ಪ್ರಾಣಲಿಂಗಿಸ್ಥಲ

Date: 13-02-2023

Location: ಬೆಂಗಳೂರು


“ಒಂದೇ ವಸ್ತು ಬೇರೆ ಬೇರೆಯಾಗಿ ಕಾಡುವ ಸ್ಥಿತಿಯನ್ನು ವಿವರಿಸುವ ಶಿವಯೋಗಿಗಳು, ದ್ವೈತ ಭಾವವಳಿದು ಅದ್ವೈತಭಾವ ಉಂಟಾಗುವ ಪರಿಯನ್ನಿಲ್ಲಿ ತಿಳಸಿದ್ದಾರೆ. ಭಕ್ತ-ಜಂಗಮನಾಗಿ,ಜಂಗಮ-ಪ್ರಾಣಲಿಂಗಿಯಾಗಿ ಕಾಣ ಸಿಕೊಳ್ಳುವ ಇಲ್ಲಿಯ ಸಮನ್ವಯತೆ ಗಮನಾರ್ಹವಾಗಿದೆ,” ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಧಾರ್ಮಿಕ ಸಿದ್ಧಾಂತಗಳು ಅಂಕಣದಲ್ಲಿ ‘ಪ್ರಾಣಲಿಂಗಿಸ್ಥಲ’ ವಿಚಾರದ ಕುರಿತು ಚರ್ಚಿಸಿದ್ದಾರೆ...

ಷಟ್‍ಸ್ಥಲಗಳಲ್ಲಿ ನಾಲ್ಕನೇ ಸ್ಥಲವಾದ ಪ್ರಾಣಲಿಂಗಿಸ್ಥಲವು ಮಹತ್ವದ ಸ್ಥಲವಾಗಿದೆ. ಇಷ್ಟಲಿಂಗ ಬೇರೆಯಲ್ಲ, ತನ್ನ ಪ್ರಾಣ ಬೇರೆಯಲ್ಲ ಎಂಬ ಅದ್ವೈತಭಾವ ಬೆಳೆದು, ಇಲ್ಲಿ ಲಿಂಗವೇ ಪ್ರಾಣವಾಗುತ್ತದೆ, ಪ್ರಾಣವೇ ಲಿಂಗವಾಗುತ್ತದೆ. ಭಕ್ರಸ್ಥಲದಲ್ಲಿ ಅರ್ಚನೆ, ಮಹೇಶರಸ್ಥಲದಲ್ಲಿ ಅರ್ಪಣೆ, ಪ್ರಸಾದಿಸ್ಥಲದಲ್ಲಿ ಪ್ರಸನ್ನತೆ ಸ್ಥಾಯಿಯಾಗಿರುವಂತೆ, ಪ್ರಾಣಲಿಂಗಿಸ್ಥಲದಲ್ಲಿ ಶಿವಯೋಗ ಮುಖ್ಯವಾಗಿದೆ. ಇಷ್ಟಲಿಂಗದ ಬೆಳಕು ಪ್ರಾಣದಲ್ಲಿ ಸಮಾಗಮವಾಗಿ ಚಿದ್ರೂಪವಾದ ಪರಬ್ರಹ್ಮವೆಂಬ ಜ್ಯೋತಿ ಕಾಣ ಸಿಕೊಳ್ಳುವ ಸ್ಥಲವೇ ಪ್ರಾಣಲಿಂಗಿಸ್ಥಲವಾಗಿದೆ. ಈ ಶರೀರವೆಲ್ಲವೂ ಶಿವನದೇ ಎಂಬ ಭಾವ ಬಲಿತು, ಪ್ರಾಣವೇ ಲಿಂಗವಾಗಿ ಪರಿವರ್ತನೆಯಾದಾಗ ಪ್ರಾಣಲಿಂಗಿಯಾಗುತ್ತಾನೆ. ಪ್ರಸಾದಿಸ್ಥಲದಲ್ಲಿ ಅವಧಾನ ಭಕ್ತಿಯಿದ್ದರೆ, ಪ್ರಾಣಲಿಂಗಿಸ್ಥಲದಲ್ಲಿ ಅನುಭಾವ ಭಕ್ತಿ ನೆಲೆಗೊಳ್ಳುತ್ತದೆ. ಸಪ್ತವ್ಯಸನಗಳನ್ನು ಬಿಟ್ಟು ಲಿಂಗವ್ಯಸನಿಯಾಗುವದೇ ಪ್ರಾಣಲಿಂಗಿಸ್ಥಲದ ವಿಶಿಷ್ಟತೆಯಾಗಿದೆ. ಹೊರಗಿನ ಪೂಜೆ-ಅರ್ಚನೆಗಳು ದೂರಸರಿದು ಒಳಗಿನ ಪೂಜೆ ಪ್ರಾರಂಭವಾಗುತ್ತದೆ. ಹೊರಗಿನ ಪುಷ್ಪ, ಗಂಧ, ನೈವೇದ್ಯಗಳು ಅಗತ್ಯವೆನಿಸದೆ, ಮನಸ್ಸೇ ಪುಷ್ಟವಾಗಿ, ಬುದ್ಧಿಯೇ ಗಂಧವಾಗಿ, ಚಿತ್ತವೇ ನೈವೇದ್ಯವಾಗುತ್ತದೆ. ಆಗ ಹೊರಗಿದ್ದ ಗುರು-ಲಿಂಗ-ಜಂಗಮರು ಒಳಗೆ ಪ್ರವೇಶಿಸುತ್ತಾರೆ. ಪ್ರಾಣಲಿಂಗಿಸ್ಥಲದಲ್ಲಿ ಅರಿವೇ ಗುರುವಾಗಿ, ಆಚಾರವೇ ಲಿಂಗವಾಗಿ, ಅನುಭಾವವೇ ಜಂಗಮವಾಗಿ ಬೆಳೆದು ನಿಲ್ಲುತ್ತದೆ. ಹೊರಗೆ-ಒಳಗೆ, ಮೂರ್ತ-ಅಮೂರ್ತ, ಪ್ರಾಣ-ಲಿಂಗವೆಂಬ ಭೇದಗಳು ಅಳಿದು, ಅಭೇಧ್ಯ ತತ್ವ ಕಾಣ ಸಿಕೊಳ್ಳುತ್ತದೆ.

