ಕನ್ನಡ ಚಂಪೂಕಾವ್ಯಗಳ ಪದ್ಯಾನುಕ್ರಮಣಿ

Author : ಎನ್. ಅನಂತ ರಂಗಾಚಾರ್

Pages 648

₹ 330.00




Year of Publication: 1972
Published by: ಪ್ರಸಾರಾಂಗ ಕುವೆಂಪು ವಿಶ್ವವಿದ್ಯಾಲಯ
Address: ಮೈಸೂರು

Synopsys

‘ಕನ್ನಡ ಚಂಪೂಕಾವ್ಯಗಳ ಪದ್ಯಾನುಕ್ರಮಣಿ’ ಅನಂತರಂಗಾಚಾರ್ ಅವರ ಗ್ರಂಥವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಭಾರತದ ಇತ್ತೀಚಿನ ಸೋದರಿ ಭಾಷೆಗಳಲ್ಲಿ ಚಂಪೂಕಾವ್ಯಗಳ ಅವಶ್ಯಕತೆಯನ್ನರಿತು ಇಂತಹ ಕಾವ್ಯ ಸಾಕಷ್ಟು ನಡೆದಿದೆ. ತಮಿಳಿನ 'ಕಂಬರಾಮಾಯಣ ಅರುವು' 'ಶಿಲಪ್ಪದಿಕಾರಪ್ಪ ಹು', ಹಿಂದಿಯಲ್ಲಿ 'ತುಳಸೀರಾಮಾಯಣ ಶ್ಲೋಕ, ಗ್ರಂಥಸಾಹೇಬ್ ಕೃತಿಯ ಆಕಾರಾಧಿಸೂಚಿ' ಮೊದಲಾದುವು ಈ ಕ್ಷೇತ್ರದಲ್ಲಿ ರಚಿತವಾಗಿರುವ ಕೆಲವು ಕೃತಿಗಳು. ಕನ್ನಡದಲ್ಲಿ ಇಂತಹ ಅನುಕ್ರಮಣಿಯ ಆವಶ್ಯಕತೆ ಕಂಡುಬಂದುದು ಈಗ ಸುಮಾರು 35ವರ್ಷಗಳ ಕೆಳಗೆ. ನಾನು ಮಲ್ಲಿಕಾರ್ಜುನನ ಸೂಕ್ತಿ ಸುಧಾರ್ಣವ'ವೆಂಬ ಸಂಕಲನ ಗ್ರಂಥವನ್ನು ಸಂಶೋಧಿಸಲು ಹೊರಟಾಗ. ಮಲ್ಲಿಕಾರ್ಜುನನು ಅಷ್ಟಾದಶ ವರ್ಣನಾತ್ಮಕವಾದ ತನ್ನ ಈ ಸಂಕಲನ ಗ್ರಂಥದಲ್ಲಿ ತನಗೆ ಹಿಂದೆ ಇದ್ದ ಎಲ್ಲ ಕನ್ನಡ ಗ್ರಂಥಗಳಿಂದ ಸುಮಾರು 2200 ಪದ್ಯಗಳನ್ನು ಸಂಗ್ರಹಿಸಿದ್ದಾನೆ. ಇವುಗಳಲ್ಲಿ ಯಾವುದಕ್ಕೂ ಆಕರಗಳನ್ನು ಸೂಚಿಸಿಲ್ಲ. ಬಹುಶ್ರಮದಿಂದ ಕೆಲವು ಚಂಪೂಗ್ರಂಥಗಳಿಗೆ ಮಾತ್ರ ಅಕಾರಾದಿಗಳನ್ನು ಮಾಡಿಕೊಂಡು ಸಾಧ್ಯವಾದಷ್ಟು ಆಕರಗಳನ್ನು ಕಂಡುಹಿಡಿಯಲಾಯಿತು. ಆದರೂ ಸುಮಾರು ಅರ್ಧದಷ್ಟರ ಭಾಗ ಆಕರರಹಿತವಾಗಿಯೇ ಇದೆ. “ಸೂಕ್ತಿ ಸುಧಾರ್ಣವ'ದ ರೂಪಾಂತರದಂತಿರುವ ಮಲ್ಲಕವಿ ವಿರಚಿತವಾದ “ಕಾವ್ಯಸಾರ'ವೆಂಬ ಮತ್ತೊಂದು ಸಂಕಲನವಿದೆ. ಇದರಲ್ಲಿ ಸುಮಾರು 3300 ಪದ್ಯಗಳಿವೆ. ಇಲ್ಲಿಯೂ ಯಾವ ಪದ್ಯಕ್ಕೂ ಆಕರದ ಸೂಚನೆಯಿಲ್ಲ. ಸೂಕ್ತಿ ಸುಧಾರ್ಣವಕ್ಕೂ ಇರುವ ಸಂವಾದಿಪದ್ಯಗಳು 800 ಮಾತ್ರ. ಇದು ಕನ್ನಡ ಸಾಹಿತ್ಯದ ಬೃಹದ್ರೂಪವನ್ನು ಪ್ರಕಟಿಸುವ ಮಹದಂಥ ಇಲ್ಲಿಯ ಪದ್ಯಗಳಿಗೆ ಶಾಸ್ತ್ರೀಯವಾಗಿ ಆಕರಗಳನ್ನು ನಿಷ್ಕರ್ಷಿಸಬೇಕಾದರೆ ಈಗ ಉಪಲಬ್ಧವಾದ ಎಲ್ಲ ಕನ್ನಡ ಚಂಪುಗಳ ಅನುಕ್ರಮಣಿ ಅತ್ಯಾವಶ್ಯಕ, ಪ್ರಸಕ್ತ ಅನುಕ್ರಮಣಿಯ ಸಹಾಯದಿಂದ ಆದರ ಆಕರವನ್ನು ಕಂಡುಹಿಡಿಯಲು ಹೊರಟಾಗಲೂ ಅದರಲ್ಲಿ ಆಕರಗಳು ಸಿಕ್ಕದ ಸುಮಾರು ಸಾವಿರಾರು ಪದ್ಯಗಳು ಸಿಕ್ಕುವವು, ಆಕರ ಸಿಕ್ಕುವ ಸುಮಾರು ಅರ್ಧಭಾಗದಷ್ಟು ಪದ್ಯಗಳು ಅವಕ್ಕೆ ಹಿಂದೆ ಇದ್ದ ಸುಮಾರು 35 ಗ್ರಂಥಗಳಿಂದ ಸಂಗ್ರಹಿತವಾಗಿವೆ. ಇದರ ಆಧಾರದ ಮೇಲೆ ಆಕರ ಸಿಕ್ಕದ ಆಷ್ಟೇ ಸಂಖ್ಯೆಯ ಗ್ರಂಥ ಗಳಿಂದ ಆಯ್ದುಕೊಂಡಿರಬೇಕಲ್ಲವೆ ? ಅವುಗಳೆಲ್ಲ ಈಗ ನಷ್ಟವಾಗಿ ನನಗೆ ಉಪಲಬ್ಧವಾಗದೆ ಹೋಗಿವೆಯೆಂದರೆ ಅನುಕ್ರಮಣಿಗಳು ನನಗೆ ಯಾವ ಕಣ್ಣು ತೆರೆಸುವಂತಾಗುತ್ತವೆ ಎಂಬುದನ್ನು ಊಹಿಸಿಕೊಳ್ಳಬಹುದು. ಹಾಗೆಯೇ ಅವುಗಳು ಕವಿ ಮತ್ತು ಕೃತಿಗಳ ಪೂರ್ವಾಪರ ಸಂಬಂಧ ಮತ್ತು ಪ್ರಭಾವಗಳನ್ನು ನಿಷ್ಕರ್ಷಿಸಲು ಸಹಾಯಕವಾಗುತ್ತವೆ. ಸಂಶೋಧಕನಿಗಂತೂ ಇದರ ಉಪಯೋಗ ಎಷ್ಟೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

