ಸಂಗೀತರತ್ನ

Author : ಸ.ಸ. ಮಾಳವಾಡ

Pages 280

₹ 23.00




Year of Publication: 1976
Published by: ಕನ್ನಡ ಅಧ್ಯಯನಪೀಠ
Address: ಪಠ್ಯಪುಸ್ತಕ ನಿರ್ದೇಶನಾಲಯ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

Synopsys

ಸ.ಸ. ಮಾಳವಡ ಅವರು ಸಂಪಾದಿಸಿರು ಕೃತಿ ಸಂಗೀತರತ್ನ. ಈ ಕೃತಿಯು ಗಾಯಕ ಡಾ. ಮಲ್ಲಿಕಾರ್ಜುನ ಮನ್ಸೂರ ಅವರ ಬಗೆಗಿನ ಅನೇಕ ಗಣ್ಯರು ಬರೆದಿರುವ ಲೇಖನಗಳಾಗಿವೆ. ಎಂ. ಎಸ್. ಸುಂಕಾಪುರ ಅವರು ಈ ಕೃಇಗೆ ಮುನ್ನುಡಿಯನ್ನು ಬರೆದಿದ್ದಾರೆ. ಅವರು ಬರೆದಿರುವಂತೆ, ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠ, ಕನ್ನಡಿಗರ ಆಶೋತ್ತರಗಳನ್ನು ನೆರವೇರಿಸುವ ಕಾರ್ಯದಲ್ಲಿ ನಿರತವಾಗಿದೆ. ಶೋಧನೆ, ಸಂಶೋಧನೆ ಹಾಗೂ ಪ್ರಕಟನೆ ಈ ಸಂಸ್ಥೆಯ ಮೂರು ಕಣ್ಣುಗಳು, ಈ ಎಲ್ಲ ವಿಭಾಗಗಳಲ್ಲಿ ವಿಶೇಷ ಕಾರ್ಯಗಳನ್ನು ಸಾಧಿಸಿದ ಕೀರ್ತಿ ಈ ಅಧ್ಯಯನ ಪೀಠಕ್ಕಿದೆ. ವಚನ ವಾಹ್ಮಯ, ಜೈನ ಹಾಗೂ ವೈಷ್ಣವ ಸಾಹಿತ್ಯ, ಜನಪದ ಹಾಗೂ ಭಾಷಾ ಶಾಸ್ತ್ರಗಳಿಗೆ ಸಂಬಂಧಿಸಿದ ಅಧ್ಯಯನ ಹಾಗೂ ಅಧ್ಯಾಪನದ ಜೊತೆಗೆ ಕನ್ನಡ ಮಾಧ್ಯಮವನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ಅಳವಡಿಸಲು ನೆರವಾಗುವ ಗ್ರಂಥ ಗಳನ್ನು ಬರೆಯಿಸಿ ಪ್ರಕಟಿಸುವ ಕಾರ್ಯಕ್ಕೆ ಹೊಸಲಾಗಿರುವ ಪಠ್ಯಪುಸ್ತಕ ನಿರ್ದೇಶನಾಲಯ ಈಗಾಗಲೇ ನೂರಾರು ಕೃತಿಗಳನ್ನು ನೀಡಿ ವಿಕ್ರಮ ಸಾಧಿಸಿದೆ. ವಿವಿಧ ಕಾಲೇಜುಗಳ ಹಾಗೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಇತರೆ ತಜ್ಞರು ಈ ಕೃತಿಗಳನ್ನು ರಚಿಸಿದ್ದಾರೆ. ಈ ವಿಭಾಗವು ಮುಖ್ಯವಾಗಿ ಪಠ್ಯ ಪುಸ್ತಕ, ಪೂರಕ ಗ್ರಂಥ ಹಾಗೂ ಜನಪ್ರಿಯ ಪುಸ್ತಕಗಳನ್ನು ಪ್ರಕಟಿಸುವ ಕಾರ್ಯವನ್ನು ಹಮ್ಮಿಕೊಂಡಿದೆ. ಈ ಎಲ್ಲ ಉಪಕ್ರಮಗಳಿಂದ ಕನ್ನಡ ರಾಜ್ಯ ಆಧುನಿಕ ಜ್ಞಾನವಾಹಿನಿಯಾಗುವುದರಲ್ಲಿ ಸಂಶಯವಿಲ್ಲ. ಸೌಢ ವ್ಯಾಸಂಗ, ಹಾಗೂ ಸಂಶೋಧನೆಯ ಪರಿಣಾಮಗಳನ್ನು ಕನ್ನಡ ಮಕ್ಕಳಿಗೆ ತಾಯ್ನುಡಿಯಲ್ಲಿ ನೀಡಲು, ಆಧುನಿಕ ಜ್ಞಾನವನ್ನು ಜನಸಾಮಾನ್ಯರ ಹರಿಸಲು ನೆರವಾಗುತ್ತಿದೆ. ಕನ್ನಡ ಭಾಷೆಯೇ ಶಿಕ್ಷಣ ಮಾಧ್ಯಮವಾಗಿ, ಕನ್ನಡವೇ ಆಡಳಿತ ಭಾಷೆಯಾಗಿ, ನ್ಯಾಯಾಲಯಗಳ ಭಾಷೆಯಾಗಿ ಮಾನ್ಯವಾಗಿರುವ ಈ ಸನ್ನಿವೇಶದಲ್ಲಿ ಪಠ್ಯ ಪುಸ್ತಕ ನಿರ್ದೇಶನಾಲಯದ ಈ ಕಾರ್ಯ ಗಮನಾರ್ಹವಾಗಿದೆ. ಈ ಕಾರ್ಯ ಇನ್ನೂ ಭರದಿಂದ ಸಾಗಲೆಂದು ಆಶಿಸುತ್ತೇವೆ ಎಂದಿದ್ದಾರೆ.