‘ಪ್ರಾಣಲಿಂಗಿ ಪ್ರತಿಗ್ರಾಹಕನಾದ ಬಳಿಕ, ಲಿಂಗವಿರಹಿತನಾಗಿ ನಡೆವ ಪರಿಯೆಂತೊ?’ಎಂದು ಪ್ರಶ್ನಿಸಿರುವ ಬಸವಣ್ಣನವರು, ‘ಶರಣರು ಕಾಯವಿಡಿದು ನಿರ್ಮಾಯರಾಗಿಪ್ಪರು’ ಎಂದು ಹೇಳಿದ್ದಾರೆ.

“ಆಹ್ವಾನವಿಲ್ಲ ಪ್ರಾಣಲಿಂಗವಾಗಿ,
ವಿಸರ್ಜನವಿಲ್ಲ ಲಿಂಗನೆಲೆಗೊಂಡಿಪ್ಪುದಾಗಿ
ಇದುಕಾರಣ, ಆಹ್ವಾನ ವಿಸರ್ಜನವಿಲ್ಲ, ಶರಣನ ಪರಿ ಬೇರೆ,
ಅಂಗಸಂಗವೆ ಲಿಂಗ, ಲಿಂಗಸಂಗವೆ ಮನ,
ಕೂಡಲ ಸಂಗನ ಶರಣ ಸುಯಿಧಾನಿ”
-ಬಸವಣ್ಣ(ಸ.ವ.ಸಂ.1,ವ:1060)

ಬಸವಣ್ಣನವರು ಈ ವಚನದಲ್ಲಿ ಅಂಗ-ಲಿಂಗಗಳ ಸಮಾಗಮವನ್ನು ತಿಳಸಿದ್ದಾರೆ. ಆಹ್ವಾನ ಮತ್ತು ವಿಸರ್ಜನಗಳನ್ನು ಮೀರಿದ ಸಮನ್ವಯತೆ ಪ್ರಾಣಲಿಂಗಿಸ್ಥಲದಲ್ಲಿ ಕಾಣ ಸುತ್ತದೆ.

‘ಗುರುವಿನ ಪ್ರಾಣವು ಲಿಂಗದಲ್ಲಿ ಲೀನವಾದ ಬಳಿಕ ಆ ಲಿಂಗವೆÀನ್ನ ಕರಸ್ಥಲಕ್ಕೆ ಬಂದಿತ್ತು ನೋಡಾ’ಎಂದಿರುವ ಅಲ್ಲಮಪ್ರಭುಗಳಿಗೆ, ಅನಿಮಿಷನು ತನ್ನ ಜ್ಞಾನದೊಳಗೆ ಗುರುವಾಗಿ ಇದ್ದರೆ, ಬಸವಣ್ಣನವರು ಗುರುವಿನ ಗುರು ಪರಮಗುರುವಾಗಿ ಕಾಣ ಸಿಕೊಂಡಿದ್ದಾರೆ.

