ಭರವಸೆ

Author : ಜೆ.ಪಿ. ದೊಡಮನಿ

Pages 89

₹ 80.00
Year of Publication: 2024
Published by: ಸುಶಿಲ್ ಪ್ರಕಾಶನ
Address: ತೇರದಾಳ

Synopsys

‘ಭರವಸೆ’ ಪ್ರೊ.ಜೆ.ಪಿ. ದೊಡಮನಿ ಅವರ ಕವನ ಸಂಕಲನ. ಈ ಕೃತಿಗೆ ಡಾ. ಡಿ.ಎಸ್. ದೊಡ್ಡಮನಿ ಕಡತೋಕಾ (ಹೊನ್ನಾವರ) ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ತಿಳಿಸುತ್ತಾ ‘ಡಾ. ಜೆ. ಪಿ. ದೊಡಮನಿಯವರು ನಮ್ಮ ಮಧ್ಯದಲ್ಲಿರುವ ಅಪರೂಪದ ವಿದ್ವಾಂಸರು. ಶರಣರ ಕುರಿತು ಕನ್ನಡ ಕಾದಂಬರಿಗಳು (ಪಿ.ಎಚ್‌ಡಿ. ಮಹಾಪ್ರಬಂಧ), ಪ್ರತಿಧ್ವನಿ, ಮಹಾತ್ಮಾ ಜ್ಯೋತಿರಾವ್‌ ಫುಲೆ, ಭಾರತ ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ, ಡಾ. ಬಾಬಾಸಾಹೇಬ ಅಂಬೇಡ್ಕರ, ರಾಜರ್ಷಿ ಶಾಹೂ ಛತ್ರಪತಿ, ಜ್ಯೋತಿರಾವ್‌ ಪುಲೆ ಮತ್ತು ರೈತ ಚಳುವಳಿ ಹೀಗೆ ಅನೇಕ ಗಂಭೀರವಾದ ವೈಚಾರಿಕ ಕೃತಿಗಳನ್ನು ಅನುವಾದಿಸಿರುವ ಶ್ರೀಯುತರು ಈಗ ಭರವಸೆ" ಎಂಬ ಎರಡನೆ ಕವನ ಸಂಕಲನ ಪ್ರಕಟಿಸುತ್ತಿರುವುದು ಸಂತೋಷದ ವಿಷಯ. ಈ ಸಂಕಲನದಲ್ಲಿ ಹನಿಗವನ, ಅನುವಾದ ಹಾಗೂ ಕಾವ್ಯಸೇರಿ ಒಟ್ಟು 40 ಕವಿತೆಗಳಿವೆ.

