ಅರಮನೆಗಳ ರಾಜ್ಯದಲ್ಲಿ

Author : ಎಸ್.ಪಿ. ಪದ್ಮಪ್ರಸಾದ್‌

Pages 240

₹ 100.00




Year of Publication: 2003
Published by: ಸುಮುಖ ಪ್ರಕಾಶನ
Address: ನಂ 3, ಹೋಟೆಲ್‌ ಶಾಲಿನಿ ಹಿಂಭಾಗ, ಕಾಮಾಕ್ಷಿಪಾಳ್ಯ, ಬೆಂಗಳೂರು - 560079
Phone: 9844278792

Synopsys

ರಾಜಸ್ಥಾನದ ಪಶ್ಚಿಮಕ್ಕಿರುವ ಜೈಸಲ್ಮೇರ್ ನಿಂದ ಅದರ ರಾಜಧಾನಿಯಾದ ಜೈಪುರದವರೆಗಿನ ಮುಖ್ಯ ತಾಣಗಳ ವಿವರಗಳನ್ನು ‘ಅರಮನೆಗಳ ರಾಜ್ಯದಲ್ಲಿ’ಕೃತಿಯಲ್ಲಿ ಚಿತ್ರಿಸಿದ್ದಾರೆ ಲೇಖಕರು. ಕೃತಿಗೆ ಬೆನ್ನುಡಿ ಬರೆದಿರುವ ನಾರಾಯಣ ಮಾಳ್ಕೋಡ್‌ ಅವರು “ಭಾರತದ ವರ್ಣರಂಜಿತ ರಾಜ್ಯವಾದ ರಾಜಸ್ಥಾನದ ಕುರಿತ ಪ್ರವಾಸ ಕಥನವಿದು. ಐತಿಹಾಸಿಕ ಸ್ಥಳಗಳಾದ ಜೈಸಲ್ಮೇರ್‌, ಜೋಧ್‌ಪುರ್‌,ಉದಯಪುರ, ಜೈಪುರ, ಚಿತ್ತೋಢಗಢ, ಅಜಮೇರ್‌ನಂಥ ವಿಶ್ವವಿಖ್ಯಾತ ಸ್ಥಳಗಳಲ್ಲಿ ತಾವು ಕಂಡ ಅದ್ಭುತ ರಮ್ಯ ಐತಿಹಾಸಿಕ ತಾಣಗಳೆಲ್ಲವನ್ನೂ ಲೇಖಕರು ತಲಸ್ಪರ್ಶಿಯಾಗಿ ಇಲ್ಲಿ ವಿವರಿಸಿದ್ದಾರೆ. ಹೀಗೆ ವಿವರಣೆ ನೀಡುತ್ತಲೇ ಆಯಾ ಸಂಸ್ಥಾನಗಳ ಚರಿತ್ರೆಯ ಸಿಂಹಾವಲೋಕನವೂ ನಡೆದಿದೆ. ರಾಜಸ್ಥಾನವನ್ನು ಕುರಿತಂತೆ ಕನ್ನಡದಲ್ಲಿ ಪ್ರಕಟವಾಗಿರುವ ಮೊದಲ ವಿಸ್ತೃತ ಪ್ರವಾಸ ಕಥನವಿದು.ಇದನ್ನು ಓದುತ್ತಿದ್ದಂತೆ ಆ ರಾಜ್ಯದಲ್ಲಿ ಸಂಚರಿಸಿದ ಅನುಭವವಾಗುತ್ತದೆ” ಎಂದು ಕೃತಿ ಕುರಿತು ವಿವರಿಸಿದ್ದಾರೆ.

About the Author

ಎಸ್.ಪಿ. ಪದ್ಮಪ್ರಸಾದ್‌

ಎಸ್.ಪಿ. ಪದ್ಮಪ್ರಸಾದ್‌ ಜಾನಪದ, ಕಾವ್ಯ, ನಾಟಕ, ವಿಮರ್ಶೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಪದ್ಮ ಪ್ರಸಾದವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ.  ತಂದೆ ಎಸ್.ಪಿ. ಪಾಯಪ್ಪಶೆಟ್ಟಿ, ತಾಯಿ ಜಿನ್ನಮ್ಮ. ಪ್ರಾರಂಭಿಕ ಶಿಕ್ಷಣ ಹೊಸನಗರದಲ್ಲಿ. ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಿಂದ ಬಿ.ಎಸ್ಸಿ ಪದವಿ ಮತ್ತು ನ್ಯಾಷನಲ್ ಕಾಲೇಜ್ ಆಫ್ ಎಜುಕೇಷನ್‌ನಿಂದ ಬಿ.ಇಡಿ. ಪದವಿಯನ್ನೂ,. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಹಾಗೂ ‘‘ಜೈನ ಜನಪದ ಸಾಹಿತ್ಯ-ಸಂಪಾದನೆ ಹಾಗೂ ಅಧ್ಯಯನ’’ ಪ್ರಬಂದ ಮಂಡಿಸಿ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ ಪಡೆದಿದ್ದಾರೆ.  ಹೈಸ್ಕೂಲು ಅಧ್ಯಾಪಕರಾಗಿ ಪಿಎಚ್.ಡಿ. ಪದವಿಗಳಿಸಿದ ರಾಜ್ಯದ ...

READ MORE

Related Books