ವೀ ಕೆನ್ ವಿನ್

Author : ಎಂ.ಎಲ್. ರಾಘವೇಂದ್ರರಾವ್‌

Pages 182

₹ 80.00




Year of Publication: 2011
Published by: ವಾಸನ್ ಪಬ್ಲಿಕೇಷನ್ಸ್,
Address: # 25, ವಾಸನ್ ಟವರ್, ಗುಡ್ ಶೆಡ್ ರಸ್ತೆ, ಟಿಸಿಎಂ ರಾಯನ್ ರಸ್ತೆ, ಸುಭಾಶ್ ನಗರ, ಕಾಟನ್ ಪೇಟೆ, ಬೆಂಗಳೂರು-560053
Phone: 08048535855

Synopsys

ಹಿರಿಯ ಲೇಖಕರಾದ ಟಿ.ಎಸ್. ರಾವ್ ಹಾಗೂ ಎಂ.ಎಲ್. ರಾಘವೇಂದ್ರರಾವ್ ಅವರು ಜಂಟಿಯಾಗಿ ಬರೆದ ಪ್ರೇರಣಾತ್ಮಕ ಕೃತಿ-ವೀ ಕೆನ್ ವಿನ್. ‘ನಾವೂ ಗೆಲ್ಲುತ್ತೇವೆ’ ಎಂಬ ವಿಶ್ವಾಸವಿದ್ದರೆ ಗೆಲುವು ಸುಲಭ ಎಂಬುದು ಇಲ್ಲಿಯ ಬರಹಗಳ ಆಶಯ. ಆತ್ಮವಿಶ್ವಾಸ, ಪ್ರಯತ್ನ ಹಾಗೂ ಛಲವಿದ್ದರೆ ಯಶಸ್ಸು ನಮ್ಮದೇ ಎಂಬುದು ಈ ಕೃತಿಗೆ ನೀಡಿರುವ ಉಪಶೀರ್ಷಿಕೆ. ಈ ಮೂರು ಅಂಶಗಳನ್ನು ಎಚ್ಚರದ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದ್ದರೆ ಎಂತಹ ಕಠಿಣ ಕೆಲಸವೂ ಸುಲಭವಾಗಿ ಗುರಿ ಸಾಧನೆ ಸಾಧ್ಯವಾಗುತ್ತದೆ. ಗುರಿ ಸಾಧನೆಯಲ್ಲಿ ನಿರಾಶೆ-ಹತಾಶೆಗಳನ್ನು ಹೇಗೆ ಮೆಟ್ಟಿ ನಿಲ್ಲಬೇಕು ಎಂಬುದಕ್ಕೂ ಈ ಕೃತಿಯಲ್ಲಿಯ ವಿಚಾರಗಳು ವ್ಯಕ್ತಿಗೆ ಮನೋಸ್ಥೈರ್ಯ ತುಂಬುತ್ತವೆ.

About the Author

ಎಂ.ಎಲ್. ರಾಘವೇಂದ್ರರಾವ್‌
(20 December 1942)

ಹಿರಿಯ ಸಾಹಿತಿ, ಪ್ರಕಾಶಕರಾಗಿಯೂ ಪರಿಚಿತರಾಗಿದ್ದ ರಾಘವೇಂದ್ರರಾವ್‌ ಅವರು 1942 ಡಿಸೆಂಬರ್‌ 20ರಂದು ಮೈಸೂರಿನಲ್ಲಿ ಜನಿಸಿದರು.  ತಾಯಿ ಅನಸೂಯಾಬಾಯಿ. ತಂದೆ ಲಕ್ಷ್ಮಣರಾವ್‌. ಇವರು ರಚಿಸಿದ ಕತೆಗಳು ಮೊದಲು ಪ್ರಕಟವಾಗಿದ್ದ ಜನಪ್ರಗತಿ ಹಾಗೂ ಮಲ್ಲಿಗೆ ಪತ್ರಿಕೆಗಳಲ್ಲಿ. ಮುರಳಿ ಎಂಬ ಮಾಸ ಪತ್ರಿಕೆಯಲ್ಲಿ ಸಹಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಇವರು ಧೃವ ಪತ್ರಿಕೆಯ ಸಹಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಮಧುರ ಎಂಬ ಪ್ರಕಾಶನ ಸಂಸ್ಥೆಯನ್ನು ಆರಂಭಿಸಿದ ಇವರು ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ತೆಲುಗಿನ ಯಂಡಮೂರಿ ವೀರೇಂದ್ರನಾಥ್‌, ಕಳಾಪೂರ್ಣ ಲತಾ, ಮಧುರಾಂತಕಂ ರಾಜೇಶ್ವರರಾವ್‌, ಸೂರ್ಯದೇವರ ರಾಮಮೋಹನ ರಾವ್‌, ಮಾಲತಿ ಚೆಂಡೂರ್‌ ಸೇರಿದಂತೆ ಹಲವಾರು ಲೇಖಕರ ಅಂತರ್ಮುಖ, ತುಳಸೀವನ, ರಾಗ ತರಂಗಿಣಿ, ...

READ MORE

Related Books