ಇಷ್ಟೇನಾ !

Author : ಬಸವರಾಜ್ ಬಡಿಗೇರ್

Pages 216

₹ 250.00

Buy Now


Year of Publication: 2023
Published by: ಬಡಿಗೇರ್ ಪ್ರಕಾಶನ
Address: ನಂ:68-69, ಶ್ರೀಜ, 9ನೇ ಜಿ. ಕ್ರಾಸ್, ಬಂಜಾರ ಆರ್ಕಾಡ್ಸ್, ಬಂಜಾರ ಲೇಔಟ್, ಹೊರಮಾವು- ಆಗರ
Phone: 7411744343

Synopsys

ನಿಮ್ಮನ್ನು ಯಶಸ್ಸು ಹಾಗು ಸಂತೋಷದ ಜೀವನದ ಕಡೆಗೆ ಕರೆದೊಯ್ಯುವ ವಿಶಿಷ್ಟ ಅನುಭವವೇ ಇಷ್ಟೇನಾ ! .... ಈಗ ನಡೆಸುತ್ತಿರುವ ಜೀವನಕ್ಕಿಂತ ಇನ್ನೂ ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆನ್ನುವವರಿಗೆ ಮತ್ತು ನಿಮ್ಮ ಜೀವನವನ್ನು ಸಾಧನೆಯ ಕಡೆ ತೆಗೆದುಕೊಂಡು ಹೋಗಬಯಸುವವರಿಗೆ ಈ ಬುಕ್ ನಿಮ್ಮೊಂದಿಗೆ ಕೈ ಜೋಡಿಸಿ ನಿಮ್ಮನ್ನು ಯಶಸ್ಸು ಹಾಗೂ ಸಂತೋಷದ ಕಡೆಗೆ ತೆಗೆದುಕೊಂಡು ಹೋಗುವ ಅತ್ಯುತ್ತಮ ಗೆಳೆಯನಾಗಬಲ್ಲದು.. ಆಡು ಭಾಷೆಯಲ್ಲಿಯೇ ಹೇಳುತ್ತಾ ತುಂಬಾ ಸರಳವಾಗಿ ಎಂಥವರಿಗೂ ಅರ್ಥಮಾಡಿಸುವ ಶೈಲಿಯೇ ಈ " ಇಷ್ಟೇನಾ ! " ಬುಕ್ ನ ವಿಶೇಷತೆ.

ದಿನ ಬಳಕೆಯ ಮಾತುಗಳನ್ನೇ ಟೈಟಲ್ಸ್ ಗಳನ್ನಾಗಿ ಬಳಸಿಕೊಂಡು, ಅದರಲ್ಲಿಯೇ ಪಾಸಿಟಿವ್ ಅಂಶಗಳನ್ನು ಚರ್ಚಿಸಿ, ನಿಮ್ಮನ್ನು ಎಚ್ಚರಿಸುತ್ತಾ ಓದಿದ ಮೊದಲ ದಿನದಿಂದಲೇ ನಿಮ್ಮನ್ನು ಜೀವನದ ಇನ್ನೊಂದು ಹೊಸ ಅಧ್ಯಾಯಕ್ಕೆ ಕರೆದುಕೊಂಡು ಹೋಗುತ್ತದೆ. ನಾನು ಏನು ಮಾಡಬೇಕು? , ಏನು ಮಾಡಿದರೆ ಸರಿ? ನಾನು ಏಕೆ ಇನ್ನೂ ಸಕ್ಸಸ್ ಆಗಿಲ್ಲ ? ...ಹೀಗೆ ಜೀವನದಲ್ಲಿ ಬರುವ ಪ್ರಶ್ನೆಗಳಿಗೆ, ಗೊಂದಲಗಳಿಗೆ ಉತ್ತರವನ್ನು ತುಂಬಾ ಸರಳವಾಗಿ ವಿವರಿಸಿ ಮುಂದಿನ ದಾರಿಗಳನ್ನು ಈ ಬುಕ್ ತೋರಿಸುತ್ತದೆ. ಅಷ್ಟಕ್ಕೇ ಸುಮ್ಮನಾಗದೆ, ನಿಮ್ಮನ್ನು ಕಾರ್ಯೋನ್ಮುಖರಾಗುವಂತೆ ಮಾಡಿ ಎಲ್ಲ ಓದುಗರಿಗೂ ಸಕ್ಸಸ್ ಸಿಗುವಂತೆ ಮಾಡುವ ಪ್ರಯತ್ನವನ್ನು ' ಇಷ್ಟೇನಾ ! ' ಮಾಡುತ್ತದೆ .