ಡಾ.ಜೆ.ಪಿ. ಯವರು ಯಾವುದೇ ಅಧ್ಯಯನವನ್ನು ಪ್ರಾರಂಭಿಸುವ ಮುಂಚೆ ಅವರು ಹಾಕಿಕೊಳ್ಳುವ ಚೌಕಟ್ಟು ಬೆರಗುಗೊಳಿಸುವಂಥದ್ದು. ಈ ಕವನ ಸಂಕಲನದಲ್ಲಿ ಹಾಗೆ ಬೆರಗುಗೊಳಿಸುವಂಥ ಅನೇಕ ಧ್ವನಿಪೂರ್ಣ ಕವಿತೆಗಳಿವೆ. ಅವರ ಸ್ವಾನುಭವ ಪ್ರಾಮಾಣಿಕವಾಗಿರುವುದರಿಂದ ಸಂವಹನ ಶಕ್ತಿ ಹೆಚ್ಚಾಗಿದೆ. ಅನುವಾದ ಸಾಹಿತ್ಯದಲ್ಲಿ ಹೊಸ ಅಲೆಗಳನ್ನು ಸೃಷ್ಟಿಸುತ್ತಿರುವ ಡಾ. ಜೆ. ಪಿ. ಅವರು ಮತ್ತೆ ಕಾವ್ಯದತ್ತ ಹೊರಳಿದ್ದು ಅವರಲ್ಲಿನ ಸೃಜನಶೀಲತೆಗೆ ಸಾಕ್ಷಿಯಾಗಿದೆ. ಸಾಮಾನ್ಯದೃಷ್ಟಿಗೆ ಗೋಚರಿಸದ ಕೆಲವು ಗಹನವಾದ ಮನುಷ್ಯ ಚರಿತ್ರೆಯ ವಾಸ್ತವಗಳನ್ನು ತಮ್ಮ ಕವನಗಳ ಮೂಲಕ ಬಹಿರಂಗ ಪಡಿಸಿದ್ದಾರೆ. ತೆರೆಮರೆಯಲ್ಲೇ ಇದ್ದ ಈ ಸಾಧನಾಶೀಲರ ಕಾವ್ಯ “ಭರವಸೆಯ ಮೂಲಕ ಅವರ ಸಾಮಾಜಿಕ ಬದ್ಧತೆಯ ಕ್ರಿಯಾಶೀಲತೆಗೆ ಸಾಕ್ಷಿ ಪ್ರಜ್ಞೆಯಂತಿದೆ. ಕಾವ್ಯ ವತ್ತು ತಾನು ನೆಚ್ಚಿಕೊಂಡ ಸಿದ್ಧಾಂತ ಇವೆರಡನ್ನು ಹದಗೊಳಿಸುವಲ್ಲಿ ಎಚ್ಚರವಹಿಸಿ, ತಮ್ಮ ಅಧ್ಯಯನ ಅನುಭವ ಹಾಗೂ ಅಗತ್ಯಗಳನ್ನಾಧರಿಸಿ ಒಂದು ನಿರ್ದಿಷ್ಟ ಚೌಕಟ್ಟಿನ ಹಿನ್ನೆಲೆಯಲ್ಲಿ ಕಾವ್ಯ ರಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಗಂಭೀರ ಕಾವ್ಯ ರಚಿಸುವರೆಂಬ ಭರವಸೆ ನೀಡಿದ್ದಾರೆ ಎಂದು ಕೃತಿಗೆ ಶುಭ ಹಾರೈಸಿದ್ದಾರೆ. 

About the Author

ಜೆ.ಪಿ. ದೊಡಮನಿ
(01 May 1964)

ಲೇಖಕ ಜೆ.ಪಿ. ದೊಡಮನಿ ಮೂಲತಃ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ತೇರದಾಳ ಪಟ್ಟಣದವರು. ತೇರದಾಳದ ಸರಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಹಾಗೂ ಶ್ರೀ ಪ್ರಭುಲಿಂಗ ಹೈಸ್ಕೂಲಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪಡೆದ ಅವರು, ಶ್ರೀ ಶಿವಾನಂದ ಕಾಲೇಜು, ಕಾಗವಾಡ ಹಾಗೂ ಕಲಾ ವಾಣಿಜ್ಯ ಮಹಾವಿದ್ಯಾಲಯ, ರಾಯಬಾಗದಲ್ಲಿ ಪಿ. ಯು. ಸಿ. ಹಾಗೂ 1987ರಲ್ಲಿ ಬಿ. ಎ. (ಕನ್ನಡ ಮೇಜರ್) ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯ, ಕನ್ನಡ ಅಧ್ಯಯನ ಪೀಠದಿಂದ 1989ರಲ್ಲಿ ಕನ್ನಡ ಎಂ.ಎ, 1991ರಲ್ಲಿ ಡಿಪ್ಲೋಮಾ ಇನ್ ಜೈನಾಲಜಿ, 1993ರಲ್ಲಿ ವಿಶ್ವವಿದ್ಯಾಲಯದ ಧನಸಹಾಯ ಆಯೋಗ ನಡೆಸಿದ ...

READ MORE

Related Books