ಕಿವಿ-ಕಾಂಗರೂಗಳ ನಾಡಿನಲ್ಲಿ

Author : ಕೆ. ಮುಕುಂದನ್

Pages 160

₹ 150.00




Year of Publication: 2019
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ ಬಸವನಗುಡಿ, ಬೆಂಗಳೂರು - 560 004
Phone: 080 - 2661 7100 / 26617755

Synopsys

‘ಕಿವಿ ಕಾಂಗರೂಗಳ ನಾಡಿನಲ್ಲಿ’ ಕೆ. ಮುಕುಂದನ್‌ ಅವರ ಪ್ರವಾಸ ಕಥನ. ಕೆ ಮುಕುಂದನ್ ಅವರು ಕನ್ನಡ ಅಧ್ಯಾಪಕರಾಗಿ ಹಾಗೂ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದವರು. ಇವರಿಗೆ ಪ್ರವಾಸ ಅತ್ಯಂತ ಪ್ರಿಯವಾದ ವಿಷಯ. ದೇಶದ ವಿವಿಧ ರಾಜ್ಯಗಳಲ್ಲದೆ ಅಮೆರಿಕಾ, ಯೂರೋಪ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ನೇಪಾಳಗಳಲ್ಲೂ ಸಂಚರಿಸಿ ಬಂದಿದ್ದಾರೆ.

ಅಮೆರಿಕಾ, ಯೂರೋಪ್ ಪ್ರವಾಸಗಳ ಬಗ್ಗೆ ಈಗಾಗಲೇ ಪುಸ್ತಕ ಹೊರತಂದಿರುವ ಇವರು ಈ ಕೃತಿಯಲ್ಲಿ ತಮ್ಮ ಆಸ್ಟ್ರೇಲಿಯಾ ನ್ಯೂಜಿಲೆಂಡ್ ಪ್ರವಾಸದ ಅನುಭವಗಳನ್ನು ಸ್ವಾರಸ್ಯವಾಗಿ ನಿರೂಪಿಸಿದ್ದಾರೆ. ತಿಳಿಹಾಸ್ಯ ಬೆರೆಸಿ ಹೇಳುವ ಇವರ ಕಥನ ಶೈಲಿ ಓದುಗರ ಮನಸೆಳೆಯುತ್ತದೆ.

About the Author

ಕೆ. ಮುಕುಂದನ್
(31 August 1951)

ಲೇಖಕ ಕೆ. ಮುಕುಂದನ್ ಅವರು ಮೂಲತಃ ಮೈಸೂರಿನವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ತಂದೆ ಕೃಷ್ಣಸ್ವಾಮಿ ಅಯ್ಯಂಗಾರ್ ತಾಯಿ ಅಚ್ಚಮ್ಮ. ಪ್ರಾಥಮಿಕ ಶಿಕ್ಷಣವನ್ನು ಹಾಸನ ಜಿಲ್ಲೆಯ ಪೊನ್ನಾತ್ ಪುರದಲ್ಲಿ, ಪ್ರೌಢಶಿಕ್ಷಣವನ್ನು ಮೈಸೂರಿನಲ್ಲಿ ಹಾಗೂ ಉನ್ನತ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರೈಸಿದ್ದಾರೆ. ಕನ್ನಡ ಪ್ರಾಧ್ಯಪಕರಾಗಿ ಹಾಗೂ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. ಲಲಿತಾ ಕಲಾ ಅಕಾಡೆಮಿಯಲ್ಲಿ ರಿಜಿಸ್ಟ್ರಾರ್, ಕನ್ನಡ ಅಭಿವೃದ್ದಿ ಪ್ರಾಧಿಕಾರದಲ್ಲಿ ಹಾಗೂ ಪುಸ್ತಕ ಪ್ರಾಧಿಕಾರದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.  ಕೃತಿಗಳು: ಯುರೋಪ್ ಪ್ರವಾಸ, ಕಿವಿ-ಕಾಂಗರೂಗಳ ನಾಡಿನಲ್ಲಿ, ಅಮೆರಿಕ ಅಮೆರಿಕ ಅಮೆರಿಕ ...

READ MORE

Related Books