ಅಷ್ಟಾವಂಕ ಯಶೋಧರ

Author : ಎನ್.ಆರ್‌. ನಾಯಕ

Pages 132

₹ 150.00




Year of Publication: 2020
Published by: ಸಿವಿಜಿ ಪ್ರಕಾಶನ
Address: ಸಿವಿಜಿ ಪ್ರಕಾಶನ,No.277,5th Cross, ಲಗ್ಗೆರೆ ಬೆಂಗಳೂರು-560058
Phone: 9901921650

Synopsys

'ಅಷ್ಟಾವಂಕ-ಯಶೋಧರ', ಕನ್ನಡದ ಹಿರಿಯ ಲೇಖಕ ಎನ್. ಆರ್.ನಾಯಕ ಅವರ ತೊಂಬತ್ತನೆಯ ಕೃತಿ.ಮನುಷ್ಯನ ಮೂಲಭೂತ ಪ್ರವೃತ್ತಿ(basic instinct)ಯಾದ ಕಾಮದ ಹಾಗೂ ಕಾಮಕ್ಕೆ ಮೂಲವಾದ ಪ್ರೇಮದ ವಿವಿಧ ಆಯಾಮಗಳ ಸುತ್ತ ಈ ಕಥೆಗಳು ಸುತ್ತುತ್ತಿದ್ದರೂ, ಯಾವುದೂ ಅತಿಯೆನಿಸದಂತೆ, ನಯವಾಗಿ, ಸುಂದರವಾಗಿ ಹೇಳಿ ಮುಗಿಸಿಬಿಡುತ್ತಾರೆ. ಎಲ್ಲರೊಳಗೂ ವಿಕೃತಿಯ ಅಷ್ಟಾವಕ್ರನೂ, ಸಂಸ್ಕೃತಿಯ ಯಶೋಧರೆಯೂ ಸಮಪ್ರಮಾಣದ ಮಿಶ್ರಣದಂತೆ ಇದ್ದೇ ಇರುತ್ತಾರೆ ಎಂಬುದನ್ನು ಬಹು ಮಾರ್ಮಿಕವಾಗಿ ಈ ಕಥೆಗಳು ಧ್ವನಿಸುತ್ತವೆ.

About the Author

ಎನ್.ಆರ್‌. ನಾಯಕ
(28 June 1935)

ಕವಿ, ನಾಟಕಕಾರ, ಪ್ರಕಾಶಕ, ಸಂಘಟಕ, ಸಮಾಜಚಿಂತಕ, ಸಾಹಿತಿ ಎನ್.ಆರ್‌. ನಾಯಕ ಅವರು ಜನಿಸಿದ್ದು 1935 ಜೂನ್‌ 28ರಂದು. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಭಾವಿಕೇರಿಯಲ್ಲಿ ಜನನ. ಇವರ ಪೂರ್ಣ ಹೆಸರು ನಾರಾಯಣ ರಾಮ ನಾಯಕ. ತಂದೆ ರಾಮನಾಯಕರು. ತಾಯಿ ದೇವಮ್ಮ. ವಿದ್ಯಾರ್ಥಿ ದೆಸೆಯಿಂದಲೇ ಸ್ವಾತಂತ್ಯ್ರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಇವರು ಬಿ.ಎ. ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಇವರು ಸಾಹಿತ್ಯ ಕೃಷಿಯಲ್ಲಿಯು ತೊಡಗಿಸಿಕೊಂಡಿದ್ದ ಇವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಪ್ರಾಧ್ಯಾಪಕರಾಗಿ, ಪ್ರಾಚಾರ್‍ಯರಾಗಿ ಶಿಕ್ಷಣ ಕ್ಷೇತ್ರದಲ್ಲಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ಜನಪದ ಸಾಹಿತ್ಯದಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿರುವ ಅವರು ಸುಗ್ಗಿ ಕುಣಿತ, ಗುಮಟೆ ಪಾಂಗು, ...

READ MORE

Related Books