ಭಾಷಾಂತರ ಮತ್ತು ಲಿಂಗ ರಾಜಕಾರಣ

Author : ಎಂ. ಉಷಾ

Pages 158

₹ 100.00




Year of Publication: 2012
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

ಎಂ. ಉಷಾ, ರಚಿಸಿರುವ 'ಭಾಷಾಂತರ ಮತ್ತು ಲಿಂಗರಾಜಕಾರಣ' ಕೃತಿಯು ಲಿಂಗತ್ವವನ್ನು ಬಳಸಿಕೊಂಡು ಕನ್ನಡದ ಭಾಷಾಂತರ ಪಠ್ಯಗಳ ಲಿಂಗ ರಾಜಕಾರಣವನ್ನು ವಿಶ್ಲೇಷಿಸುವ ಪ್ರಯತ್ನವಾಗಿದೆ.

ವೈಚಾರಿಕ ವ್ಯವಸ್ಥೆಯೊಂದರಲ್ಲಿ ಭಾಷಾಂತರಗಳೂ 'ಸ್ವತಂತ್ರ' ರಚನೆಗಳಷ್ಟೇ ರಾಜಕೀಯ ಆಸಕ್ತಿ ಹೊಂದಿರುತ್ತವೆ ಎನ್ನುವ ಆಧುನಿಕೋತ್ತರ ಚಿಂತನೆಯ ಪ್ರಮೇಯವನ್ನು ಆಧರಿಸಿ, ಮಹಿಳಾ ಪ್ರಶ್ನೆಗಳು ಮುಂಚೂಣಿಯಲ್ಲಿದ್ದ ವಸಾಹತು ಕಾಲಘಟ್ಟದಲ್ಲಿ ಕನ್ನಡದ ರೂಪಾಂತರ(ನಾಟಕ)ಗಳು ಈ ಪ್ರಶ್ನೆಯನ್ನು ನಿರ್ವಹಿಸಿದ ಕ್ರಮ ಯಾವುದು ಎಂಬುದನ್ನು ಆಯ್ದ ಕೆಲವು ಪಠ್ಯಗಳ ಮುಖಾಂತರ ತೋರಿಸಿದ್ದಾರೆ.

ಕೃತಿಯ ಆಯ್ಕೆಯಿಂದ ಹಿಡಿದು ಭಾಷಾಂತರದ ಉದ್ದೇಶ, ಆಶಯ ಹಾಗೂ ಸ್ವರೂಪದವರೆಗೆ ಎಲ್ಲ ಹಂತಗಳಲ್ಲಿಯೂ ಲಿಂಗತ್ವವು ಭಾಷಾಂತರವನ್ನು ಪ್ರಭಾವಿಸಬಲ್ಲದು ಎಂಬುದನ್ನು ಪ್ರಸ್ತುತ ಕೃತಿಯು ತೋರಿಸಿಕೊಡುತ್ತದೆ.

About the Author

ಎಂ. ಉಷಾ
(12 May 1967)

ಲೇಖಕಿ, ಅನುವಾದಕಿ ಎಂ. ಉಷಾ ಅವರು ಮೂಲತಃ ಚಾಮರಾಜನಗರ ಜಿಲ್ಲೆಯವರು. 1967 ಮೇ 12 ರಂದು ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಹಾಗೂ ಪಿ.ಎಚ್‌ಡಿ ಪದವಿ ಪಡೆದಿದ್ದಾರೆ. ಸಾಹಿತ್ಯ, ವಿಮರ್ಶೆ, ಆಧುನಿಕ ಪೂರ್ವ ಸಾಹಿತ್ಯ ಮತ್ತು ಇತಿಹಾಸ ವಿಷಯದಲ್ಲಿ ಆಸಕ್ತಿ. ಅನೇಕ ಗ್ರಂಥಗಳನ್ನು ಅನುವಾದಿಸಿದ್ದಾರೆ. ಭಾಷಾಂತರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಪತ್ರಿಕೆ ಮತ್ತು ಮಹಿಳೆ, ಭಾರತೀಯ ಸ್ತ್ರೀವಾದ ಮತ್ತು ಸಂಸ್ಕೃತಿ ಚಿಂತನೆ, ಮಹಿಳೆ ಮತ್ತು ಜಾತಿ, ಮಹಿಳಾ ಅಧ್ಯಯನ, ಆಧುನಿಕ ಮಹಿಳಾ ಸಾಹಿತ್ಯ, ಭಾಷಾಂತರ ಮತ್ತು ಲಿಂಗ ರಾಜಕಾರಣ, ಭಾಷಾಂತರ ಪ್ರವೇಶಿಕೆ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ‘ಶೂಲಿ ...

READ MORE

Related Books