ಕೃಷ್ಣ ಅಧ್ಯಯನ

Author : ಕೆ.ಆರ್. ಕಮಲೇಶ್

Pages 474

₹ 800.00




Year of Publication: 2023
Published by: ಕೃಷ್ಣ ಕೊಲ್ಹಾರಕುಲಕರ್ಣಿ ಅಭಿನಂದನ ಸಮಿತಿ
Address: #9, ನೃಪತುಂಹ, 15ನೇ ಅಡ್ಡರಸ್ತೆ, ಉಲ್ಲಾಳ ಮುಖ್ಯರಸ್ತೆ, ಬೆಂಗಳೂರು-560057

Synopsys

`ಕೃಷ್ಣ ಅಧ್ಯಯನ’ ಡಾ.ಕೃಷ್ಣ ಕೊಲ್ಹಾರಕುಲಕರ್ಣಿಯವರ ಯಶೋಗಾಥೆಯಾಗಿದೆ. ಕೃತಿಯಲ್ಲಿನ ಕೆಲವೊಂ‌ದು ವಿಚಾರಗಳು ಹೀಗಿವೆ; ವ್ಯಕ್ತಿ ತನ್ನ ವೈಯಕ್ತಿಕ ನಂಬಿಕೆಯನ್ನು ಮನೆಯಲ್ಲಿ ಆಚರಿಸಿಕೊಳ್ಳಬೇಕು. ಸಮಾಜದ ಪ್ರಗತಿಗೆ ಕಾರಣವಾಗುವ ಸಾರ್ವತ್ರಿಕ ವಿಚಾರಗಳನ್ನು ಬಾಹ್ಯಜಗತ್ತಿನಲ್ಲಿ ವ್ಯವಹರಿಸುವಾಗ ಅಳವಡಿಸಿಕೊಳ್ಳಬೇಕು, ಮನೆಯಲ್ಲಿ ಎಲ್ಲ ಧಾರ್ಮಿಕವಿಧಿಗಳನ್ನು ಶ್ರದ್ಧೆಯಿಂದ ಆಚರಿಸಿ, ಹೊರಗೆ ಬೇರೆಯವರ ಆಚರಣೆ ಮತ್ತು ನಂಬಿಕೆಗಳನ್ನು ಗೌರವಿಸಿ ಎಂದು ಡಾ.ಕೃಷ್ಣ ಕೊಲ್ಲಾರಕುಲಕರ್ಣಿ ಅವರು ಎಂದೂ ಉಪದೇಶ ಮಾಡಿಲ್ಲ. ತಮ್ಮ ೮೨ ವರ್ಷದ ಜೀವನದಲ್ಲಿ ಅನುಸರಿಸಿ ತೋರಿಸಿದ್ದಾರೆ. ಅವರ ಕಣಜದಲ್ಲಿ ವೇದಾಂತದ ದೊಡ್ಡ ನಿಧಿಯಿದೆ. ಅದೇ ರೀತಿ ಕುರಾನ್, ಸೂಫಿ ಸಂತರ ವಿವರಗಳಿವೆ. ಒಂದೇ ವ್ಯಕ್ತಿತ್ವದಲ್ಲಿ ಹಿಂದು ಆಚಾರ್ಯ ಹಾಗೂ ಇಸ್ಲಾಂನ ಶ್ರದ್ಧಾವಂತ ಮೌಲ್ವಿಗಳಿದ್ದರೆ, ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ನಿರ್ದೇಶಕರು ಆದು ಡಾ.ಕೃಷ್ಣ ಕೊಲ್ದಾರಕುಲಕರ್ಣಿ ಅವರದು ಎನ್ನುವುದರಲ್ಲಿ ಸಂಶಯವಿಲ್ಲ. ಆದಿಕವಿ ಪಂಪನಂತೆ ಡಾ.ಕೃಷ್ಣ ಕೊಲ್ದಾರಕುಲಕರ್ಣಿ ಅವರು ತಮ್ಮ ಬದುಕಿನಲ್ಲಿ ಸಮನ್ವತೆಯನ್ನು ಸಾಧಿಸಿ ಇತರರಿಗೆ ಮಾರ್ಗದರ್ಶಕರಾಗಿದ್ದಾರೆ. ಅಂತೆಯೇ ದಶಕದ ಹಿಂದೆ 'ಕೃಷ್ಣ ಕೊಲ್ದಾರ ಕುಲಕರ್ಣಿ ಬದುಕು ಬರಹ' ಎಂಬ ವಿಷಯ ಆಯ್ದು ಡಾ.ಸುಮಿತ್ರಾ ದಶರಥ ಸಾವಂತ ಎಂಬುವವರು ಮಹಾಪ್ರಬಂಧ ರಚಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಕರ್ನಾಟಕ ಮಾತ್ರವಲ್ಲ, ಇಡೀ ಭಾರತದಲ್ಲಿ ಇಂತಹವರ ಸಂಖ್ಯೆ ಮತ್ತು ಸಂತತಿ ಸದಾ ವೃದ್ಧಿಸುತ್ತಿರಬೇಕು. ಈ 'ಕೃಷ್ಣ ಅಧ್ಯಯನ' ನದಿಯಲ್ಲಿ ಜೀವನ, ಕವನ, ಸಾರ್ವಜನಿಕ, ಇತಿಹಾಸ, ದಾಸ/ ಮಾಧ್ವ ಮತ್ತು ಸಂಕೀರ್ಣ ಎನ್ನುವ ಆರು ಉಪನದಿಗಳು ಸಂಗಮಿಸಿವೆ. ಈ ಆರು ಉಪನದಿಗಳಲ್ಲಿ ಹಲವಾರು ತೊರೆ ಹಳ್ಳಗಳ ಲೇಖನಗಳಿವೆ. ಅವುಗಳೆಲ್ಲ ಈ ಕೃಷ್ಣ ಅಧ್ಯಯನ ಆಣೆಕಟ್ಟಿನಲ್ಲಿ ಜೀವಾಮೃತವಾಗಿವೆ.

About the Author

ಕೆ.ಆರ್. ಕಮಲೇಶ್

ಕೆ.ಆರ್. ಕಮಲೇಶ್ ಅವರು ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿವರು. ಸಂಶೋಧನಾ ವಿಚಾರಗಳಲ್ಲಿ ಆಸಕ್ತಿ. ಕೃತಿಗಳು : ಚಿಕ್ಕನಾಯಕನಹಳ್ಳಿ ತಾಲ್ಲೂಕು ...

READ MORE

Related Books