ಸ್ವಾತಂತ್ಯ್ರ ಚೌಕ

Author : ಜಿ. ಇಂದ್ರಕುಮಾರ್

Pages 240

₹ 200.00




Year of Publication: 2012
Published by: ಭಾರತೀಯ ಜನಕಲಾ ಸಮಿತಿ
Address: ತುಮಕೂರು

Synopsys

‘ಸ್ವಾತಂತ್ಯ್ರ ಚೌಕ’ ಜಿ. ಇಂದ್ರಕುಮಾರ್ ಅವರು ರಚಿಸಿರುವ ಸ್ವಾತಂತ್ಯ್ರ ಹೋರಾಟಗಾರ ಟಿ.ಆರ್. ರೇವಣ್ಣನವರ ಅಭಿನಂದನಾ ಗ್ರಂಥವಾಗಿದೆ. ಈ ಕೃತಿಯಲ್ಲಿ ಟಿ. ಆರ್. ರೇವಣ್ಣನವರ ವ್ಯಕ್ತಿತ್ವ- ಬದುಕನ್ನು ಕುರಿತಂತೆ ವಿಶದೀಕರಿಸುವುದಕ್ಕಿಂತ ಅವರ ಕಾಲದ ಸಾಂದರ್ಭಿಕ ಘಟಿತಗಳಲ್ಲಿ, ಸಮಕಾಲೀನ ಚಳವಳಿಗಳಲ್ಲಿ ಅವರು ಭಾಗವಹಿಸಿದ ಅಥವಾ ಸ್ಪಂದಿಸಿದ ರೀತಿ, ಅವರು ತಾಳಿರುವ ನಿಲುವು, ತಾತ್ವಿಕ ಬದ್ಧತೆಗಳ ಉಲ್ಲೇಖವಿದೆ ಹಾಗೂ ತನ್ಮೂಲಕ ಚಳವಳಿ ಹೋರಾಟಗಳ ಪ್ರತಿಫಲನಗಳ ವ್ಯಾಖ್ಯಾನ ಮುಂತಾದವುಗಳನ್ನು ನೀಡಲಾಗಿದೆ. ಅಂದಿನ ಕಾಲಘಟ್ಟದಿಂದ ಇಂದಿನವರೆಗಿನ ಹೋರಾಟ-ಚಳವಳಿಗಳು ಸಾಗಿಬಂದ ಮಾರ್ಗದ ಹೆಜ್ಜೆಗುರುತುಗಳನ್ನು ಗುರುತಿಸಲಾಗಿದೆ. ಸಾರ್ವತ್ರಿಕ ಚಳವಳಿಯು ಇತಿಹಾಸವೊಂದನ್ನು ಹೇಗೆ ಸೃಷ್ಟಿಸಬಲ್ಲದು ಎಂಬುದಕ್ಕೆ 12ನೆಯ ಶತಮಾನ ಎಲ್ಲ ಕಾಲಕ್ಕೂ ಸಲ್ಲುವ ಉದಾಹರಣೆಯಾದಂತೆ ಸ್ವಾತಂತ್ರ್ಯ ಚಳವಳಿಯೂ ಒಂದು ಉದಾಹರಣೆ. ಅಂತೆಯೇ ಅದು ಮಾರ್ಗದರ್ಶಕವೂ ಅನುಕರಣೀಯವೂ ಆಗಿರುವುದನ್ನು ಮರೆಯುವಂತಿಲ್ಲ. 'ಸ್ವಾತಂತ್ರ್ಯ ಚೌಕ' ಈ ಕೃತಿಯ ಹೆಸರಿನೊಂದಿಗೇ ತುಮಕೂರಿನಲ್ಲಿ ನಿಜವಾಗಿಯೂ ಇರುವ 'ಸ್ವಾತಂತ್ರ್ಯ ಚೌಕ (ಚರ್ಚ್ ಸ್ಟೇರ್) ಒಂದು ಐತಿಹಾಸಿಕ ಸ್ಮಾರಕ. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಮಾಡಲಾದ ಗೋಲಿಬಾರ್‌ನಲ್ಲಿ ಮೃತಪಟ್ಟ ಮೂವರು ದುರಂತ ನಾಯಕರ ಸ್ಮರಣಾರ್ಥ ಇದನ್ನು ನಿರ್ಮಿಸಲಾಗಿದೆ ಎನ್ನುತ್ತಾರೆ ಲೇಖಕ ಜಿ. ಇಂದ್ರಕುಮಾರ್.

About the Author

ಜಿ. ಇಂದ್ರಕುಮಾರ್

ಜಿ. ಇಂದ್ರಕುಮಾರ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ಕೃಷಿಯನ್ನು ಮಾಡಿದ್ದು, ಜಲ ದೀವಿಗೆ, ಸ್ವಾತಂತ್ಯ್ರ ಚೌಕ ಅವರ ಪ್ರಮುಖ ಕೃತಿಗಳಾಗಿದೆ. ಅವರ ‘ಸ್ವಾತಂತ್ಯ್ರ ಚೌಕ’ ಕೃತಿಯು ಸ್ವಾತಂತ್ಯ್ರ ಹೋರಾಟಗಾರ ಟಿ.ಆರ್. ರೇವಣ್ಣನವರ ಅಭಿನಂದನಾ ಗ್ರಂಥವಾಗಿದೆ. ...

READ MORE

Related Books