೊಂಡವರು.ತಮ್ಮ 10ನೇ ವಯಸ್ಸಿನಲ್ಲೇ ಬೆಂಗಳೂರು ಆಕಾಶವಾಣಿಯಲ್ಲಿ ಬಾಲಕಲಾವಿದನಾಗಿ `ಒಗ್ಗಟ್ಟಿನಲ್ಲಿ ಬಲವಿದೆ', `ಸಮುದ್ರದಲ್ಲಿ ಆಹಾರ...' ಸೇರಿದಂತೆ 10 ನಾಟಕಗಳಲ್ಲಿ ಅಭಿನಯಿಸಿದ್ದರು.  ಆಚಾರ್ಯ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಇವರು 3 ವರ್ಷದಲ್ಲಿ ಸುಮಾರು 155 ಅಂತರಕಾಲೇಜು ಬಹುಮಾನಗಳನ್ನು ಪಡೆದು ಪ್ರತಿಭಾವಂತ ವಿದ್ಯಾರ್ಥಿ ಪ್ರಶಸ್ತಿಗೆ ಭಾಜನರಾದರು. ಶೇಷಾದ್ರಿಪುರಂ ಕನ್ನಡ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂ.ಎ./ಪದವಿಯನ್ನು ವ್ಯಾಸಂಗ ಮಾಡಿದರು. ಪ್ರಸ್ತುತ ಅವರು ಕನ್ನಡ ಉಪನ್ಯಾಸಕರು.  ಕೃತಿಗಳು: ಸಾಹಿತ್ಯ ಶಿಲ್ಪಿ : ಚಿ ಉದಯಶಂಕರ್ , ಸ್ವರ ರಾಗ ಸುಧಾ : ಸಿನಿಮಾ ಸಂಗೀತದ ಕ್ಲಾಸಿಕಲ್ ಟಚ್.  ...

READ MORE

Related Books