ಬೆಸಗರಹಳ್ಳಿ ರಾಮಣ್ಣ ಸಮಗ್ರ ಕಥೆಗಳು

Author : ಬೆಸಗರಹಳ್ಳಿ ರಾಮಣ್ಣ

Pages 656

₹ 300.00




Year of Publication: 2015
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಚಾಮರಾಜಪೇಟೆ, ಬೆಂಗಳೂರು- 560018

Synopsys

‘ಬೆಸಗರಹಳ್ಳಿ ರಾಮಣ್ಣ: ಸಮಗ್ರ ಕಥೆಗಳು’ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಮಾಲಿಕೆಯಲ್ಲಿ ಪ್ರಕಟವಾದ ಕೃತಿ. ಈ ಕೃತಿಯಲ್ಲಿ ನೆಲದ ಒಡಲು-(1967) ಸಂಕಲನದ ಹಾವಿಲ್ಲದ ಹುತ್ತ, ಸೋಲು, ಮಳೆಗರೆಯಿತು ಬಾನು ಹಸುರಾಯಿತು ಮನ, ಸುಗ್ಗಿ, ಮಹಾನವಮಿ, ನಂಜಿನ ಕೊನೆ, ದೇವರ ಹೂವು, ಹಾಗೂ ಗರ್ಜನೆ(1972) ಸಂಕಲನದ ಜೀತ, ಅವ್ವ, ಜ್ವಾಲೆಯ ನಡುವೆ, ಕಳೆ, ಅಭಿಮಾನ, ಸ್ವಾರ್ಥ, ನೆಲದ ಉಸಿರು, ಕೆಂಪು ಹುಂಜ, ಗರ್ಜನೆ ಕತೆಗಳು ಸಂಕಲನಗೊಂಡಿವೆ. ಹಾಗೇ ನೆಲದ ಸಿರಿ(1974) ಸಂಕಲನದ ಕರೆ, ಕಣಿವೆಯ ಅಂಚು ಕತೆಗಳು ಹರಕೆಯ ಹಣ (1976) ಸಂಕಲನದ ಹರಕೆಯ ಹಣ, ಗಾಂಧೀ ಸಂತಾನ, ಕಕರನ ಯುಗಾದಿ, ನೆರಳುಗಳು, ಬಾನಿಗೆ ಬಿದ್ದದ್ದು ದೆವ್ವ ಕತೆಗಳು ಸಂಕಲನಗೊಂಡಿವೆ. ಹಾಗೇ ಒಂದು ಹುಡುಗನಿಗೆ ಬಿದ್ದ ಕನಸು(1979) ಸಂಕಲನದ ಶೂಲ, ಒಂದು ಹುಡುಗನಿಗೆ ಬಿದ್ದ ಕನಸು, ಗಾಂಧಿ, ಸಂತೆಯ ಒಳಗೊಂದು ಮನೆಯ ಮಾಡಿ, ಪ್ರಜಾಪ್ರಭುತ್ವ ಮತ್ತು ಮೂರು ಮಂಗಗಳು, ಬೇಲ, ಚಲುವನ ಪರಂಗಿ ಗಿಡಗಳು ಕತೆಗಳು ಹಾಗೇ ತೋಳಗಳ ನಡುವೆ ಕಿರುಕಾದಂಬರಿಯೂ ಸಂಕಲನಗೊಂಡಿದೆ. ಹಾಗೇ ಕೊಳಲು ಮತ್ತು ಖಡ್ಗ- (1998) ಸಂಕಲನದ ಬೆಟ್ಟದ ಮೇಲೊಂದು ಮನೆಯ ಮಾಡಿ, ಕ್ಷಯ, ತಾಯಿ, ಕರುಣಾಳು ಬಾ ಬೆಳಕೆ, ಗಂಗಾ, ಗೋಸುಂಬೆ, ಮಾನಭಂಗ, ಧರ್ಮ, ಕುಂಡ್ಯವೆಂಬೀ ನಾಡಿನಲ್ಲಿ, ಇದು ಕತೆಯಲ್ಲ, ಹಾದರ, ಕರೀಹಸ, ನೂರು ರೂಪಾಯಿ ನೋಟು, ಆಳುಮಗ, ಜಾಡಮಾಲಿ, ಹತ್ಯೆ, ಮಗಳು, ಅಪ್ಪ ಕತೆಗಳು ಸಂಕಲನಗೊಂಡಿವೆ.

About the Author

ಬೆಸಗರಹಳ್ಳಿ ರಾಮಣ್ಣ
(18 May 1938 - 13 July 1998)

ಬೆಸಗರಹಳ್ಳಿ ರಾಮಣ್ಣ ಅವರು ಮಂಡ್ಯ ಜಿಲ್ಲೆಯ ಬೆಸಗರಹಳ್ಳಿಯಲ್ಲಿ ಜನಿಸಿದರು. ಇವರ ತಾಯಿ ದೊಡ್ಡತಾಯಮ್ಮ, ತಂದೆ ಚಿಕ್ಕಎಲ್ಲೇಗೌಡ. ತಮ್ಮಲ್ಲಿದ್ದ ಪ್ರತಿಭೆ, ಶಕ್ತಿ, ಚೈತನ್ಯಗಳನ್ನು ಗ್ರಾಮೀಣ ಸಮುದಾಯದ ನೋವು, ನಲಿವು , ಶೋಷಣೆಗೆ, ಅಜ್ಞಾನಕ್ಕೆ ಸ್ಪಂದಿಸಲು ಮೀಸಲಿಟ್ಟವರು ರಾಮಣ್ಣ. ಒಂದೆಡೆ ಸಮುದಾಯದ ದೇಹರೋಗ್ಯ, ಸ್ವಾಸ್ಥ್ಯದ ಕಡೆಗೆ ಗಮನಹರಿಸಿದರೆ ಮತ್ತೊಂದೆಡೆ ಪ್ರವೃತ್ತಿಯಿಂದ ಲೇಖಕರಾಗಿ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವ ಕಡೆಗೂ ಗಮನ ಹರಿಸಿದರು. ಪ್ರಾರಂಭಿಕ ಶಿಕ್ಷಣ ಬೆಸಗರಹಳ್ಳಿ ಮತ್ತು ಮದ್ದೂರಿನಲ್ಲಿ. ಇಂಟರ್ಮೀಡಿಯೇಟ್‌ ನಂತರ ಎಂ.ಬಿ.ಬಿ.ಎಸ್‌. ಪದವಿ ಪಡೆದದ್ದು ಮೈಸೂರಿನಲ್ಲಿ. ನಂತರ ಅರಿವಳಿಕೆ ಶಾಸ್ತ್ರದಲ್ಲಿ ಪಡೆದ ಡಿಪ್ಲೊಮಾ. ಅಮೆರಿಕ ಮುಂತಾದ ವಿದೇಶಗಳಿಂದ ಉದ್ಯೋಗಕ್ಕೆ ಆಹ್ವಾನ ಬಂದರೂ ಆಯ್ದುಕೊಂಡದ್ದು ...

READ MORE

Related Books