ಕೃತಿಯ ಪರಿವಿಡಿಯಲ್ಲಿ ಕವನ ಕುಸುಮಾಂಜಲಿ, ಜೀವನ ಸಂಗೀತ ಸಾಧನೆ, ಸಂದರ್ಶನ ಹಾಗೂ ಸಂಗೀತ ನಾಲ್ಕು ವಿಭಾಗಗಳಿವೆ. ಕವನ ಕುಸುಮಾಂಜಲಿ ವಿಭಾಗದಲ್ಲಿ ಹರಿಸು ಗಾನರಸ, ಮನಸೂರ್ ಮಲ್ಲಿಕಾರ್ಜೂನರ ಹಾಡು ಕೇಳಿ, ಸ್ವರಯೋಗಿ, ಸಂಗೀತ ಪರಮಶ್ರೀ, ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ, ಶಿವ ಕಣ್ಣು ತೆರೆದ, ಮನಸೂರರ ನಾ ಕೇಳಿದಂತೆ, ಮಧುರಸದ ಸವಿಗಾನ, ಅಪರಂಜಿ, ಮನ್ಸೂರರ ಕಲೆಗೆ ಕವನ ಸುಮನ ಎಂಬ ಶೀರ್ಷಿಕೆಗಳಿವೆ. ಜೀವನ ಸಂಗೀತ ಸಾಧನೆ ವಿಭಾಗದಲ್ಲಿ ಮನ್ಸೂರರ ಜೀವನ ಮತ್ತು ಸಂಗೀತ ಸಾಧನೆ,, ಪದ್ಮಶ್ರೀ ಪಂ.ಮಲ್ಲಿಕಾರ್ಜುನ ಮನ್ಸೂರ್, ಕನ್ನಡದ ರಾಯಭಾರಿ ಸಂಗೀತರತ್ನ ಮಲ್ಲಿಕಾರ್ಜುನ ಮನಸೂರರು, ಶ್ರೀ ಮನ್ಸೂರರ ಸಂಗೀತ ಸಾಧನೆ,ಸಂಗೀತರತ್ನ ಮಲ್ಲಿಕಾರ್ಜುನ ಮನ್ಸೂರರು, ಪಂಡಿತ ಮಲ್ಲಿಕಾರ್ಜುನ ಮನ್ಸೂರ್, ತಾನಶೂರ ಅರ್ಜುನ, ಸಂಗೀತದಲ್ಲಿ ವಾಸ್ತವ್ಯ ಮಾಡಿದ ಓರ್ವ ವ್ಯಕ್ತಿ ಎಂಬ ಶೀರ್ಷಿಕೆಗಳಿವೆ. ಸಂದರ್ಶನ ವಿಭಾಗದಲ್ಲಿ ಮಲ್ಲಿಕಾರ್ಜುನ ಮನ್ಸೂರರೊಂದಿಗೆ ಸಂದರ್ಶನ(೧), ಮಲ್ಲಿಕಾರ್ಜುನ ಮನ್ಸೂರ ಅವರೊಡನೆ ಸಂದರ್ಶನ(೨), ಮನ್ಸೂರರು ನಾನು ಕಂಡಂತೆ ಎಂಬ ಶೀರ್ಷಿಕೆಗಳಿವೆ. ಸಂಗೀತ ಲೋಕ ಎಂಬ ವಿಭಾಗದಲ್ಲಿ ಗಾನ, ಭರತೀಯ ಸಂಗೀತದ ಬೆಳವಣಿಗೆ, ಭಾರತೀಯ ಸಂಗೀತದಲ್ಲಿ ದಕ್ಷಿಣೋತ್ತರ ಮಾರ್ಗಗಳು, ಕರ್ನಾಟಕ ಸಂಗೀತ ಶಾಸ್ತ್ರ ಮತ್ತು ಪರಂಪರೆ, ಬತ್ತೀಸ ರಾಗಗಳು, ಸಂಗೀತ ವಾದ್ಯಗಳು, ಸಂಗೀತದ ಬಗ್ಗೆ ಕೆಲವು ವಿಚಾರಗಳು ಎಂಬ ಅನೇಕ ಶೀರ್ಷಿಕೆಗಳಿವೆ.

