ಪಿ. ಲಂಕೇಶ್‌ ಸಮಗ್ರ ಕತೆಗಳು

Author : ಪಿ. ಲಂಕೇಶ್

Pages 612

₹ 700.00




Year of Publication: 2023
Published by: ಇಂದಿರಾ ಲಂಕೇಶ್‌ ಪ್ರಕಾಶನ
Address: ನಂ. 9, ಪೂರ್ವ ಆಂಜನೇಯ ಗುಡಿ ರಸ್ತೆ, ಬಸವನಗುಡಿ, ಬೆಂಗಳೂರು- 560-004
Phone: 98444 08048

Synopsys

ಸಮಗ್ರ ಕಥೆಗಳು ಪಿ.ಲಂಕೇಶ್‌ ಅವರ ಕೃತಿಯಾಗಿದೆ. ಲೇಖಕ ಈ ಸಾಮಾನ್ಯತೆಯ ಮಿತಿಯಲ್ಲೇ ಅಂದರೆ ತನ್ನ ಮತ್ತು ವಸ್ತುವಿನ ಮಿತಿಯಲ್ಲೇ ಕೆಲಸ ಮಾಡುತ್ತಾನೆ. ಹಾಗೆಯೇ ಈ ಮಿತಿಯನ್ನು ಮೀರಲು ಪ್ರಯತ್ನಿಸುತ್ತಾನೆ. ಅವನಲ್ಲಿ ಈ ಕಾತರ ಅರ್ಥ ಪೂರ್ಣವಾಗಿದ್ದು ಬರೆಯುವ ಆಶೆಗೆ ಬದ್ಧವಾಗಿದ್ದಾಗ ಬೆಳೆಯುತ್ತಾನೆ. ಹಾಗೆಯೇ ಅದೆಲ್ಲವೂ ಕೇವಲ ಮಹತ್ವಾಕಾಂಕ್ಷೆಯ ಬೆನ್ನು ಹತ್ತಿದೊಡನೆ ಸೋಲುತ್ತಾನೆ. ಉತ್ತಮವಾದದ್ದನ್ನು ಬರೆಯುವ ಕಾತರ ಮತ್ತು ಕೇವಲ ಮಹತ್ವಕಾಂಕ್ಷೆ ಎರಡೂ ಲೇಖಕನಿಗೆ ಬೇಕು. ಆತ ಜೀವನದ ಸಂಪರ್ಕದೊಂದಿಗೇ ಬೆಳೆದಾಗ ಅವನ ಕೃತಿಗಳ ಗ್ರಹಿಕೆ ಹೆಚ್ಚುತ್ತ ಹೋಗುತ್ತದೆ. ಇದು ಕೇವಲ ಸಾಹಿತ್ಯಕ ಬೆಳವಣಿಗೆಯಲ್ಲ, ಒಂದು ಕಾಣುವ ಮತ್ತು ರೂಪಿಸುವ ವ್ಯಕ್ತಿತ್ವದ ಬೆಳವಣಿಗೆ ಇದೆಲ್ಲ ಕತೆಗಳಿಗೆ ಓದುಗರು ತಮ್ಮ ವ್ಯಕ್ತಿತ್ವ ಒಡ್ಡಿದಾಗ ಮಾತ್ರ ತಿಳಿಯುತ್ತದೆ. ಇದನ್ನೇ ನಾನು ನನ್ನ ನಿಲುವಿನಿಂದ ಇಲ್ಲಿಯ ಹಲವಾರು ಕತೆಗಳ ಉದಾಹರಣೆ ಕೊಟ್ಟು ವಿವರಿಸಬಲ್ಲೆ. 'ಮುಟ್ಟಿಸಿ ಕೊಂಡವನು' ಮತ್ತು 'ಸಹಪಾಠಿ' ಕತೆಗಳನ್ನು ಓದುತ್ತ ಅಚ್ಚರಿಗೊಂಡೆ- ಕರಡು ತಿದ್ದುತ್ತ ಅನ್ನಿಸಿದ್ದು ಇದು. ಗೆಳೆಯರೊಬ್ಬರು 'ಮುಟ್ಟಿಸಿಕೊಂಡವನು' ಕತೆ ಇನ್ನೂ ಹಲವಾರು ಘಟನೆಗಳೊಂದಿಗೆ ಮೈತುಂಬಿ ಬರಬಹುದಿತ್ತು ಅಂದರು; ಸಹಪಾಠಿ' ಕತೆ ಈ ಮೈತುಂಬಿದ ಸ್ಥಿತಿಗೆ ಉದಾಹರಣೆ ಅಂದರು. ತುಂಬಿದ ಮೈ ಕೆಲವೊಮ್ಮೆ ಚೆಂದ, ಕೆಲವೊಮ್ಮೆ ಅಲ್ಲ. ಅವೆರಡು ಕತೆಗಳಲ್ಲಿ ನನಗೆ 'ಮುಟ್ಟಿಸಿಕೊಂಡವನು' ಉತ್ತಮ. ತುಂಬ ಎಚ್ಚರವಹಿಸಿ ಬರೆದಿರುವ 'ಕಲ್ಲು ಕರಗುವ ಸಮಯ' ನನಗೆ ಇಷ್ಟ: ಈ ಎಚ್ಚರವಹಿಸುವಿಕೆಯ ಆಳದಲ್ಲೇ ಆ ಕತೆಯ ಎಚ್ಚರ ಮೀರಿದ ಕಾಳಜಿಗಳೆಲ್ಲ ಇವೆ. ನನ್ನ ಕತೆಗಳು ನನ್ನಿಂದ ಇನ್ನೂ ಹೆಚ್ಚುಹೆಚ್ಚು ಮುಕ್ತವಾಗಿರಬೇಕು, ಜೀವನದ ಮರ್ಜಿಗಳಿಂದ ತಮ್ಮ ರೂಪ ನಿರ್ವಹಿಸಿಕೊಳ್ಳುವಂತಾಗಬೇಕು ಎಂದು ನಂಬಿರುವವನು ನಾನು. ಈ ದೃಷ್ಟಿಯಿಂದಲೂ ಇಲ್ಲಿಯ ಕತೆಗಳನ್ನು ನೋಡುವುದು ಸಾಧ್ಯವಿದೆ-ಈ ಸಲ ಇಲ್ಲಿಯ ಮೂವತ್ತೇಳು ಕತೆ ಓದುತ್ತ ಈ ಮುಕ್ತಗುಣವನ್ನು 'ನಾನಲ್ಲ' ತರಹದ ಪುಟ್ಟ ಕತೆಗಳಲ್ಲಿ, 'ಉಮಾಪತಿಯ ಸ್ಕಾಲರ್ಷಿಪ್ ಯಾತ್ರೆ' ತರಹದ ಕತೆಗಳಲ್ಲಿ ಕಂಡಿದ್ದೇನೆ. ವೈಯಕ್ತಿಕವಾಗಿ ನನಗೆ 'ದಾಳಿ' ಇಷ್ಟ ಕೆಲಸಗಳ ಒತ್ತಡದಲ್ಲಿ ಬರೆದ ಈ ಕತೆಯನ್ನು ಮತ್ತೆ ತಿದ್ದಿ ಬರೆಯಲು ನಿರಾಕರಿಸಿದೆ; ಲಂಬಿಸದಿರಲು ಹಠ ಹಿಡಿದೆ. ನನ್ನ ಮತ್ತು ಇತರರ ಕುತೂಹಲಕ್ಕಾಗಿ ಅದನ್ನು ಹಾಗೇ ಉಳಿಸಿಕೊಂಡೆ.

About the Author

ಪಿ. ಲಂಕೇಶ್
(08 March 1935 - 25 January 2000)

ಪಿ. ಲಂಕೇಶ್ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿವೆ. ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ, ಸಂಪಾದಕ, ಕೃಷಿಕ ಹೀಗೆ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್‌ 8ರಂದು ಜನಿಸಿದರು., ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ...

READ MORE

Related Books