'ಹಣತೆʼ ಎಂಬುದು ಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರಿಗೆ ಸಲ್ಲಿಸಿದ ಅಭಿನಂದನಾ ಗ್ರಂಥ. ಅವರು ಕನ್ನಡದ ಹಿರಿಯ ಕವಿಗಳೂ, ಕಾವ್ಯ ಮೀಮಾಂಸಕರೂ, ಪ್ರಾಧ್ಯಾಪಕರು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಇಂದಿನ ಕನ್ನಡ ಸಾಂಸ್ಕೃತಿಕ ಲೋಕದ ಎಲ್ಲ ಸೂಕ್ಷ್ಮ ಹಾಗೂ ಸಮತೋಲನಗಳ ಪ್ರಾತಿನಿಧಿಕ ಶಕ್ತಿಯೂ ಹೌದು. ಅವರಿಗೆ 75 ವರ್ಷಗಳ ಸಂದ ಸಂದರ್ಭದ ಆಚರಣೆಯ ಪ್ರತೀಕವಾಗಿ ಈ ಹಣತೆ. ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಡಾ. ಜಿ.ಎಸ್.ಎಸ್. ಅವರು ನಿರ್ವಹಿಸುತ್ತಾ ಬಂದಿರುವ ಪಾತ್ರದ ಪ್ರತೀಕವೂ ಆಗಿದೆ ಈ ಕೃತಿ.
©2023 Book Brahma Private Limited.