About the Author

ಎನ್. ಅನಂತ ರಂಗಾಚಾರ್ - 28 October 1997)

ಕ್ರಿ.ಶ. 1904 ಜೂನ್ ತಿಂಗಳಲ್ಲಿ , ಎನ್ . ಅನಂತರಂಗಾಚಾರ್, ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ ಜನಿಸಿದರು. ತಂದೆ ಶ್ರೋತ್ರೀಯ ಬ್ರಾಹ್ಮಣ ನರಸಿಂಹಾಚಾರ್ಯರು. ಆಚಾರ್ಯರೇ ಒಂದೆಡೆ ಹೇಳಿರುವಂತೆ ಇವರೇ ಅವರಿಗೆ ಕಾಯಕ ಮೌಲ್ಯವನ್ನೂ ಕಾಲಪ್ರಜ್ಞೆಯನ್ನು ಕಲ್ಪಿಸಿಕೊಟ್ಟವರು. ನಾಲ್ಕನೇ ವರ್ಷದಿಂದ ಹದಿಮೂರನೇ ವರ್ಷದವರೆಗೆ ಬೆಳಿಗ್ಗೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ಜೊತೆಯಲ್ಲಿಯೇ ಇರಿಸಿಕೊಂಡು ಆ ಅವಧಿಯಲ್ಲಿ ವೇದ , ಪ್ರಬಂಧ , ಪ್ರಯೋಗ , ಸಂಸ್ಕೃತ  ಕಲಿಸಿದರು .ತಿ. ನರಸೀಪುರದ ಎ.ವಿ. ಸ್ಕೂಲಿನಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ, ನಂತರ, ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದರು .ಮೈಸೂರು ...

READ MORE

Related Books