ಚೂರು ಚಂದ್ರ ಮೂರು ಕಿರಣ

Author : ಸಿಂಧು ಚಂದ್ರ ಹೆಗಡೆ

Pages 108

₹ 135.00
Year of Publication: 2023
Published by: ಸೀಮಾ ಬುಕ್ಸ್
Address: ನಂ.12, ಬೈರಸಂದ್ರ ಮುಖ್ಯ ರಸ್ತೆ, ಜಯನಗರ 1ನೇ ಬ್ಲಾಕ್ ಪೂರ್ವ, ಬೆಂಗಳೂರು 560 001
Phone: 9036312786

Synopsys

‘ಚೂರು ಚಂದ್ರ ಮೂರು ಕಿರಣ’ ಸಿಂಧುಚಂದ್ರ ಹೆಗಡೆ ಅವರ ರಚನೆಯ ಕಥಾಸಂಕಲನವಾಗಿದೆ. ಕತೆ ಮತ್ತು ಪ್ರಬಂಧ- ಈ ಎರಡೂ ಪ್ರಕಾರಗಳನ್ನೂ ಬೆಸೆದಂಥ ಕಥನ ಕ್ರಮ ಇದು. ಕೇವಲ ಕತೆ ಹೇಳುವವನಿಗೆ ಒಂದು ನಿಚ್ಚಳವಾದ ಗುರಿಯಿರುತ್ತದೆ. ಅಂಥ ಕತೆಗಾರರು ತಾವು ಸೃಷ್ಟಿಸಿದ ಪಾತ್ರವನ್ನು ಬೆನ್ನಟ್ಟುತ್ತಾ ಹೋಗುತ್ತಾರೆ. ಆ ಹುರುಪಿನಲ್ಲಿ, ತೀವ್ರತೆಯಲ್ಲಿ ಸುತ್ತಲಿನ ಪರಿಸರವನ್ನು ನೋಡುವುದನ್ನು ಮರೆಯುತ್ತಾರೆ. ಪ್ರಬಂಧಕಾರನಿಗೆ ಪಾತ್ರದ ಹಂಗಿಲ್ಲ. ಅದು ಬರೀ ಸುತ್ತಾಡುವ ಲಹರಿ. ಸಿಂಧುಚಂದ್ರ ಏಕಕಾಲಕ್ಕೆ ಎರಡೂ ಕೆಲಸವನ್ನೂ ಮಾಡಬೇಕಾಗಿದೆ. ಅದನ್ನು ಅವರು ಮುಚ್ಚಟೆಯಿಂದ ಮಾಡಿದ್ದಾರೆ ಕೂಡ. ಹನ್ನೆರಡು ಕತೆಗಳ ಈ ಸಂಕಲನದಲ್ಲಿ ವೈವಿಧ್ಯವಿದೆ. ಹುಡುಕಾಟವಿದೆ, ಸಿಂಧುಚಂದ್ರ ಏಕಾಂತದಲ್ಲಿ ಕಟ್ಟುತ್ತಾ ಹೋದ ಕತೆಗಳಲ್ಲಿ ಅವರ ಮನಸ್ಸು ಕತೆಯೊಳಗೆ ಮುಳುಗಿ ಏಳುವುದನ್ನು ನೋಡುತ್ತೇವೆ. ಕೆಲವು ಕತೆಗಳು ಎಷ್ಟು ಓದಿದರೂ ಮುಗಿಯುವುದಿಲ್ಲ, ಕೆಲವು ಕತೆಗಳು ಮುಗಿದ ನಂತರವೂ ಮುಂದುವರಿಯುತ್ತವೆ. ಇನ್ನು ಕೆಲವು ಕತೆಗಳು ಮುಗಿದ ನಂತರ ಶುರುವಾಗುತ್ತವೆ. ಹೀಗಾಗಿ ಈ ಕತೆಗಳನ್ನು ಸಿಂಧುಚಂದ್ರ ಅವರ ಪ್ರಯೋಗಶೀಲತೆಯ ಫಲ ಎಂದು ಕರೆಯಬಹುದು. ಇಂಥ ಉತ್ಕಟವಾದ ಕಥನಪ್ರೀತಿ ಮತ್ತು ಬಿಡುಬೀಸಾಗಿ ಬರೆಯುವ ಹುರುಪು- ಇದರಾಚೆಗೂ ಕತೆಗಳು ಮತ್ತೇನನ್ನೋ ಬಯಸುತ್ತಾ ಕಾದುಕೂತಿರುತ್ತದೆ ಎಂಬುದನ್ನು ಸಿಂಧುಚಂದ್ರ ಅರ್ಥಮಾಡಿಕೊಂಡಂತೆ ಕತೆಯಿಂದ ಕತೆಗೆ ಬೆಳೆಯುತ್ತಾ ಸಾಗಿದ್ದಾರೆ ಎನ್ನುತ್ತಾರೆ ಜೋಗಿ (ಗಿರೀಶ್ ರಾವ್ ಹತ್ವಾರ್) . 

 

About the Author

ಸಿಂಧು ಚಂದ್ರ ಹೆಗಡೆ
(06 July 1977)

ಕವಯಿತ್ರಿ, ಕತೆಗಾರ್ತಿ ಸಿಂಧು ಚಂದ್ರ ಅವರು ಮೂಲತಃ ಉತ್ತರಕನ್ನಡ ಜಿಲ್ಲೆಯವರು. ತಂದೆ ಜಯರಾಮ ಹೆಗಡೆ, ತಾಯಿ ರೇವತಿ. ಬದುಕಿನ ಮೊದಲ ಹನ್ನೆರಡು ವರ್ಷಗಳನ್ನು ಹಾಸನದಲ್ಲಿ ಕಳೆದಿರುವ ಸಿಂಧು ಪದವಿಯವರೆಗೆ ಓದಿದ್ದು ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ. ಕರ್ನಾಟಕ ವಿಶ್ವ ವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕೆ.ಡಿ.ಸಿ.ಸಿ ಬ್ಯಾಂಕ್ ಉದ್ಯೋಗಿ. ಬದುಕಿನ ಅನುಭವದಿಂದಲೇ ಸತ್ವಯುತ ಬರವಣಿಗೆಗೆ ಬುನಾದಿ ದಕ್ಕುತ್ತದೆ ಎಂದು ನಂಬಿರುವ ಅವರು 2010ರಲ್ಲಿ ತಮ್ಮ ಚೊಚ್ಚಲ ಕವನ ಸಂಕಲನ ‘ನಗುತ್ತೇನೆ ಮರೆಯಲ್ಲ’ ಪ್ರಕಟಿಸಿದರು. ಇದೀಗ ಕಣ್ಣಿಗೆ 'ಕನಸಿನ ಕಾಡಿಗೆಯನ್ನು ಹಚ್ಚಿಕೊಂಡು’, ‘ಹಗಲುರಾತ್ರಿಗಳನ್ನು' ವಿಭಿನ್ನ ದೃಷ್ಟಿಕೋನ ದಿಂದ ...

READ MORE

Related Books