ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟಾದ್ವತ

Author : ನಾ. ಗೀತಾಚಾರ್ಯ

Pages 148

₹ 100.00




Published by: ಬಿ. ಎಂ. ಶ್ರೀ ಸ್ಮಾರಕ ಪ್ರತಿಷ್ಠಾನ ಬೆಂಗಳೂರು
Address: ಬೆಂಗಳೂರು

Synopsys

16ನೇ ಶತಮಾನದಿಂದಲೇ ವಿಶಿಷ್ಟಾದೈತದಲ್ಲೂ ಕನ್ನಡದಲ್ಲಿ ಸಾಹಿತ್ಯ ರಚನೆಯಾಗಿರುವುದನ್ನು 'ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟಾದ್ವತ' ಕೃತಿ ಗುರುತಿಸುತ್ತದೆ. ವಿಶಿಷ್ಟಾದ್ಯತದ ಪ್ರಭಾವವನ್ನು ಗುರುತಿಸಿ ಹಲವು ಹಿರಿಯ ವಿದ್ವಾಂಸರು ಬರದಿರುವ ಲೇಖನಗಳನ್ನು ಡಾ. ನಾ. ಗೀತಾಚಾರ್ಯ ಅವರು ಸಂಪಾದಿಸಿದ್ದಾರೆ. ವಿಚಾರಗೋಷ್ಠಿಯೊಂದರಲ್ಲಿ ಮಂಡಿಸಿದ ಪ್ರಬಂಧಗಳನ್ನು ಇಲ್ಲಿ ಒಟ್ಟು ಸೇರಿಸಲಾಗಿದೆ. ಬಿ. ಎಂ. ಶ್ರೀ ಸ್ಮಾರಕ ಪ್ರತಿಷ್ಠಾನ ಬೆಂಗಳೂರು ಈ ಕೃತಿಯನ್ನು ಹೊರತಂದಿದೆ. ವೈದಿಕ ಪರಂಪರೆಯಲ್ಲಿ ರಾಮಾನುಜಾಚಾರ್ಯರ ಕೊಡುಗೆ ಮಹತ್ವವಾದುದು. ಇಂದು 'ಶೂದ್ರರೆಲ್ಲ ಶಾಶ್ವತ ನರಕವಾಸಿಗಳು' ಎಂದು ಪ್ರತಿಪಾದಿಸಿದ ಮಧ್ವಾಚಾರ್ಯರಿಗೆ ಸಿಕ್ಕಿದ ಮಹತ್ವ, ತಮ್ಮ ಮಿತಿಯಲ್ಲಿ ಜಾತಿಯನ್ನು ನಿವಾರಿಸಲು ಪ್ರಯತ್ನಿಸಿದ ರಾಮಾನುಜಾಚಾರ್ಯರಿಗೆ ಸಿಕ್ಕಿಲ್ಲ. ಈ ನೆಲೆಯಲ್ಲಿ ವಿಶಿಷ್ಟಾದೈತದ ಪ್ರಭಾವದಲ್ಲಿ ರೂಪುಗೊಂಡು ಕನ್ನಡ ಸಾಹಿತ್ಯವನ್ನು ಗುರುತಿಸುವ ಕೆಲಸವನ್ನು ಮಾಡಲಾಗಿದೆ. ಹರಿದಾಸ ಸಾಹಿತ್ಯದಿಂದ ಹಿಡಿದು ಕನಕದಾಸ, ಲಕ್ಷ್ಮೀಶ ಮೊದಲಾದವರು ವಿಶಿಷ್ಟಾದೈತ ಅನುಯಾಯಿಗಳೇ ಆಗಿದ್ದಾರೆ ಎಂದು ಈ ಕೃತಿ ಹೇಳುತ್ತದೆ. 2000ಕ್ಕೂ ಅಧಿಕ ಕೀರ್ತನೆಗಳು ಸಂಗ್ರಹವಾಗಿವೆ. ಕೀರ್ತನ ಸಾಹಿತ್ಯವಷ್ಟೇ ಅಲ್ಲದೆ ಕಂದ, ವೃತ್ತದ ಪದ್ಯ ಗ್ರಂಥಗಳು, ಷಟ್ಟದಿ ಕಾವ್ಯಗಳು, ಗದ್ಯ ಕೃತಿಗಳನ್ನೂ ರಚಿಸಿದ್ದಾರೆ ಎನ್ನುವುದನ್ನು ಈ ಕೃತಿ ಹೇಳುತ್ತದೆ.

About the Author

ನಾ. ಗೀತಾಚಾರ್ಯ
(02 February 1958)

ಕನ್ನಡ ಶಾಸನ, ಭಾಷೆ, ದಾಸ ಸಾಹಿತ್ಯ, ಶಾಸ್ತ್ರೀಯ ಸಾಹಿತ್ಯದಲ್ಲಿ ಅಪಾರವಾಗಿ ದುಡಿದವರು ನಾ. ಗೀತಾಚಾರ್ಯ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡ ಹೆಜ್ಜಾಜಿಯಲ್ಲಿ 1958 ಫೆಬ್ರವರಿ 02 ರಂದು ಜನಿಸಿದರು. ತಂದೆ ನಾರಾಯಣಸ್ವಾಮಿ, ತಾಯಿ ಲಕ್ಷ್ಮೀದೇವಮ್ಮ. ಶೇಷಾದ್ರಿಪುರಂನ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದರು. ನಾಟಕ,ಕಲೆ, ಸಂಸ್ಕೃತಿ, ಸಾಹಿತ್ಯ ಹೀಗೆ ಹಲವು ರಂಗದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. `ಹರಿದಾಸ ಸಾಹಿತ್ಯದಲ್ಲಿ ವಿಶಿಷ್ಟಾದ್ವತ’ ಅವರ ಪ್ರಮುಖ ಕೃತಿ. ‘ಆಳ್ವಾರರ ಹಾಡುಗಳು’ ಅವರ ಅನುವಾದಿತ ಕೃತಿ. ...

READ MORE

Related Books