ಚಿಂತಾಮಣಿ

Author : ಎಚ್. ಎಸ್. ವೆಂಕಟೇಶಮೂರ್ತಿ

Pages 416

₹ 400.00




Year of Publication: 2006
Published by: ಸಿ.ವಿ.ಜಿ ಪಬ್ಲಿಕೇಷನ್ಸ್
Address: #70, 2ನೇ ಮುಖ್ಯ ರಸ್ತೆ, ಜಬ್ಬರ್ ಬ್ಲಾಕ್ ಬೆಂಗಳೂರು-560003
Phone: 23313400

Synopsys

ಚಿಂತಾಮಣಿ’ ಕೃತಿಯು ಬಿ. ಆರ್. ಲಕ್ಷಣರಾವ್ ಅಭಿನಂದನ ಗ್ರಂಥವಾಗಿದ್ದು, ಎಚ್., ಎಸ್. ವೆಂಕಟೇಶ ಮೂರ್ತಿ, ನರಹಳ್ಳಿ ಬಾಲಸುಬ್ರಹ್ಮಣ್ಯ, ಎಂ. ಆರ್ ಕಮಲ ಅವರ ಸಂಪಾದಕತ್ವದ ಕೃತಿಯಾಗಿದೆ. ಕೃತಿಯು ನಡೆದು ಬಂದ ದಾರಿಯ ಕುರಿತು ಮೆಲುಕು ನಿಟ್ಟಿನಲ್ಲಿ ಸ್ಪಂದನೆಯ ಭಾಗವಾಗಿ ಪ್ರಮುಖ ಲೇಖಕರಾದ ಜಿ. ಎಸ್. ಶಿವರುದ್ರಪ್ಪ, ಚೆನ್ನವೀರ ಕಣವಿ, ಎಲ್.ಎಸ್. ಶೇಷಗಿರಿರಾವ್, ಜಿ. ಎಸ್. ಸಿದ್ದಲಿಂಗಯ್ಯ, ಯು. ಆರ್.ಅನಂತಮೂರ್ತಿ, ನಿಸಾರ್ ಅಹಮದ್, ಸುಮತೀಂದ್ರ ನಾಡಿಗ್, ಚಂದ್ರಶೇಖರ ಕಂಬಾರ, ಸುಬ್ರಾಯ ಚೊಕ್ಕಾಡಿ, ಎಚ್. ಇಬ್ರಾಹಿಂ, ಡಿ. ಕೆ ಸೀತಾರಾಮ ಶಾಸ್ತ್ರಿ, ವಿ. ಕೆ ಜನಾರ್ದನ್, ದೇಶಕುಲಕರ್ಣಿ, ಸಿ. ಆಶ್ವತ್ಥ,  ಶಿವಮೊಗ್ಗ ಸುಬ್ಬಣ್ಣ , ವೈ. ಕೆ ಮುದ್ದುಕೃಷ್ಣ, ಟಿ.ಎಸ್.ನಾಗಾಭರಣ, ಬಾಕಿನ, ಚಿ. ಶ್ರೀನಿವಾಸರಾಜು, ಎಚ್. ಎಸ್. ರಾಘವೇಂದ್ರರಾವ್, ಟಿ. ಎನ್. ಸೀತಾರಾಮ್, ಪಸನ್ನ, ಎ.ಎನ್. ಪ್ರಸನ್ನ, ಕುಂ.ವೀ, ಜಯಂತ ಕಾಯ್ಕಿಣಿ, ಎಂ.