ಅಬು ಬೆಟ್ಟದಿಂದ ಆಂಬರ್ ಕೋಟೆಯವರೆಗೆ

Author : ಕೆ.ಎನ್. ಭಗವಾನ್

Pages 176

₹ 150.00




Year of Publication: 2020
Published by: ನ್ಯೂ ವೇವ್ ಬುಕ್ಸ್
Address: ನಂ. 90/3, ಒಂದನೇ ಮಹಡಿ. ಈ.ಎ.ಟಿ.ಸ್ಟ್ರೀಟ್, ಬಸವನಗುಡಿ, ಬೆಂಗಳೂರು- 560004

Synopsys

‘ಅಬು ಬೆಟ್ಟದಿಂದ ಆಂಬರ್ ಕೋಟೆಯವರೆಗೆ’ ಲೇಖಕ ಕೆ.ಎನ್. ಭಗವಾನ್ ಅವರ ಪ್ರವಾಸ ಕಥನ. ರಾಜಸ್ಥಾನದ ಕೆಲವು ಮುಖ್ಯತಾಣಗಳನ್ನು ನೋಡಿ ಬಂದ ಅನುಭವಗಳನ್ನು ದಾಖಲಿಸಿದ್ದಾರೆ. ಬೆಂಗಳೂರಿನಿಂದ ಅಹಮದಾಬಾದಿಗೆ, ಮಾತೃಗಯಾಕ್ಕೆ ಅನಿರೀಕ್ಷಿತ ಪ್ರಯಾಣ, ಅಂಬಾಜಿ ದೇವಾಲಯ, ವೈವಿಧ್ಯತೆಗಳ ಮೌಂಟ್ ಅಬು, ಸರೋವರಗಳ ನಗರ-ಉದಯಪುರ, ಏಕಲಿಂಗೇಶ್ವರ ಮತ್ತು ನಾಥದ್ವಾರ, ಸೂರ್ಯನಗರ-ಜೋಧಪುರ, ಸ್ವರ್ಣನಗರ:ಜೈಸಲ್ಮೇರು, ಅಜೇಯ ಮೇರುವಿನಿಂದ ಅಜ್ಮೇರ್, ಗುಲಾಬಿ ನಗರ ಜಯಪುರ, ಆಂಬರ್ ಕೋಟೆ ಮತ್ತು ಅರಮನೆ, ಅನುಬಂಧ-1: ಮತ್ತಷ್ಟು ಪ್ರವಾಸಿ ತಾಣಗಳು, ಅನುಬಂಧ-2: ರಾಜಸ್ಥಾನ: ಪ್ರಾಚೀನತೆ ಮತ್ತು ಇತಿಹಾಸ ಎಂಬ ಕಥನಗಳು ಸಂಕಲನಗೊಂಡಿವೆ.

About the Author

ಕೆ.ಎನ್. ಭಗವಾನ್
(09 June 1942)

ಲೇಖಕ ಕೆ.ಎನ್. ಭಗವಾನ್ ಅವರು (ಜನನ: 1942, ಜೂನ್ 9 ) ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕ್ಯಾಶಾವಾರ ಗ್ರಾಮದವರು. ಹುಟ್ಟೂರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ, ಅಕ್ಕರಾಂಪುರದಲ್ಲಿ ಮಾಧ್ಯಮಿಕ ಶಿಕ್ಷಣ ಮತ್ತು ಮಧುಗಿರಿಯಲ್ಲಿ ಪ್ರೌಢಶಾಲಾ ಶಿಕ್ಷಣ, ನಂತರ, ತುಮಕೂರಿನ ಪಾಲಿಟೆಕ್ನಿಕಲ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಪದವಿ ಪಡೆದರು. ದೆಹಲಿಯ ಏರೋನಾಟಿಕ್ ಸೊಸೈಟಿ ಆಫ್ ಇಂಡಿಯಾದಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ ಹಾಗೂ  ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವಿ ಪಡೆದರು.  ಮೈಸೂರು ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಮೇಲ್ವಿಚಾರಕರಾಗಿ ಉದ್ಯೋಗಕ್ಕೆ ಸೇರಿದರು. ಎಚ್. ಎ. ಎಲ್ ಸಂಸ್ಥೆಯಲ್ಲಿ ಅಧಿಕಾರಿಗಳಾಗಿ 37 ವರ್ಷ ದೀರ್ಘಕಾಲ ...

READ MORE

Related Books