“ಇಷ್ಟಲಿಂಗ ಪ್ರಾಣಲಿಂಗವೆಂಬ ಭೇದವನಾರು ಬಲ್ಲರು ಹೇಳಾ
ಅಂತರಂಗವೆಂಬ ಶಬ್ದಕ್ಕೆ ಅಂತರಂಗ ಮುಂದುಗೊಂಡಿಪ್ಪುದು
ಬಹಿರಂಗವೆಂಬ ಶಬ್ದಕ್ಕೆ ಅಂತರಂಗ ಮುಂದುಗೊಂಡಿಪ್ಪುದು.
ಮನವನೆಡೆಗೊಂಡ ಲಿಂಗದ ಅರಿವು,
ವಿಚಾರ ವ್ಯಾಕುಲಕ್ಕೊಳಗಾಗಬಾರದೆಂದು
ಮನ ಭಾವ ಜ್ಞಾನ ನೋಟಕ್ಕೆ ತಂದು, ಕರಸ್ಥಲದಲ್ಲಿ ನಿಕ್ಷೇಪಿಸಿ
ಅಂತರಂತ ಬಹಿರಂಗವೆಂದರಿಯದೆ, ಅನಿಮಿಷನಾಗಿಪ್ಪನು ಶರಣನು,
ಪ್ರಾಣಲಿಂಗದ ಪ್ರಸನ್ನ ಮುಖವ ನೋಡಿ ಪರಿಣಾಮಿಸಲೋಸುಗ
ಜಂಗಮವೆಂಬ ದರ್ಪಣವ ಹಿಡಿದಿಪ್ಪನೋಡಯ್ಯಾ...............”
-ಅಲ್ಲಮಪ್ರಭು(ಸ.ವ.ಸಂ.2,ವ:948)

ಇಲ್ಲಿ ಅಲ್ಲಮಪ್ರಭುಗಳು, ಇಷ್ಟಲಿಂಗ-ಪ್ರಾಣಲಿಂಗವೆಂಬ ಭೇದವನಾರು ಬಲ್ಲರು? ಎಂದು ಪ್ರಶ್ನಿಸಿದ್ದಾರೆ. ಅಂತರಂಗ-ಬಹಿರಂಗವೆಂಬುದು ಕಾಣದಾಗಿ, ಅಂತರಂಗವೇ ಬಹಿರಂಗವಾಗಿ, ಬಹಿರಂಗವೇ ಅಂತರಂಗವಾಗಿರುವ ಸ್ಥಿತಿಯನ್ನವರು ತಿಳಿಸಿದ್ದಾರೆ. ‘ಕುರುಹಿಡಿದು ಕುರುಹುಗೆಡಬೇಕು’ ಎಂಬ ಅವರ ನುಡಿ ತುಂಬ ಮಹತ್ವದ್ದಾಗಿದೆ.

‘ಉರಸ್ಥಲದಲ್ಲಿ ಲಿಂಗವ ಧರಿಸಿದ ಬಳಿಕ, ಮನದ ಕೊನೆಯಿಂದ ಲಿಂಗವನಗಲದಿರಬೇಕೆಂದು’ ಹೇಳಿರುವ ಚೆನ್ನಬಸವಣ್ಣನವರು ಪ್ರಾಣಲಿಂಗಿಸ್ಥಲದ ಬಗ್ಗೆ ಪ್ರಮುಖ ವಿಚಾರವನ್ನು ತಿಳಿಸಿದ್ದಾರೆ. ‘ಪ್ರಾಣ ಲಿಂಗವೆಂಬೆನೆ ಪ್ರಾಣದ ಹಂಗಿನ ಲಿಂಗ, ಲಿಂಗ ಪ್ರಾಣವೆಂಬೆನೆ ಲಿಂಗದ ಹಂಗಿನ ಪ್ರಾಣ’ವೆಂದು ಹೇಳಿರುವ ಅವರು ಲಿಂಗ ಮತ್ತು ಪ್ರಾಣವೆಂಬ ಭೇದ ಸಲ್ಲದೆಂದು ಸ್ಪಷ್ಟಪಡಿಸಿದ್ದಾರೆ.

“ಪ್ರಾಣಲಿಂಗಿಗೆ ವಾಯುವೆ ಅಂಗ, ಆ ಅಂಗಕ್ಕೆ ಸುಮನವೇ ಹಸ್ತ,
ಆ ಹಸ್ತಕ್ಕೆ ಅಮೂರ್ತಿಸಾದಾಖ್ಯ, ಆ ಸಾದಾಖ್ಯಕ್ಕೆ ಆದಿಶಕ್ತಿ,
ಆ ಶಕ್ತಿಗೆ ಜಂಗಮಲಿಂಗ, ಆ ಲಿಂಗಕ್ಕೆ ಶಾಂತಿಯೇ ಕಳೆ
ಆ ಕಳೆಗೆ ತ್ವಗಿಂದ್ರಿಯವೆ ಮುಖ, ಆ ಮುಖಕ್ಕೆ ಸ್ಪರ್ಶದ್ರವ್ಯಗಳನು
ರೂಪು-ರುಚಿ-ತೃಪ್ತಿಯನರಿದು ಅನುಭಾವ ಭಕ್ತಿಯಿಂದರ್ಪಿಸಿ
ಆ ಸುಸ್ಪರ್ಶ ಪ್ರಸಾದವನು ಭೋಗಿಸಿ ಸುಖಿಸುತ್ತಿಹನು
ಕೂಡಲಚೆನ್ನಸಂಗಾ ನಿಮ್ಮ ಪ್ರಾಣಲಿಂಗಿ”