About the Author

ಬಸವರಾಜ್ ಬಡಿಗೇರ್

ಬಸವರಾಜ್ ಬಡಿಗೇರ್ ಅವರು ಎಂಜಿನಿಯರಿಂಗ್ ಪದವೀಧರರು. ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಮ್ಯಾನೆಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೊಸ ಪ್ರಯತ್ನವಾಗಿ ಪುಸ್ತಕ ಬರಹಗಾರರಾಗಿ ಹೊರ ಹೊಮ್ಮಿದ್ದಾರೆ. ಇಷ್ಟೇನಾ ! - yes ! ನಾನು ಬದಲಾಗಬೇಕು ( ಸಕ್ಸಸ್ ಕಾಲಿಂಗ್ ) ಎಂಬ ವ್ಯಕ್ತಿತ್ವ ವಿಕಸನದ ಬರಹಗಳ ಗುಚ್ಚವನ್ನು ಪುಸ್ತಕವನ್ನಾಗಿ ಬಡಿಗೇರ್ ಪ್ರಕಾಶನದ ಮುಖಾಂತರ ಹೊರ ತಂದಿದ್ದಾರೆ. ಕೃತಿಗಳು : ಇಷ್ಟೇನಾ ! ...

READ MORE

Excerpt / E-Books

https://amzn.to/3q9vyJx

 

Reviews

1. ಡಾ.ಹೆಚ್. ಎಸ್. ವೆಂಕಟೇಶ್ ಮೂರ್ತಿ

ಸಾಮಾನ್ಯವಾಗಿ ನಮ್ಮ ಸುತ್ತ ತಿರುಗುವ ಸಂಗತಿಗಳು ಕೆಲವಿರುತ್ತವೆ. ಸಕಾರಾತ್ಮಕವಾಗಿ ನೋಡಿದರೆ ಅವು ಲಾಭಪ್ರದ. ನೇತ್ಯಾತ್ಮಕವಾಗಿ ನೋಡದೆವೋ ಅದು ಆತ್ಮನಾಶಕ್ಕೆ ದಾರಿ.  ಇಷ್ಟೇನಾ! ದಲ್ಲಿ ಬೇರೆಬೇರೆ ಲೇಖನಗಳಲ್ಲಿ ಈ  ಸಂಗತಿಗಳನ್ನು ಬಸವರಾಜ್ ಅವರು  ಹೃದ್ಯ ವಾಗಿ ನಿರೂಪಿಸುತ್ತಾರೆ. ‌ಸರಳ ಸುಂದರ ಆಹ್ಲಾದಕರ ಬರವಣಿಗೆ. ಸಂತೋಷ ಮತ್ತು ಮನೋವಿಕಾಸ ಎರಡಕ್ಕೂ ದಾರಿ ಮಾಡಿಕೊಡುವ ಬರವಣಿಗೆ.

