ಷರತ್ತುಗಳು ಅನ್ವಯಿಸುತ್ತವೆ

Author : ಸದಾಶಿವ್ ಸೊರಟೂರು

Pages 134

₹ 130.00




Year of Publication: 2019
Published by: ಭಾವಸಿಂಚನಾ ಪ್ರಕಾಶನ
Address: ವಾರ್ಡ್ ನಂ.13, ಆಂಜನೇಯ ದೇವಸ್ತಾನದ ಹಿಂಭಾಗ ಮಹಾವೀರ ನಗರ, ಕುಣಿಗಲ್-572130, ತುಮಕೂರು ಜಿಲ್ಲೆ
Phone: 9036402083

Synopsys

ಬದುಕಿನ ಬೊಗಸೆಯಲ್ಲಿ ಬಂದು ಕೂರುವ ತಲ್ಲಣಗಳನ್ನಾಗಲಿ, ಸಂಕಟಗಳನ್ನಾಗಲಿ ತಾಜಾ ತಾಜಾ ಅನುಭವಿಸಿ ಅದರಿಂದ ಕಲಿತು, ಮತ್ತೆ ಅದರೊಂದಿಗೆ ಒಂದಾಗಿ ಜೀವನ ಒಡ್ಡುವ ಷರತ್ತುಗಳನ್ನು ಹೇಗೆ ಎದುರಿಸುವುದು ಎಂದು ಲೇಖಕರು ಈ ಕೃತಿಯಲ್ಲಿ ಚರ್ಚಿಸಿದ್ದಾರೆ. ಲೈಫ್ ಸ್ಟೈಲ್, ವ್ಯಕ್ತಿತ್ವಕ್ಕೆ ಸಂಬಂಧಿಸಿದ ಇಲ್ಲಿಯ ಲೇಖನಗಳು ಕನ್ನಡದ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬದುಕಿನಲ್ಲಿ ಸೋತವರಿಗೆ ಈ ಕೃತಿ ಆಶಾದಾಯಕ ವಿಶ್ವಾಸವನ್ನು ತುಂಬಬಲ್ಲವು.

About the Author

ಸದಾಶಿವ್ ಸೊರಟೂರು
(18 June 1983)

ಸದಾಶಿವ್ ಸೊರಟೂರು ಅವರು ಜನಿಸಿದ್ದು 1983 ಜೂನ್ 18ರಂದು. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನವರಾದ ಸದಾಶಿವ ಪ್ರಸ್ತುತ ಚಿಂತಾಮಣಿ ತಾಲ್ಲೂಕಿನ ದೊಡ್ಡಬೊಮ್ಮನಹಳ್ಳಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ.  ಇವರ ಪ್ರಮುಖ ಕೃತಿಗಳೆಂದರೆ ಕನಸುಗಳಿವೆ ಕೊಳ್ಳುವವರಿಲ್ಲ, ಹೆಸರಿಲ್ಲದ ಬಯಲು, ಕನಸುಗಳಿವೆ ಕೊಳ್ಳುವವರಿಲ್ಲ, ಹೊಸ್ತಿಲಾಚೆ ಬೆತ್ತಲೆ, ತೂತು ಬಿದ್ದ ಚಂದಿರ ಮುಂತಾದವು. ...

READ MORE

Related Books