ಲೆಟ್ಸ್‌ ಬ್ರೇಕಪ್

Author : ಸಂಪತ್‌ ಸಿರಿಮನೆ

₹ 120.00

Buy Now


Year of Publication: 2022
Published by: ಕಾನ್ ಕೇವ್ ಮಿಡಿಯಾ
Address: ಕಾನ್‌ಕೇವ್‌ ಮಾಧ್ಯಮ ಮತ್ತು ಪ್ರಕಾಶನ, ಬೆಂಗಳೂರು-560062

Synopsys

ಬ್ರೇಕಪ್ ಎನ್ನುವುದು ಇಬ್ಬರ ವ್ಯಕ್ತಿಗಳ ಮಧ್ಯೆಯೇ ಸಂಭವಿಸಬೇಕೆಂದೇನಿಲ್ಲ. ಬ್ರೇಕಪ್ ಎನ್ನುವುದು ನಾವು ಮತ್ತು ನಮ್ಮ ನಂಬಿಕೆಯ ಮಧ್ಯೆಯೂ ಸಂಭವಿಸಬಹುದು ಎಂಬ ಮುನ್ನುಡಿಯ ಮಾತು ಬಹಳ ಸೊಗಸಾಗಿದೆ. ಸತತವಾಗಿ ನಮ್ಮ ಸುತ್ತ ನಾವೇ ಹಾಕಿಕೊಂಡಿರುವ ಬೇಲಿಗಳ ಜೊತೆ ಬ್ರೇಕಪ್ ಮಾಡಿಕೊಳ್ಳುತ್ತಾ ಸಾಗುವುದೇ ಜೀವನ.‌ “ನನ್ನನ್ನು ಬಿಟ್ಟಮೇಲೆ ಅವಳಿಗೆ ನನ್ನೆದುರು ಏನನ್ನೂ ಸಾಬೀತು ಮಾಡುವ ಅವಶ್ಯಕತೆಯೂ ಇಲ್ಲ. ಅವಳಿಗೆ ಎರಡು ಜಡಿಮಳೆಗಳ ಮಧ್ಯೆ ಒಂದು ಸಾದಾ ಖಾಲಿತನ ಬೇಕಿತ್ತು, ಅದು ನಾನಾದೆ. ಅವಳು ಬರುವ ಮುಂಚೆಯೂ ಖಾಲಿ, ಜೊತೆಗಿದ್ದಾಗಲೂ ಖಾಲಿ, ಇನ್ನು ಮುಂದೆಯೂ ಖಾಲಿ" (ಕೃತಿಯ ಆಯ್ದ ಭಾಗ)

About the Author

ಸಂಪತ್‌ ಸಿರಿಮನೆ

ಸಂಪತ್‌ ಸಿರಿಮನೆ ಮೂಲತಃ ಕೊಪ್ಪದವರು. ಚಿಕ್ಕಮಗಳೂರಿನ ಕೊಪ್ಪದಲ್ಲಿ ಶಾಲೆ ಹಾಗೂ ಕಾಲೇಜು ವಿದ್ಯಾಭ್ಯಾಸ ಮುಗಿಸಿದ್ದಾರೆ. ಮಂಡ್ಯದ ಆದಿಚುಂಚನಗಿರಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ಮಾಡಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು, ಹಿಂದೆ ಐಟಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸುತ್ತಿದ್ದಾರೆ. ಗಂಧದ ಗುಡಿ, ಒಂದಲ್ಲ ಎರಡಲ್ಲ ಸೇರಿದಂತೆ ಹಲವು ಸಿನಿಮಾಗಳಿಗೆ ಬರಹರಾರಾಗಿದ್ದಾರೆ. ಇವರ ಮೊದಲ ಕೃತಿ ʻಲೆಟ್ಸ್‌ ಬ್ರೇಕಪ್‌ʼ. ...

READ MORE

Related Books