ಎಸ್. ಶ್ರೀರಾಮ್, ದೊಡ್ಡರಂಗೇಗೌಡ, ಎಸ್. ಮಂಜುನಾಥ್, ಎಂ. ಆರ್. ಕಮಲ, ಆನಂದ ಜಂಝರವಾಡ, ಕೆ. ಸತ್ಯನಾರಾಯಣ, ಡುಂಡಿರಾಜ್, ಶೇಷಾದ್ರಿ ಕಿನಾರ, ಮಹಾಬಲ ಮೂರ್ತಿ ಕೊಡ್ಲೆಕೆರೆ, ಜರಗನಹಳ್ಳಿ ಶಿವಶಂಕರ್, ಸ. ರಘುನಾಥ್, ಎನ್ ಪ್ರಕಾಶ್, ತಿಪ್ಪೇಸ್ವಾಮಿ. ಎನ್. ಎಸ್. ಶ್ರೀಧರಮೂರ್ತಿ. ಅವಲೋಕನ ವಿಭಾಗದಲ್ಲಿ 26 ಅಧ್ಯಾಯಗಳಿದ್ದು, ಗೋಪಿ ಮತ್ತು ಗಾಂಡಲೀನ(ಎನ್. ಎಸ್. ಲಕ್ಷ್ಮೀನಾರಾಯಣಭಟ್ಟ, ಪ್ರಜಾವಾಣಿ), ಟುವಟಾರ (ಗೋಪಾಲಕೃಷ್ಣ ಅಡಿಗ, ಅಡಿಗರ ಪ್ರಬಂಧಗಳು), ಟುವಟಾರ (ಬನ್ನಂಜೆಗೋವಿಂದಾಚಾರ್ಯ, ಉದಯವಾಣಿ), ಲಿಲ್ಲಿಪುಟ್ಟಿಯ ಹಂಬಲ (ಬಿ.ಬಿ. ರಾವ್, ತರಂಗ), ಪ್ರೇಮಸುಳಿವ ಜಾಡು, ರಾಮಚಂದ್ರ ಶರ್ಮ-ಶೂದ್ರ), ಬಿ. ಆರ್. ಲಕ್ಷಣರಾವ್ ಕಾವ್ಯ ಒಂದೆರಡು ಸಂಗತಿಗಳು (ಎಚ್. ಎಸ್. ರಾಘವೇಂದ್ರರಾವ್, ಅಂಕಣ), ಆಮೋದದಿಂದ (ಸಿದ್ದಲಿಂಗ ಪಟ್ಟಣಶೆಟ್ಟಿ, ಪ್ರಜಾವಾಣಿ), ವ್ಯಂಜಕತೆಯೇ ಪ್ರಧಾನ (ವೇಣುಗೋಪಾಲ ಸೊರಬ, ಪ್ರಜಾಮತ), ಬಿ. ಆರ್. ಲಕ್ಷಣರಾವ್ (ಟಿ.ಪಿ ಅಶೋಕ, ಮಯೂರ), ಆತಂಕ ಕಳವಳವನ್ನು(ಬಂದಗದ್ದೆ ರಾಧಾಕೃಷ್ಣ, ಶೂದ್ರ-1983), ಶಾಂಗ್ರಿಲಾ(ರಾಘವೇಂದ್ರ ಪಾಟೀಲ, ಸಂವಾದ-1987), ಪ್ರಾಮಾಣಿಕತೆ , ತೀಕ್ಷ್ಣತೆ (ಜಿ. ಎಸ್. ಆಮೂರ, ಪ್ರಜಾವಾಣಿ), ತುಂಟತನಕ್ಕೆ ಅಭಿವ್ಯಕ್ತಿ (ಸುಮತೀಂದ್ರ ನಾಡಿಗ-ಪ್ರಜಾವಾಣಿ-1990), ಕೆಂಗುಲಾಬಿ(ಬಿ. ಜನಾರ್ಧನ ಶೆಟ್ಟಿ-1991), ಸವಿಯಬಹುದು (ಮಲ್ಲೇಪುರಂ ಜಿ. ವೆಂಕಟೇಶ-ಕನ್ನಡಪ್ರಭ), ಭಾಷೆ -ಛಂದಸ್ಸಿನ (ಮಲ್ಲೇಪುರಂ ಜಿ. ವೆಂಕಟೇಶ, ಕನ್ನಡಪ್ರಭ-1992), ಭಾರತಬಿಂದು ರಶ್ಮಿ(-ವಿ.ಗ.