2. ಪ್ರೊ. ರಾಘವೇಂದ್ರ ಪಾಟೀಲ್

ಚೀನಿ ತತ್ವಜ್ಞಾನಿಗಳಾದ ಯೆನ್ ಯುಟಾಂಗ್ ಅವರ ವಿಸ್ಡಮ್ ಆಫ್ ಇಂಡಿಯಾ ಹಾಗೂ ಕನ್ಫ್ಯೂಸಿಯಸ್ ಅವರ ವಿಸ್ಡಂ ಆಫ್ ಕನ್ಫ್ಯೂಸಿಯಸ್, ಮುಂತಾದ, ಸರಳವಾದರೂ ಅತ್ಯಂತ ಮನನೀಯವಾದ ತತ್ವ ಗ್ರಂಥಗಳನ್ನು ಓದಿದಾಗ ದೊರೆತ ಓದಿನ ಆನಂದವು ಮತ್ತು ಅರಿವು ಇಷ್ಟೇನಾ! ಓದಿದಾಗ ದೊರಕುವುದು.
  ಎಲ್ಲ ಮಾನಸಿಕ  ಕ್ಲಿಷ್ಟತೆ, ಸಂಕೀರ್ಣತೆಗಳನ್ನು ಸಂಪೂರ್ಣವಾಗಿ ಜೀರ್ಣಮಾಡಿಕೊಂಡು, ಸುಭಗ ವ್ಯಕ್ತಿತ್ವ ಮತ್ತು ಸುಂದರ ಜೀವನವನ್ನು ಕಟ್ಟಿಕೊಳ್ಳುವ ಕುರಿತಂತೆ ಜೀವನವಿಧಾನದ ನಲವತ್ತು ಬಗೆಗಳನ್ನು ಇಷ್ಟೇನಾ ! ದಲ್ಲಿ ಕಂಡು ಕೊಳ್ಳಬಹುದು.

3. ಪ್ರೊ. ನರಹರಿ ವಿ

ನಲವತ್ತು ಅಧ್ಯಾಯಗಳ "ಇಷ್ಟೇನಾ"  ಒಂದು ರೀತಿಯಲ್ಲಿ ವ್ಯಕ್ತಿತ್ವ ವಿಕಸನದಂತಹ ಪುಸ್ತಕಗಳ ಸಾಲಿಗೆ ಸೇರುವಂತಹ ಕೃತಿ. ಆಡು ಭಾಷೆಯಲ್ಲಿ ಹೇಳುತ್ತಾ ಹೋದಂತೆ ಇರುವುದರಿಂದ ಓದಿಸಿಕೊಂಡು ಹೋಗುತ್ತದೆ.ಅಧ್ಯಾಯಗಳ ಹೆಸರುಗಳು ಆಪ್ತವಾಗಿ ಒಪ್ಪುವಂತಿವೆ.
ವಿಚಾರ ಸರಣಿ, ಶೈಲಿಯ ಓಘ, ಸರಳ ಶಬ್ದಗಳ ಬಳಕೆ, ಲಘು ಹಾಸ್ಯ, ಉದಾಹರಣೆಗಳು, ಸಂದರ್ಭಗಳು, ಇತ್ಯಾದಿ ಸಮಯೋಚಿತ ಮತ್ತು ಶ್ಲಾಘನೀಯ.
ಓದುಗರನ್ನು  ಸಳೆಯುತ್ತದೆ.

4. ಡಾ. ರಾಧಾಕೃಷ್ಣ ಪಲ್ಲಕ್ಕಿ

ಮೊದಲ ಓವರ್, ಮೊದಲ ಬಾಲ್ ಸಿಕ್ಸರ್ ಹೊಡೆದಾಗ ಆಟವನ್ನು ನೋಡುತ್ತಿರುವ ಕ್ರೀಡಾಭಿಮಾನಿಗಳು ಚಪ್ಪಾಳೆ ವಿಜಿಲ್ ಶಬ್ದ ಮಾಡಿದಾಗ ಕ್ರೀಡಾಪಟುವಿಗೆ ಆಗುವ ಆನಂದ ಅಷ್ಟಿಷ್ಟಲ್ಲ,ಇಂಥದೇ ಸಂದರ್ಭ ಒದಗಿ ಬಂದದ್ದು  ಇಷ್ಟೇನಾ ! ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ.
ಇಷ್ಟೇನಾ!  ಕೃತಿಯ ಕರ್ತೃ ಖುಷಿಯಿಂದ ಕೃಷಿ ಮಾಡಿ ಜೊಳ್ಳು ಕಾಳುಗಳ ಗಾಳಿಗೆ ತೂರಿ ಗಟ್ಟಿ ಪದಗಳನ್ನು ಓದುಗರಿಗೆ ಉಣಬಡಿಸಿ, ಓದುಗರನ್ನು ಎಚ್ಚರಿಸುತ್ತಾ ಹೋಗುತ್ತಾರೆ.

Related Books