ಮಾರ್ಗ-೬

Author : ಎಂ.ಎಂ. ಕಲಬುರ್ಗಿ

Pages 640

₹ 500.00




Year of Publication: 2010
Published by: ಸಪ್ನ ಬುಕ್ ಹೌಸ್

Synopsys

ಸಂಶೋಧಕ ಎಂ.ಎಂ. ಕಲಬುರ್ಗಿ ಅವರು ಮಾರ್ಗ ಸರಣಿಯ ಆರನೆಯ ಸಂಪುಟದಲ್ಲಿ ಅವರಿಗೆ 50, 60ನೆಯ ಹುಟ್ಟುಹಬ್ಬದ ಸಂದರ್ಭ, ಪಂಪಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯಮಟ್ಟದ ವಿಚಾರ ಸಂಕಿರಣಗಳಲ್ಲಿ ಮಾಡಿದ ವಿಶೇಷ ಭಾಷಣಗಳಿವೆ. ಹಾಗೆಯೇ ಅವರ ಮಾರ್ಗದರ್ಶನದ ವಿದ್ಯಾರ್ಥಿಗಳ ಹಾಗೂ ಪರಿಚಿತ ಆತ್ಮೀಯರ ಪಿಎಚ್.ಡಿ ಗ್ರಂಥಗಳಿಗೆ ಬರೆದ ಮುನ್ನುಡಿ, ಬೆನ್ನುಡಿಗಳಿವೆ.  ಅವುಗಳಲ್ಇಲದೆ ಆತ್ಮೀಯರನ್ನು, ಹಿರಿಯರನ್ನು, ಸ್ನೇಹಿತರನ್ನು, ವಿದ್ಯಾರ್ಥಿಗಳನ್ನು ಕುರಿತು ಬರೆದ ವ್ಯಕ್ತಿಚಿತ್ರಣಗಳನ್ನು ಈ ಸಂಪುಟ ಒಳಗೊಂಡಿದೆ. 2010ರಲ್ಲಿ ಸಪ್ನ ಬುಕ್ ಹೌಸ್, ಬೆಂಗಳೂರು ಈ ಗ್ರಂಥವನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Related Books