ನಾಯಕ-ಸಂಪ್ರಭಾ), ನವ್ಯದ ನಿಗೂಢತೆಯಿಂದ (ಮಲ್ಲಿಕಾ ಘಂಟಿ, ಪ್ರಜಾವಾಣಿ), ಏನೀ ಅದ್ಭುತವೇ (ಎನ್. ಶ್ರೀನಿವಾಸ ಉಡುಪ-ಮಯೂರ-2004), ಇಂಗ್ಲಿಷ್ ನಲ್ಲಿ ಕುಹೂ (ಸಿ. ಆರ್. ಸಿಂಹ ವಿಜಯಕರ್ನಾಟಕ-2004), ಯೌವನದ ವಿಹ್ವಲತೆ ( ಕೆ. ಸತ್ಯನಾರಾಯಣ-ಕನ್ನಡಪ್ರಭ-2004), ಕ್ಯಾಮೆರಾ ಕಣ್ಣು (ಸ. ರಘುನಾಥ, ಸಂಕಲನ, 2006), ಪುಸ್ತಕ ವಿಹಾರ(ಮಲ್ಲಿಗೆ, 2006), ಇಂದ್ರಿಯಗಳ ತೆಕ್ಕೆಯಲ್ಲಿ(ಚಿಂತಾಮಣಿ ಕೊಡ್ಲೆಕೆರೆ-2006) ಇವೆಲ್ಲಾವುಗಳನ್ನು ಒಳಗೊಂಡಿದೆ. ಸಂಕೀರ್ಣ ವಿಭಾಗದಲ್ಲಿ 14 ಅಧ್ಯಾಯಗಳಿದ್ದು, ಮನುಷ್ಯ ಸಂಬಂಧಗಳ (ಟಿ. ಪಿ ಅಶೋಕ), ಸುಬ್ಬಾಭಟ್ಟರ ಮಗಳೇ (ಎಂ. ಎನ್. ವ್ಯಾಸರಾವ್), ಕವಿತೆಯ ಕವಲು ಹಾದಿ(ಜಾನಕಿ) , ಇತ್ಯಾದಿ ( ಜಿ. ಎನ್. ರಂಗನಾಥರಾವ್, ಒಂದಿಷ್ಟು ಪದ್ಯ (ರವಿ ಬೆಳಗೆರೆ), ಮರೆಯಲಿ ಹ್ಯಾಂಗ (ಮಣಿಕಾಂತ), ರಾಗರತಿಗೆ (ಸಹಜಾ), ಇದು ನನ್ನ ಶೈಲಿ( ಡುಂಡಿರಾಜ್), not just pun and fun (Subramanya), leafing through-Subramanya), ಲಕ್ಷ್ಮಣರೇಖೆ (ಜಾನಕಿ), ಪ್ರೀತಿಯ ಅನನ್ಯ (ಚಿಂತಾಮಣಿ), Introduction to columbus and other poems (ಸಿ.ಎನ್. ರಾಮಚಂದ್ರನ್), ಪ್ರೀತಿಯ ಬೆಳಕಿನ ಕಥೆಗಳು (ಜಿ.ಎನ್. ರಂಗನಾಥರಾವ್) ಸಂದರ್ಶನ ವಿಭಾಗದಲ್ಲಿ ಬಿ. ಆರ್. ಎಲ್ ಅವರ ಸಂದರ್ಶನ (ಎಂ.ಆರ್. ಕಮಲ), ಮುನ್ನುಡಿ ಮತ್ತು ಹಿನ್ನುಡಿಗಳನ್ನು ಒಳಗೊಂಡಿದೆ.

About the Author

ಎಚ್. ಎಸ್. ವೆಂಕಟೇಶಮೂರ್ತಿ
(23 June 1944)

ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...

READ MORE

Related Books