-ಚೆನ್ನಬಸವಣ್ಣ(ಸ.ವ.ಸಂ.3,ವ:1426)

ಈ ವಚನದಲ್ಲಿ ಚೆನ್ನಬಸವಣ್ಣನವರು ಪ್ರಾಣಲಿಂಗಿಯ ಪ್ರಕ್ರಿಯೆಯ ಕುರಿತು ಮಾತನಾಡಿದ್ದಾರೆ. ಪ್ರಾಣವೇ ಲಿಂಗವಾದಾಗ ವಾಯುವೇ ಅಂಗವಾಗುತ್ತದೆಂದು ಹೇಳಿದ್ದಾರೆ. ಅನುಭಾವಭಕ್ತಿ ಈ ಹಂತದಲ್ಲಿಯೇ ಸಾಧ್ಯವಾಗುತ್ತದೆಂದು ತಿಳಿಸಿರುವ ಅವರು, ಪ್ರಾಣಲಿಂಗದಲ್ಲಿ ಪ್ರವೇಶಿಸಿ ಪ್ರಸಾದದಲ್ಲಿ ಸನ್ನಹಿತನಾಗಬೇಕೆಂದು ಹೇಳಿದ್ದಾರೆ.

ಪ್ರಾಣಲಿಂಗಿಯಾದಾತನು ಪ್ರಳಯಕ್ಕೊಳಗಾಗನು ಎಂದು ಹೇಳಿರುವ ಸಿದ್ಧರಾಮಶರಣರು, ಪ್ರಾಣಲಿಂಗಿಗೆ ಪಂಚ್ರಾಣ: ಎಂಬುದೇ ಲಿಂಗಾರ್ಚನೆಯೆಂದು ತಿಳಿಸಿದ್ದಾರೆ.

“ಒಂದೇ ವಸ್ತು ಭೇದವಾಗಿ ಕಾಡಿತ್ತಯ್ಯಾ
ಎನ್ನ ದೇಹ ವಸ್ತುವೆಂದಡೆ, ಹಲವು ರೂಪಾಗಿ ತೋರಿತ್ತು
ಕಾರಣ ವಸ್ತುವೆಂದರೆ, ಸ್ಥೂಲ ಸೂಕ್ಷ್ಮ ತಿಳಿಯದೆ ಹೋಯಿತ್ತು
ಕಾರಣಾತೀತವೆಂದಡೆ, ಸಾಕ್ಷಿಯಾಗಿ ಕ್ರಿಯಂಗಳ ಮಾಡಿಸಿತ್ತು
ಸಾಕ್ಷಿಯಾಗಿ ನಿಂದರಿವೆ ವಸ್ತುವೆಂದಡೆ ಚೇತನವಾಗಿ ನಿಂದಿತ್ತು
ಇದರಿಂದ ಬಲ್ಲಾತನೆ ಭಕ್ತ, ನೋಡಿ ಬಯಲಾದಾತನೆ ಜಂಗಮ
ಬಯಲಾಗಿ ರೂಪಕ್ಕೆ ಬಂದಾತನೆ ಪ್ರಾಣಲಿಂಗಿ ನೋಡಯ್ಯಾ
ಕಪಿಲಸಿದ್ಧ ಮಲ್ಲಿಕಾರ್ಜುನಾ”

-ಸಿದ್ದರಾಮ(ಸ.ವ.ಸಂ.4,ವ:1138)

ಒಂದೇ ವಸ್ತು ಬೇರೆ ಬೇರೆಯಾಗಿ ಕಾಡುವ ಸ್ಥಿತಿಯನ್ನು ವಿವರಿಸುವ ಶಿವಯೋಗಿಗಳು, ದ್ವೈತ ಭಾವವಳಿದು ಅದ್ವೈತಭಾವ ಉಂಟಾಗುವ ಪರಿಯನ್ನಿಲ್ಲಿ ತಿಳಸಿದ್ದಾರೆ. ಭಕ್ತ-ಜಂಗಮನಾಗಿ,ಜಂಗಮ-ಪ್ರಾಣಲಿಂಗಿಯಾಗಿ ಕಾಣ ಸಿಕೊಳ್ಳುವ ಇಲ್ಲಿಯ ಸಮನ್ವಯತೆ ಗಮನಾರ್ಹವಾಗಿದೆ.

