ಸತ್ಯಾಗ್ರಹಿ

Author : ಸದಾನಂದ ಎನ್.ಪಾಟೀಲ

Pages 220




Year of Publication: 2023
Published by: ಗುರುಕುಲ ಇಂಗ್ಲೀಷ್ ಮೀಡಿಯಾಂ ಸ್ಕೂಲ್
Address: ಜೆವರಗಿ-585310
Phone: 7892269824

Synopsys

‘ಸತ್ಯಾಗ್ರಹಿ’ ಶ್ರೀ ಕೇದಾರಲಿಂಗಯ್ಯ ಹಿರೇಮಠ ಅವರ ಅಭಿನಂದನಾ ಗ್ರಂಥವಾಗಿದ್ದು, ಸದಾನಂದ ಎನ್. ಪಾಟೀಲ್ ಅವರ ಸಂಪಾದಕತ್ವದ ಕೃತಿಯಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿನ ವಿಚಾರಗಳು ಹೀಗಿವೆ; ಹೋರಾಟದ ಗುಣಗಳನ್ನು ರಕ್ತಗತವಾಗಿ ಪಡೆದುಕೊಂಡು ಬಂದಿರುವ ಶ್ರೀ ಕೇದಾರಲಿಂಗಯ್ಯನವರು ನಾಲ್ಕು ದಶಕಗಳಕಾಲ ಜೇವರ್ಗಿ ತಾಲೂಕಿನ ರೈತರಿಗಾಗಿ, ಬಡವರಿಗಾಗಿ ಪಟ್ಟ ಶ್ರಮ, ಇಟ್ಟ ಹೆಜ್ಜೆ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ. ಗ್ರಾಮ ಸುಧಾರಣಾ ಸಂಘದಿಂದ ಮೊದಲ್ಗೊಂಡು ತೊಗರಿ ಬೋರ್ಡ್, ಮಲ್ಲಾಬಾದ್ ಏತ ನೀರಾವರಿ, ಕೋನಾ ಹಿಪ್ಪರಗಾ ಬ್ರಿಜ್, ದೇಶದಲ್ಲಿಯೇ ಅತಿ ಹೆಚ್ಚು ಬೆಳೆ ಪರಿಹಾರ ಒದಗಿಸಿದಂತಹ ಐತಿಹಾಸಿಕ ಯೋಜನೆಗಳ ಯಶಸ್ಸಿಗೆ ಅವರು ನಡೆಸಿದ ಹೋರಾಟಗಳನ್ನು ಇಲ್ಲಿನ ಜನತೆ ಯಾವತ್ತು ಮರೆಯಲು ಸಾಧ್ಯವಿಲ್ಲ ಎನ್ನುವುದನ್ನು ಇಲ್ಲಿ ತಿಳಿಸಲಾಗಿದೆ.

About the Author

ಸದಾನಂದ ಎನ್.ಪಾಟೀಲ
(09 April 1977)

ಸದಾನಂದ ಎನ್. ಪಾಟೀಲರ ಕಾರ್ಯಕ್ಷೇತ್ರ ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಜೇವರಗಿ. ತಂದೆ ನಾನಾಗೌಡ ಪಾಟೀಲ, ತಾಯಿ ಶ್ರೀಮತಿ ಮಲ್ಲಮ್ಮ ಎನ್‌. ಪಾಟೀಲ. ಎಂ.ಎಸ್‌ಸಿ, ಎಂ.ಇಡಿ ಪದವಿಯನ್ನು ಪಡೆದುಕೊಂಡು, ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕರಾಗಿ ಸೇವೆ ಆರಂಭಿಸಿ, ಪ್ರೌಢ ಶಾಲೆಯ ಮೂಖ್ಯೋಪಾಧ್ಯಾಯರಾಗಿ, ಶಿಕ್ಷಕರ ತರಬೇತಿ ಕೇಂದ್ರದ ಪ್ರಾಚಾರ್ಯರಾಗಿ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಸುಮಾರು ಎರಡು ದಶಕಗಳ ಕಾಲ ಶೈಕ್ಷಣಿಕ ರಂಗದಲ್ಲಿ ಸೇವೆ. ಇದರೊಂದಿಗೆ ಶ್ರೀ ಬಸವ ಭೂಷಣ ಸಾಂಸ್ಕೃತಿಕ ವೇದಿಕೆಯನ್ನು ಹುಟ್ಟು ಹಾಕಿ ಕನ್ನಡ ಸಾಹಿತ್ಯದಲ್ಲಿ ಇಲ್ಲಿಯವರೆಗೆ “ಕಿರಣ” ಕವನ ಸಂಕಲನ, “ಜೇವರ್ಗಿ ತಾಲೂಕ ದರ್ಶನ,” ...

READ MORE

Related Books