ಲೇಖಕ ಕೆ. ಶ್ರೀನಿವಾಸರೆಡ್ಡಿ ಅವರು ಬರೆದ ಪ್ರೇರಣಾತ್ಮಕ ಲೇಖನಗಳ ಸಂಕಲನ-ನಿರಂತರ. ಮನಸ್ಸೆಂಬ ಮಾಯಾ ಕುದುರೆಯನ್ನೇರಿ ಅಂತ್ಯ ಕಾಣದ ಹಾದಿಯಲ್ಲಿ ಕಂಡುಂಡ ಕಾಣ್ಕೆಗಳ, ಅನುಭವಗಳು ಇಲ್ಲಿ ದಾಖಲಾಗಿವೆ. ನಾವು ಸಮರ್ಥರಾದರೆ ಅವಕಾಶಗಳು ನಮ್ಮ ಹಿಂದೆ ಬರುತ್ತವೆ. ನಾವು ಏನನ್ನಾದರೂ ಮಾಡಲು ಪ್ರಯತ್ನಿಸಿದರೆ ಹಲವಾರು ದಾರಿಗಳು ನಮಗೆ ಹೊಳೆಯುತ್ತವೆ. ಆದ್ದರಿಂದ ನಮಗೆ ಅವಕಾಶ ಸಿಗಲಿಲ್ಲ ಎಂಬುದೇ ಸುಳ್ಳು ಎನ್ನುತ್ತಾರೆ ಲೇಖಕ ಕೆ. ಶ್ರೀನಿವಾಸ ರೆಡ್ಡಿ.
ಆಶಾಭಾವನೆಯನ್ನೇ ಕಳೆದುಕೊಳ್ಳುತ್ತಿರುವ ಯುವ ತಲೆಮಾರಿನೊಳಗೆ ಬದುಕಿನ ಪ್ರೇರಣೆಗಳನ್ನು ತುಂಬುವಂತಹ ಸ್ಪೂರ್ತಿದಾಯಕ ಲೇಖನಗಳನ್ನು ಈ ಕೃತಿಯಲ್ಲಿ ನೀಡಿದ್ದಾರೆ.
©2021 Bookbrahma.com, All Rights Reserved