‘ಚತುಷ್ಟಯವನರಿದು ನೋಡಿದಾಗ ಕಾಣುವದೇ ಪ್ರಾಣಲಿಂಗಿ’ಯೆಂದು ಅಂಬಿಗರ ಚೌಡಯ್ಯನವರು ಹೇಳಿದರೆ, ವಾಯುವಿನ ಗಮನವಳಿದ ಪ್ರಾಣಲಿಂಗಿಗೆ ತುರೀಯಾವಸ್ಥೆಯಿಲ್ಲ’ ಎಂದು ಆದಯ್ಯನವರು ತಿಳಿಸಿದ್ದಾರೆ.

ಲಿಂಗವೇ ಪ್ರಾಣ, ಪ್ರಾಣವೇ ಲಿಂಗವಾಗಿ ಬಳಿಕ ಪಂಚೇಂದ್ರಿಯಗಳೆಲ್ಲವೂ ಲಿಂಗೇಂದ್ರಿಯಗಳಾಗುತ್ತವೆಂದು ಹೇಳಿರುವ ಉರಿಲಿಂಗಪೆದ್ದಿಗಳು, ‘ಪ್ರಾಣಲಿಂಗ ಸಂಬಂಧಿಯಾದ ಸದ್ಭಕ್ತನು ಏಕಭುಕ್ತೋಪವಾಸಂ ಮಾಡಲಾಗದೆಂದು’ ತಿಳಿಸಿದ್ದಾರೆ. ಪ್ರಾಣಲಿಂಗ ಸ್ವಾಯತವಾದ ಶಿವಭಕ್ತನಿಗೆ, ಸದ್ಭಕ್ತಿ ಮಾರ್ಗವೇ ನೋಡಾ ಎಂದು ಹೇಳಿರುವ ಅವರು, ಶಿವಾಚಾರದ ಸನ್ಮಾರ್ಗದಲ್ಲಿ ನಡೆವ ಸದ್ಭಕ್ತನೇ ಪ್ರಾಣಲಿಂಗಿಯೆಂದು ಸ್ಪಷ್ಟಪಡಿಸಿದ್ದಾರೆ.

ಭಕ್ತನಿಗೆ ಗುರುಪ್ರಸಾದ, ಮಹೇಶ್ವರನಿಗೆ ಲಿಂಗಪ್ರಸಾದ, ಪ್ರಸಾದಿಗೆ ಜಂಗಮ ಪ್ರಸಾದವಿರುವಂತೆ, ಪ್ರಾಣಲಿಂಗಿಗೆ ಜ್ಞಾನಪ್ರಸಾದವುಂಟೆಂದು ಏಲೇಶ್ವರಕೇತಯ್ಯನವರು ತಿಳಿಸಿದರೆ, ಷಟ್‍ಸ್ಥಲಗಳೆಲ್ಲಾ ತಾನೇ ಆದಾಗ ಒಂದನಹುದು, ಒಂದನಲ್ಲಾ ಎನ್ನುವಂತಿಲ್ಲವೆಂದು ಒಕ್ಕಲಿಗ ಮುದ್ದಣ್ಣನವರು ಹೇಳಿದ್ದಾರೆ. ‘ಕತ್ತಲೆಯಲ್ಲಿ ಹಾಲು ಕೊಂಡರೆ ಸಿಹಿ ತಪ್ಪುವುದೆ?’ ಎಂದು ಪ್ರಶ್ನಿಸಿರುವ ಅವರು ಸರ್ವಗುಣಸಂಪನ್ನನಾದವನೇ ಪ್ರಾಣಲಿಂಗಿಯೆಂದು ತಿಳಿಸಿದ್ದಾರೆ.

ಪೃಥ್ವೀತತ್ವದಿಂದ ಭಕ್ತಿರೂಪು, ಅಪ್ಪು ತತ್ವದಿಂದ ಮಾಹೇಶ್ವರರೂಪು, ತೇಜ ತತ್ವದಿಂದ ಪ್ರಸಾದಿರೂಪು ಕಾಣ ಸಿಕೊಂಡಂತೆ ವಾಯುತತ್ವದಿಂದ ಪ್ರಾಣಲಿಂಗಿರೂಪು ಕಾಣ ಸಿಕೊಂಡಿದೆಯೆಂದು ತಿಳಿಸಿರುವ ದಾಸೋಹದ ಸಂಗಣ್ಣನವರು ಪಂಚಭೂತಗಳನ್ನು ಪಂಚತತ್ವಗಳಿಗೆ ಹೋಲಿಸಿ ಹೇಳಿದ್ದಾರೆ.

ಪ್ರಾಣಲಿಂಗಿಯಾಗಿ ನಿಂದಾತನಿಗೆ ಅಂಗ ಆತ್ಮನೆಂಬ ಉಭಯದ ಸಂದಿಲ್ಲವೆಂದು ಪ್ರಸಾದಿ ಭೋಗಣ್ಣನವರು ಹೇಳಿದರೆ, ಜ್ಞಾನಸೂತಕ ಹಿಂಗದೆ ಪ್ರಾಣಲಿಂಗಿಯಾಗಬಾರದೆಂದು ಮನಮುನಿ ಗುಮ್ಮಟದೇವರು ತಿಳಿಸಿದ್ದಾರೆ.

