ವಿಜಯಪಥ

Author : ಹನುಮಂತಪ್ಪ ಅಂಡಗಿ ಚಿಲವಾಡಗಿ



Year of Publication: 2022
Phone: 9008944290

Synopsys

`ವಿಜಯಪಥ’ ಕೃತಿಯು ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ಸಂಪಾದಿಸಿರುವ ಟಿ.ಎಂ. ವಿಜಯಕುಮಾರ ಅವರ ಅಭಿನಂದನಾ ಗ್ರಂಥವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಸುರೇಶ ಕಂಬಳಿ ಗಬ್ಬೂರ ಅವರು `ನೀವು ನಡೆದು ಹೋಗುವ ದಾರಿಯಲ್ಲಿ ನಿಮ್ಮ ಬಳಿ ಇರುವ ಒಳ್ಳೆಯ ಗುಣಗಳೆಂಬ ಹೂಗಳನ್ನು ಚೆಲ್ಲುತ್ತಾ ಹೋಗಿರಿ. ನೀವು ಇನ್ನೊಮ್ಮೆ ಅದೇ ದಾರಿಯ ಮೇಲೆ ನಡೆದು ಹೋಗಲಿಕ್ಕಿಲ್ಲ.” ಈ ಮಾತನ್ನು ಅಕ್ಷರಶಃ ಅನುಷ್ಠಾನದಲ್ಲಿ ತಂದಿರುವವರು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹನುಮಂತಪ್ಪ ಅಂಡಗಿ ಚಿಲವಾಡಗಿಯವರು. ಈ ಕೃತಿಯಲ್ಲಿ ಟಿ.ಎಂ.ವಿಜಯಕುಮಾರ ಅವರು ಬದುಕಿನ ಪಥದಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ಸಾಧನೆ ಮಾಡಿ, ಸ್ಮರಣಾರ್ಹ ಸೇವೆ ಸಲ್ಲಿಸಿದ್ದಾರೆ. ಅವರನ್ನು ಕುರಿತು ಹನುಮಂತಪ್ಪ ಅಂಡಗಿ ಚಿಲವಾಡಗಿಯವರು ಉತ್ತಮ ಅಭಿನಂದನಾ ಗ್ರಂಥವನ್ನು ಹೊರ ತಂದಿರುವುದು ಸಂತಸದ ಸಂಗತಿಯಾಗಿದೆ’ ಎಂದಿದ್ದಾರೆ.

About the Author

ಹನುಮಂತಪ್ಪ ಅಂಡಗಿ ಚಿಲವಾಡಗಿ

ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ಮೂಲತಃ ಕೊಪ್ಪಳದವರು. ಅವರು ಕೊಪ್ಪಳ ಜಿಲ್ಲೆಯ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು. ವೃತ್ತಿಯಿಂದ ಕೊಪ್ಪಳ ತಾಲೂಕಿನ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರು. ಕೃತಿಗಳು : ವಿಜಯಪಥ (ಸಂ), ಆರೋಗ್ಯದಲ್ಲಿ ಆರ್ಯುವೇದ ಸಂಪತ್ತು, ಕಂಬಾರರಿಗೆ ಜ್ಞಾನಪೀಠ ಅಭಿನಂದನೆ ...

READ MORE

Related Books