ಬೀದಿ ಹೆಣ್ಣು

Author : ದು. ಸರಸ್ವತಿ

Pages 128

₹ 200.00




Year of Publication: 2022
Published by: ಬಹುವಚನ ಪ್ರಕಾಶನ

Synopsys

ಬೀದಿ ಹೆಣ್ಣು ದು.ಸರಸ್ವತಿ ಅವರ ಕೃತಿಯಾಗಿದೆ. ಕತ್ತಲೆಯ ಲೋಕದಲ್ಲಿ ಸಪೂರ ದೇಹಕ್ಕೆ ಮಾತ್ರ ಬೆಲೆಹೆಚ್ಚು. ಸ್ವಲ್ಪ ವಯಸ್ಸಾದರೂ ಎಲ್ಲರೂ ತಿರಸ್ಕರಿಸಿ ಮುನ್ನಡೆಯುವರು. ಪೈಲ್ವಾನರ ಮಾತುಗಳು ಗಿರಿಜೆಗೆ ಸಹಿಸಲಸಾಧ್ಯವಾದವು. ಆದರೂ ಮಗನ ನೋಡುವ ಬಯಕೆಯಿಂದ ರೈಲಿಗೆ ಹೊರಡಲು ಹಣ ಕೂಡಿಸಬೇಕಿರುವುದರಿಂದ ಆ ನೋವುಗಳನ್ನು ಸಹಿಸಿಕೊಂಡು ಮತ್ತೆ ಯಾರಾದರೂ ಬರುವರೇ ಎಂದು ಕಾಯುತ್ತಾ ನಿಲ್ಲುವಳು. ಕತ್ತಲೆಲೋಕದಲ್ಲೂ ಬಡತನದ ಬೇಗೆಯಲ್ಲಿ ಬೇಯುವ ಮಹಿಳೆಯ ಕಣ್ಣೀರ ಕತೆ ಓದುಗರ ಮನಸ್ಸನ್ನು ವಿಚಲಿತಗೊಳಿಸಿ ಮನಸ್ಸನ್ನು ಆರ್ದಗೊಳಿಸುತ್ತದೆ. 

 

About the Author

ದು. ಸರಸ್ವತಿ
(20 April 1963)

ದು.ಸರಸ್ವತಿ- ಹುಟ್ಟಿದ್ದು 20 ಏಪ್ರಿಲ್ , 1963, ಬೆಂಗಳೂರಿನಲ್ಲಿ. ವಿದ್ಯಾಭ್ಯಾಸವೂ ಬೆಂಗಳೂರಿನಲ್ಲಿಯೇ. ರಂಗಭೂಮಿ, ಚಿತ್ರಕಲೆ, ಮಹಿಳಾ ಮತ್ತು ದಲಿತ ಚಳುವಳಿ ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವ ಸರಸ್ವತಿ, ಹೆಣೆದರೆ ಜೇಡನಂತೆ(ಕಡೆಂಗೋಡ್ಲು ಕಾವ್ಯ ಪ್ರಶಸ್ತಿ-1997), ಈಗೇನ್ ಮಾಡೀರಿ(ಅನುಭವ ಕಥನ-2000) ಕೃತಿಗಳನ್ನು ಪ್ರಕಟಿಸಿದ್ದಾರೆ.  ...

READ MORE

Related Books