ಇಷ್ಟಲಿಂಗಕ್ಕೆ ದೃಷ್ಟಾರ್ಪಿತವಾದರೆ,ಪ್ರಾಣಲಿಂಗಕ್ಕೆ ತೃಪ್ತಿ ಅರ್ಪಿತವೆಂದು ಬಿಬ್ಬಿಬಾಚಯ್ಯನವರು ಹೇಳಿದರೆ, ತ್ರಿವಿಧಲಿಂಗದಲ್ಲಿ ಸೂಜಿಗಲ್ಲಿನಂತೆ ಎರಕತ್ವವುಳ್ಳದೇ ಪ್ರಾಣಲಿಂಗಿಸ್ಥಲವೆಂದು ಮಡಿವಾಳ ಮಾಚಿದೇವರು ತಿಳಿಸಿದ್ದಾರೆ. ತಿಲದ ಮರೆಯ ತೈಲದಂತೆ, ಚಂದನದ ಮರೆಯ ಗಂಧದಂತೆ ಪ್ರಾಣಲಿಂಗಿಸ್ಥಲವೆಂದು ಬಿಬ್ಬಿಬಾಚಯ್ಯಗಳು ವಿವರಿಸಿದರೆ,ಪರಸ್ತ್ರೀಯರ ಮುಟ್ಟದೆ, ಪರದ್ರವ್ಯವ ಅಪಹರಿಸದೆ ಪರನಿಂದೆಯ ಮಾಡದಿರುವುದೇ ಪ್ರಾಣಲಿಂಗಿಯ ಗುಣವೆಂದು ಮಡಿವಾಳ ಮಾಚಿದೇವರು ತಿಳಿಸಿದ್ದಾರೆ.

ನೀರಕಡೆದು ಬೆಣ್ಣೆಯ ಮೆದ್ದಲ್ಲಿ ಪ್ರಾಣಲಿಂಗ ಸಂಬಂಧಿಯೆಂದು ಹೇಳಿರುವ ಮೋಳಿಗೆ ಮಾರಯ್ಯನವರು ಪ್ರಾಣಲಿಂಗಿಯಾದವನು ವಾಯುವಿನೊಳಗಿನ ಗಂಧದಂತಿರಬೇಕು, ದೃಷ್ಟಿಯೊಳಗಿನ ಚಿತ್ತದಂತಿರಬೇಕೆಂದು ವಿವರಿಸಿದ್ದಾರೆ.

“ಪ್ರಾಣಲಿಂಗಿಗಳೆಂದು ನುಡಿವುತಿಪ್ಪ ಅಣ್ಣಗಳು ನೀವು ಕೇಳಿರೆ
ಲಿಂಗಕ್ಕೆ ಪ್ರಾಣ ಮೊದಲೊ?ಪ್ರಾಣಕ್ಕೆ ಲಿಂಗ ಮೊದಲೊ?
ಈ ಉಭಯವ ವಿಚಾರಿಸಿಕೊಂಡು ನುಡಿಯಿರಣ್ಣಾ
ವಾಯು ಗಂಧವ ಸೋಂಕಿತೊ? ಗಂಧ ವಾಯುವ ಸೋಂಕಿತೊ?
ಲಿಂಗವ ಮನವರಿಯಿತೊ?ಮನವ ಲಿಂಗವರಿಯಿತೊ?
ಕಾಯದಿಂದ ಸೋಂಕಿದ ಸುಖವ ಮನದಿಂದರಿದವರಾರೊ?
ಮನದಲ್ಲಿ ಮುಟ್ಟಿದ ಗುಣವ ತನುವಿನಿಂದರಿದವರಾರೊ?
ಇಂತೀ ಉಭಯವನರಿದಡೆ ಪ್ರಾಣಲಿಂಗಿಗಳೆಂಬೆ
ಉರಿಸೋಂಕಿದ ಕರ್ಪುರಕ್ಕೆ ನಿಲುವುದಕ್ಕೆ ನೆಲೆವನೆಯಿನ್ನಾವುದೊ?
ಭ್ರಮರ ಸೋಂಕಿದ ಸುವಾಸನೆಗೆ ಕಡೆ ನಡು ಮೊದಲಾವುದೊ?
ಧೂಳು ಕಂಡ ಜಲಕ್ಕೆ ನೆಲೆಯಿನ್ನಾವುದೊ?
ಲಿಂಗ ಸೋಂಕಿದ ಮನಕ್ಕೆ ಠಾವಿನ್ನಾವುದೊ?
ಇಂತೀ ಗುಣಂಗಳೆಲ್ಲ ಕಳೆದುಳಿದ ಮಹಾತ್ಮಂಗೆ
ನಮೋನಮೋ ನಿ:ಕಳಂಕ ಮಲ್ಲಿಕಾರ್ಜುನಾ”

