ಲೇಖಕ ಸ. ರಘುನಾಥ ಅವರ ಸಮಗ್ರ ಸಾಹಿತ್ಯ ಸಂಪುಟ-1ರ ಭಾಗವಾಗಿ ‘ಮುತ್ತುಗ’ ಕಥಾ ಸಂಕಲನವಿದು. ತಂಗಡಿ ಹೂವು (1978-2004) ಕಥಾ ಸಂಕಲನದ 15 ಕಥೆಗಳು, ನಡುವಿನ ಕಥೆಗಳು-ಭಾಗ-2ರಲ್ಲಿಯ 6 ಕಥೆಗಳು, ಬಿರೇಬಿತ್ಲೆ ವೆಂಕಟಸ್ವಾಮಿ ಮತ್ತು ಇತರೆ ಕಥೆಗಳಲ್ಲಿಯ (2005-2012, ಭಾಗ-3) ಹತ್ತು ಕಥೆಗಳು, 2005ರ ಕಥೆಗಳು (ಭಾಗ-4) ರಲ್ಲಿಯ 4 ಕಥೆಗಳು, ಇಟ್ಟುಗೊಜ್ಜು (ಭಾಗ-5) ಕಥಾ ಸಂಕಲನದ 25 ಕಥೆಗಳನ್ನು ಈ ಕೃತಿಯಲ್ಲಿ ಸಂಕಲಿಸಲಾಗಿದೆ.
‘ಕಾಲ ಕಟ್ಟಿ ತೋರಿಸಿದ ದಾರಿಯಲ್ಲಿ ನಾನು ಕಂಡಿದ್ದು, ಜೊತೆ ಮಾಡಿಕೊಂಡು ಎದೆಗೆ ತೋರಿಸಿದ್ದು, ಹೇಳಿದ್ದು ಇಲ್ಲಿದೆ. ಹಾಗಾಗಿ ಸ್ಪರ್ಶ, ವಾಸನೆ ಇಲ್ಲಿದೆ. ಆದರೆ, ರುಚಿಯ ಬಗ್ಗೆ ಹೇಳಲಾರೆ. ಅದು ಓದುಗರಿಗೆ ಬಿಟ್ಟಿದ್ದು. ಪ್ರಕೃತಿ, ಪರಿಸರ, ಜನ, ಪ್ರಾಣಿ, ಪಕ್ಷಿ, ಊರು, ಕೇರಿ ಹೀಗೆ ಎಲ್ಲದರ ಋಣ ನನ್ನ ಮೇಲಿದೆ. ಎಂದು ಲೇಖಕರು ತಮ್ಮ ಕಥೆಗಳ ಬಗ್ಗೆ ಹೇಳಿಕೊಳ್ಳುವ ಮೂಲಕ ಈ ಎಲ್ಲ ಕಥೆಗಳಿಗಿರುವ ಸ್ಫೂರ್ತಿ., ಕಥಾ ವಸ್ತುವಿನ ರಚನೆಯ ಸುಳಿವು ನೀಡಿದ್ದಾರೆ.
©2022 Book Brahma Private Limited.