ಭಾಷಾ ಸಂಗಮ

Author : ಬಸವರಾಜ ಪೊಲೀಸ ಪಾಟೀಲ

Pages 992

₹ 450.00




Year of Publication: 2002
Published by: ಸಂಗಮೇಶ ಸವದತ್ತಿಮಠ ಅಭಿನಂದನ ಸಮಿತಿ
Address: ಗುಲ್ಬರ್ಗಾ - 585106

Synopsys

‘ಭಾಷಾ ಸಂಗಮ’ ಬಸವರಾಜ ಪೊಲೀಸ ಪಾಟೀಲ ಅವರ ಸಂಪಾದಿತ ಅಭಿನಂದನ ಗ್ರಂಥವಾಗಿದೆ. ಕನ್ನಡ ಭಾಷಾ ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಡಾ.ಸಂಗಮೇಶ ಸವದತ್ತಿಮಠ ಶ್ರೇಷ್ಠ ವಿದ್ವಾಂಸರೆಂದು ಈ ಭಾಷಾ ಸಂಗಮ ಬೃಹತ್ ಗ್ರಂಥ ಲೇಖನಗಳ ಮೂಲಕ ತಿಳಿಸುತ್ತದೆ. 

About the Author

ಬಸವರಾಜ ಪೊಲೀಸ ಪಾಟೀಲ

ಡಾ.ಬಸವರಾಜ ಪೊಲೀಸ ಪಾಟೀಲ ಅವರು ಎಂ.ಎ, ಪಿಎಚ್. ಡಿ ಪದವಿದರರಾಗಿದ್ದು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಇವರು ಜಾನಪದ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ...

READ MORE

Reviews

 ಹೊಸತು-  ಅಕ್ಟೋಬರ್‌ -2003

ಕನ್ನಡ ಭಾಷಾ ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಡಾ|| ಸಂಗಮೇಶ ಸವದತ್ತಿಮಠ ಶ್ರೇಷ್ಠ ವಿದ್ವಾಂಸರೆಂದು ಈ ಭಾಷಾ ಸಂಗಮ ಬೃಹತ್ ಗ್ರಂಥ ಲೇಖನಗಳ ಮೂಲಕ ತಿಳಿಸುತ್ತದೆ. ಅವರ ಷಷ್ಟ್ಯಬ್ಬಿ ಸಮಾರಂಭದಂದು ಅಭಿಮಾನಿಗಳು ಅವರಿಗೆ ಅರ್ಪಿಸಿದ ವಿಶೇಷ ಅಭಿನಂದನ ಗ್ರಂಥವಿದು. ನೂರಾರು ಸಾಹಿತಿಗಳು ಅವರ ವ್ಯಕ್ತಿತ್ವದ ಬಗ್ಗೆ ಮತ್ತು ಆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಇತರ ಮಹನೀಯರ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಏಳು ಅಧ್ಯಾಯಗಳಲ್ಲಿನ ವಿದ್ವತ್ತೂರ್ಣ ಬರಹಗಳು ಭಾಷಾ ವಿಜ್ಞಾನದ ವಿದ್ಯಾರ್ಥಿಗಳಿಗೆ ತುಂಬ ಅನುಕೂಲ.

Related Books