-ಮೋಳಿಗೆ ಮಾರಯ್ಯ(ಸ.ವ.ಸಂ.8,ವ:1926)

ಈ ವಚನದಲ್ಲಿ ಮೋಳಿಗೆಮಾರಯ್ಯವನರು ಪ್ರಾಣಲಿಂಗಿಸ್ಥಲದ ಬಗೆಗೆ ವಿವರವಾಗಿ ಹೇಳಿದ್ದಾರೆ. ಪ್ರಾಣ-ಲಿಂಗ,ವಾಯು-ಗಂಧಗಳ ಸಮಾಗಮದ ಮೂಲಕ ಪ್ರಾಣಲಿಂಗಿ ತತ್ವ ರೂಪುಗೊಂಡದ್ದನ್ನು ವಿವರಿಸಿದ್ದಾರೆ. ಉಭಯವನರಿದವರಿಗೆ ಪ್ರಾಣಲಿಂಗಿಗಳೆಂಬೆ ಎಂದವರು ತಿಳಿಸಿದ್ದಾರೆ.

ಸ್ವಾನುಭಾವದ ಅಮೃತವನುಂಡು ಮನ ಮಗ್ನವಾದಾತನೇ ಪ್ರಾಣಲಿಂಗಿಯೆಂದು ಹೇಳಿರುವ ಹಡಪದ ಅಪ್ಪಣ್ಣನವರು ‘ಹುಡಿಯ ಹಾರಿಸಿ ಅಡಗಿಸುವ ವಾಯು ಅಡಗಿ ತೋರುವ ಬೆಡಗಿನಂತೆ ಪ್ರಾಣಲಿಂಗಿಯ ಅಂಗ’ ವೆಂದು ತಿಳಿಸಿದ್ದಾರೆ.

“ಪ್ರಾಣಲಿಂಗಿ ಪ್ರಾಣಲಿಂಗಿ ಎಂದು ನುಡಿದಾಡುತಿಪ್ಪಿರಿ
ಪ್ರಾಣಲಿಂಗದ ನೆಲೆಯನಾರುಬಲ್ಲರು?
ಪ್ರಾಣಲಿಂಗಿಯಾದರೆ,
ವಾಯುಪ್ರಾಣವ ನಿಲಿಸಿ, ಲಿಂಗ ಪ್ರಾಣವಾಗುವದೀಗ ಪ್ರಾಣಲಿಂಗಿ,
ಪ್ರಾಣಲಿಂಗಿಯಾದರೆ,
ಗುರುಲಿಂಗ ಜಂಗಮದ ಪಾದೋದಕ ಪ್ರಸಾದವ
ತನ್ನೊಳರಿದು ಮೈ ಮರೆದು ಪರವಶನಾಗಿ
ಲಿಂಗದೊಳಗೆ ಬೆರೆಸುವದೀಗ ಪ್ರಾಣಲಿಂಗಿ
ಇದನರಿಯದೆ ವಾಯು ಪ್ರಾಣವಾಗಿ, ಬಾಯನುಡಿಯ ಬಲ್ಲಿದವರಾಗಿ
ಬೊಗಳಿಯಾಡುವ ಜಾವಳರ ಮಾತ ಮೆಚ್ಚುವನೆ

ನಮ್ಮ ಬಸವಪ್ರಿಯ ಕೂಡಲ ಚೆನ್ನಬಸವಣ್ಣ?”

-ಹಡಪದಪ್ಪಣ್ಣ(ಸ.ವ.ಸಂ.9,ವ:984)

ಪ್ರಾಣಲಿಂಗಿಸ್ಥಲದ ನೆಲೆಯನ್ನು ಈ ವಚನದಲ್ಲಿ ಸ್ಪಷ್ಟಗೊಳಿಸಿರುವ ಹಡಪದಪ್ಪಣ್ಣನವರು, ವಾಯಪ್ರಾಣವ ನಿಲಿಸಿ ಲಿಂಗ ಪ್ರಾಣವಾಗುವದೇ ಪ್ರಾಣಲಿಂಗಿಯೆಂದು ತಿಳಿಸಿದ್ದಾರೆ. ತನ್ನೊಳರಿದು ಮೈಮರೆಯುವ ಕ್ರಿಯೆ ಇಲ್ಲಿ ತುಂಬ ಮುಖ್ಯವಾಗಿದೆ.

