ಒಡನಾಡಿ

Author : ನಾಗಭೂಷಣ ಬಗ್ಗನಡು

Pages 240

₹ 200.00




Year of Publication: 2020
Published by: ಭೂಮಿ ಬಳಗ ಪ್ರಕಾಶನ
Address: ಶ್ರೀ ಎಚ್. ಕೆಂಚಮಾರಯ್ಯ ಅಭಿನಂದನ ಸಮಿತಿ ತುಮಕೂರು.

Synopsys

‘ಒಡನಾಡಿ’ ಈ ಪುಸ್ತಕವು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಮುಸಕಲೋಟಿ ಗ್ರಾಮದ ಎಚ್. ಕೆಂಚಮಾರಯ್ಯ ಅವರ ವ್ಯಕ್ತಿತ್ವ, ಬದುಕು ಕುರಿತ ಅಭಿನಂದನಾ ಗ್ರಂಥ. ಡಾ. ಓ. ನಾಗರಾಜು ಕೃತಿಯ ಪ್ರಧಾನ ಸಂಪಾದಕರು ಹಾಗೂ ಡಾ. ನಾಗಭೂಷಣ ಬಗ್ಗನಡು ಸಂಪಾದಕರು. 

ಕೆಂಚ ಮಾರಯ್ಯನವರು ಉತ್ತಮ ಶಿಕ್ಷಕರು, ಸಂಘಟಕರು, ಸೇವಾಕಾರ್ಯಕರ್ತರು,  ರೈತ ಹಾಗೂ ಮಹಿಳಾ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಈ ಪುಸ್ತಕದ ‘ನುಡಿ ತೋರಣ’ ಎಂಬ ಮೊದಲ ಭಾಗದಲ್ಲಿ ಕೆಂಚಮಾರಯ್ಯನವರ ಜನನ, ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ, ದಲಿತ ಚಳವಳಿ, ಸಾಮಾಜಿಕ ಸೇವೆಗಳ ಕುರಿತ ಲೇಖನಗಳಿವೆ. ಎರಡನೆಯ ಭಾಗದಲ್ಲಿ (ಕುಲ ಸಂಕಥನಗಳು) ಎಂಬ ಸ್ವಾತಂತ್ಯ್ರ ಹೋರಾಟದಲ್ಲಿ ದಲಿತರ ಕಾಣಿಕೆ, ಮತಂಗ ಮುನಿಯು ಕಾಲ ದೇಶಗಳ ನಿರ್ದಿಷ್ಟ ವ್ಯಕ್ತಿ, ತುಮಕೂರು ಜಿಲ್ಲೆಯ ದಲಿತರು, ಉದ್ಯಮ ಮತ್ತು ದಲಿತರು, ಮೀಸಲಾತಿ ಹಾಗೂ ಒಳಮೀಸಲಾತಿ, ದಲಿತ ಮಹಿಳೆಯರ ಸಾಂಸ್ಕೃತಿಕ ಆಯಾಮಗಳಿರುವ ಬರಹಗಳನ್ನು ಈ ಕೃತಿ ಒಳಗೊಂಡಿದೆ.

About the Author

ನಾಗಭೂಷಣ ಬಗ್ಗನಡು
(01 June 1976)

ಸಂಶೋಧಕ, ಲೇಖಕ ನಾಗಭೂಷಣ ಬಗ್ಗನಡು ಅವರು ಮೂಲತಃ ತುಮಕೂರಿನ ದೊಡ್ಡೇನಹಳ್ಳಿ ಗ್ರಾಮದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರು. ‘ಬದಲಾಗುತ್ತಿರುವ ಆಧುನಿಕ ಪರಿಸರದಲ್ಲಿ ಜಾನಪದ’ ಪ್ರಬಂಧ ಮಂಡಿಸಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವೀಧರರು. ಪ್ರಸ್ತುತ ತುಮಕೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.   ಬಂಡಾಯ ಚಳವಳಿ, ತಳ ಸಮುದಾಯಗಳ ಹಕ್ಕುಗಳ ಹೋರಾಟ, ಜನಪರ ಚಳವಳಿಗಳಲ್ಲಿ ಸಕ್ರಿಯರು. ಇವರ ಮೊದಲ ಕೃತಿ ‘ಆಧುನಿಕ ಜಾನಪದ’. ಕಡಕೋಳ ಮಡಿವಾಳಪ್ಪ, ಸುಡುಗಾಡು ಸಿದ್ಧರು, ಕಾಲುದಾರಿ, ಬೆಂಕಿ ಬೆಳಕು, ಲಂಕೇಶ್ ಒಂದು ನೆನಪು ಹಾಗೂ ಸಂಶೋಧನಾ ಕೃತಿಗಳು: ವೃತ್ತಿ ರಂಗಭೂಮಿ ನಾಟಕಗಳಲ್ಲಿ ಅಸ್ಪೃಷ್ಯತೆ ಮತ್ತು ದಲಿತತ್ವದ ನೆಲೆಗಳು, ದಲಿತ ಪುರಾಣಗಳು.  ...

READ MORE

Related Books