About the Author

ಸ.ಸ. ಮಾಳವಾಡ
(14 November 1910 - 30 August 1987)

ಸಾಹಿತಿ ಸ.ಸ. ಮಾಳವಾಡರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಮೆಣಸಗಿಯಲ್ಲಿ. ತಂದೆ ಸಂಗನ ಬಸಪ್ಪ, ತಾಯಿ- ಕಾಳಮ್ಮ. ಪ್ರಾರಂಭಿಕ ಶಿಕ್ಷಣವನ್ನು ಗೋವನ ಕೊಪ್ಪ, ಗುಳೇದಗುಡ್ಡ, ಬಾಗಲಕೋಟೆ, ವಿಜಾಪುರಗಳಲ್ಲಿ ಪಡೆದರು. ಧಾರವಾಡದಲ್ಲಿ  ಎಂ.ಎ. ಪದವಿ ಪಡೆದರು. ಕೆಲಕಾಲ ಮಾಧ್ಯಮಿಕ ಕಾಲೇಜು ಶಿಕ್ಷಕರಾಗಿದ್ದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಚಾರ‍್ಯರಾಗಿ, ನಿವೃತ್ತರಾದರು. ಯು.ಜಿ.ಸಿ. ಪ್ರಾಧ್ಯಾಪಕರಾಗಿ ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯಪುಸ್ತಕ ನಿರ್ದೇಶನಾಲಯದ ಸಂಸ್ಥಾಪಕ ಗೌರವ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಪರರಾಜ್ಯದ ಪಠ್ಯಪುಸ್ತಕ ರಚನಾ ಸಮಿತಿಗಳಲ್ಲಿ ಸೇವೆ ಸಲ್ಲಿಸಿದರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಆಕಾಶವಾಣಿ ನಿಲಯಗಳ ಸ್ಥಾಪನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ‘ಕರ್ನಾಟಕ ಸಾಹಿತ್ಯ-ಸಂಸ್ಕೃತಿ ದರ್ಶನ’ ...

READ MORE

Related Books