‘ಆವಾವ ಕಾಲದಲ್ಲಿಯೂ ಎನಗೆ ಪ್ರಾಣಲಿಂಗಿಗಳ ಸಂಗವಲ್ಲದೆ ಮತ್ತೊಂದನೊಲ್ಲೆನಯ್ಯಾ’ ಎಂದಿರುವ ನೀಲಮ್ಮನವರು ಪ್ರಾಣಲಿಂಗಿಸ್ಥಲದ ಮಹತ್ವವನ್ನು ಹೇಳಿದ್ದಾರೆ. ಮಹಾದೇವಿಯಕ್ಕ ಈ ಸ್ಥಲ ಕುರಿತಂತೆ ಹೀಗೆ ವಿವರಿಸಿದ್ದಾರೆ.

“ಪ್ರಾಣಲಿಂಗವೆಂದರಿದ ಬಳಿಕ
ಪ್ರಾಣ ಪ್ರಸಾದವಾಯಿತ್ತು
ಲಿಂಗ ಪ್ರಾಣವೆಂದರಿದ ಬಳಿಕ
ಅಂಗದಾಸೆ ಹಿಂಗಿತ್ತು
ಲಿಂಗ ಸೋಂಕಿನ ಸಂಗಿಗೆ ಕಂಗಳೆ ಕರುವಾದವಯ್ಯ
ಚೆನ್ನಮಲ್ಲಿಕಾರ್ಜುನಯ್ಯಾ
ಹಿಂಗದೆ ಅನಿಮಿಷನಾಗಿಹ ಶರಣಂಗೆ.....”

-ಅಕ್ಕಮಹಾದೇವಿ(ಸ.ವ.ಸಂ.5,ವ:284)

ಅಂಗದಾಸೆ ಹಿಂಗಿ ಪ್ರಾಣಪ್ರಸಾದವಾದ ಬಗೆಯನ್ನು ಅಕ್ಕನವರು ಇಲ್ಲಿ ಸೊಗಸಾಗಿ ಹೇಳಿದ್ದಾರೆ.ಇನ್ನೂ ಅನೇಕ ವಚನಕಾರರು ಪ್ರಾಣಲಿಂಗಿಸ್ಥಲದ ಬಗೆಗೆ ತಮ್ಮ ಅನುಭವದ ಹಿನ್ನಲೆಯಲ್ಲಿ ಮಾತನಾಡಿದ್ದಾರೆ. ಲಿಂಗಾಯುತ ಧರ್ಮದಲ್ಲಿ ಪ್ರಾಣಲಿಲಂಗಿಸ್ಥಲಕ್ಕೆ ಮಹತ್ತರವಾದ ಸ್ಥಾನವಿದೆಯೆಂದು ಇವರೆಲ್ಲ ತಿಳಿಸಿದ್ದಾರೆ.

ಈ ಅಂಕಣದ ಹಿಂದಿನ ಬರಹಗಳು:
ಶರಣಸ್ಥಲ
ಭಕ್ತಿಸ್ಥಲದಲ್ಲಿ ಬಯಲಾದವರು ಬಸವಣ್ಣನವರು
ಗಣಾಚಾರ
ಐಕ್ಯಸ್ಥಲ
ಪ್ರಸಾದಿಸ್ಥಲ
ಮಹೇಶ್ವರಸ್ಥಲ
ಭಕ್ತಸ್ಥಲ
ಷಟ್‍ಸ್ಥಲಗಳು
ಭೃತ್ಯಾಚಾರ
ಶಿವಾಚಾರ
ಅಷ್ಟಾವರಣಗಳಲ್ಲಿ ಮಂತ್ರ
ರುದ್ರಾಕ್ಷಿ ಮಹತ್ವ
ಶೈವಾಗಮಗಳಲ್ಲಿ ವಿಭೂತಿ
ಶರಣರ ಪರಿಕಲ್ಪನೆಯಲ್ಲಿ ಪ್ರಸಾದ
ಅಷ್ಟಾವರಣಗಳಲ್ಲಿ ಜಂಗಮ
ಅಷ್ಟಾವರಣಗಳಲ್ಲಿನ ಇಷ್ಟಲಿಂಗ ವಿಚಾರ
ಅಷ್ಟಾವರಣಗಳಲ್ಲಿ ಗುರು ಮತ್ತು ಲಿಂಗ
ಹೊಸ ದೃಷ್ಟಿಯುಳ್ಳ ಶರಣರ ತಾತ್ವಿಕ ನೆಲೆಗಳು
ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡಿದ ವಚನ ಚಳವಳಿ
ಹೆಣ್ಣು ಮಾಯೆಯಲ್ಲ… ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಹೆಣ್ಣಿನ ಸಮಾನತೆಗೆ ಮಿಡಿದ ವಚನ ಚಳವಳಿ
ಶರಣರ ಸಮಾನತೆ ಹಾದಿಯಲ್ಲಿ ಶ್ರಮಜೀವಿಗಳ ಸಮೂಹವೇ ಹಾಲಹಳ್ಳ
ಶರಣರ ಅಂತಃಕರಣದಲ್ಲಿ ಸಮ ಸಮಾಜದ ಕನಸು
ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ
ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...