ಸಂಪೆಕಟ್ಟೆಯ ಸರಹದ್ದು

Author : ದಿನೇಶ ಹುಲಿಮನೆ

Pages 64

₹ 80.00




Year of Publication: 2022
Published by: ಹೆಚ್ ಎಸ್ ಆರ್ ಎ. ಪ್ರಕಾಶನ
Address: #2, ಶ್ರೀ ಅನ್ನಪೂರ್ಣೇಶ್ವರಿ ನಿಲಯ, 1ನೇ ಮುಖ್ಯರಸ್ತೆ, ಭೈರವೇಶ್ವರ ನಗರ, ಲಗ್ಗೆರೆ, ಬೆಂಗಳೂರು- 560058

Synopsys

'ಸಂಪೆಕಟ್ಟೆಯ ಸರಹದ್ದು ಕಥಾ ಸಂಕಲನವು 17 ಸಣ್ಣ ಕಥೆಗಳನ್ನು ಒಳಗೊಂಡ ಒಂದು ಪುಟ್ಟ ಕಥಾಸಂಕಲನ. ಲೇಖಕರೇ ಹೇಳುವಂತೆ ಸಮಯದ ಅಭಾವದಲ್ಲಿ ಜೀವನ ನಡೆಸುತ್ತಿರುವ ಹಾಗೂ ಒತ್ತಡದ ಬದುಕಿನಲ್ಲಿ ದೊಡ್ಡ ಕಥೆಗಳನ್ನು ಓದಲು ಕಷ್ಟ ಎನ್ನುವ ಸ್ನೇಹಿತರನ್ನು ಗಮನದಲ್ಲಿಟ್ಟುಕೊಂಡು ಈ ಸಣ್ಣ ಕಥೆಗಳನ್ನು, ಸಣ್ಣ ಕಥೆ ಎನ್ನುವುದಕ್ಕಿಂತ ಅತೀ ಸಣ್ಣ ಕಥೆಗಳನ್ನು ಹೆಣೆಯಲಾಗಿದೆ. ಇಲ್ಲಿರುವ ಬಹುತೇಕ ಕಥೆಗಳನ್ನು ತಾವು ಮುಖಪುಟದಲ್ಲಿ ಓದಿರಲೂಬಹುದು. ಈ ಕಥೆಗಳು ತಮ್ಮ ಸ್ನೇಹಿತರಿಗೂ ದೊರಕುವಂತೆ ಮಾಡುವುದರ ಮೂಲಕ ಲೇಖಕರನ್ನು ಮತ್ತಷ್ಟು ಎಂದು ನಂಬುರುತ್ತೇನೆ. ಓದುಗರಿಗೆ ಪರಿಚಯಿಸಿ ಪ್ರೋತ್ಸಾಹಿಸುತ್ತೀರಿ ಎನ್ನುವ ಆಶಯದೊಂದಿಗೆ ಈ ಕಥಾ ಸಂಕಲನವನ್ನು ಪ್ರಕಟಿಸಲಾಗಿದೆ.

About the Author

ದಿನೇಶ ಹುಲಿಮನೆ

ದಿನೇಶ ಹುಲಿಮನೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ಪಶ್ಚಿಮ ಘಟ್ಟದಲ್ಲಿರುವ ಸಿದ್ದಾಪುರ ತಾಲೂಕಿನ ಪುಟ್ಟ ಹಳ್ಳಿ ಹುಲಿಮನೆ ಇವರ ತವರೂರು. ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಪದವಿ ಪಡೆದ ಇವರು ವೃತ್ತಿಯಲ್ಲಿ ಇಂಜಿನಿಯರ್. ಬೆಂಗಳೂರಿನ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿರುವ ಇವರು, ಪ್ರವೃತ್ತಿಯಲ್ಲಿ ಲೇಖಕರು. ಕಾದಂಬರಿಗಳ ಮೂಲಕ ಜನರ ಮನಸ್ಸನ್ನು ಗೆದ್ದಿರುವ ಇವರು ಸಣ್ಣ ಕಥೆಗಳಲ್ಲೂ ಸೈ ಎನಿಸಿಕೊಂಡಿದ್ದಾರೆ. ಮಲೆನಾಡಿನ ಪ್ರಾಕೃತಿಕ ವರ್ಣನೆ, ಗ್ರಾಮೀಣ ಭಾಷೆಯ ಸೊಗಡು, ಕುತೂಹಲ ಕೆರಳಿಸುವ ಕಥೆಯ ತಿರುವುಗಳು, ಮಾನವ ಸಹಜ ಪ್ರೀತಿ, ಪ್ರಣಯ ಹಾಗೂ ವೈಚಾರಿಕ ವಿಚಾರಗಳನ್ನು ಇವರ ಬರಹಗಳಲ್ಲಿ ಕಾಣಬಹುದಾಗಿದೆ. ಕಾದಂಬರಿಗಳಲ್ಲಿ ...

READ MORE

Related Books