
ಕವಿ ಜಿ.ಎಸ್. ಶಿವರುದ್ರಪ್ಪ ಅವರ ಕೃತಿ-ಎರಡು ಪ್ರವಾಸ ಕಥನಗಳು. ಅಮೆರಿಕದಲ್ಲಿ ಕನ್ನಡಿಗ, ಗಂಗೆಯ ಶಿಖರಗಳಲ್ಲಿ ಪ್ರವಾಸ ಕಥನಗಳು ಹೀಗೆ ವಿವಿಧ ಪ್ರವಾಸ ಕಥನಗಳ ದಟ್ಟ ಅನುಭವವನ್ನು ಕಟ್ಟಿಕೊಟ್ಟಿರುವ ಲೇಖಕರು, ಈ ಕೃತಿಯಲ್ಲಿ ಮಾಸ್ಕೋದಲ್ಲಿ 22 ದಿನ ಹಾಗೂ ಇಂಗ್ಲೆಂಡಿನಲ್ಲಿ ಚಾತುರ್ಮಾಸ ಎಂಬ ಶೀರ್ಷಿಕೆಯಡಿ ಎರಡು ದೇಶಗಳಲ್ಲಿಯ ತಮ್ಮ ಅನುಭವ ಕಥನವನ್ನು ಕನ್ನಡ ಓದುಗರಿಗೆ ನೀಡಿದ್ದಾರೆ. ಇವರ ಪ್ರವಾಸ ಕಥನ ಸಾಹಿತ್ಯಕ್ಕೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ಸೇರಿದಂತೆ ಪ್ರವಾಸ ಸಾಹಿತ್ಯದಲ್ಲಿ ಇವರ ಕೃತಿಗಳು ಅದ್ವಿತೀಯವಾಗಿ ನಿಲ್ಲುತ್ತವೆ.
©2025 Book Brahma Private Limited.